Black Fungus: ಕರ್ನಾಟಕದಲ್ಲಿ ಒಟ್ಟು 1370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ; 51 ಮಂದಿ ಸಾವು
ರಾಜ್ಯದಲ್ಲಿ ಒಟ್ಟು 1,379 ಪ್ರಕರಣಗಳು ಕಂಡುಬಂದಿದೆ. ಅದರಲ್ಲಿ 27 ರೋಗಿಗಳು ಗುಣಮುಖರಾಗಿದ್ದಾರೆ. 1,292 ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ 51 ರೋಗಿಗಳು ಬಲಿಯಾಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಇದುವರೆಗೆ ಒಟ್ಟು 1,370 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಕೊರೊನಾ ಎರಡನೇ ಅಲೆಯ ತೊಂದರೆಗಳ ಬಳಿಕ ಕಂಡುಬಂದ ಹೊಸದಾದ ಆರೋಗ್ಯ ಸಮಸ್ಯೆ ಇದಾಗಿದ್ದು ಹಲವು ಜನರು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ಮಾತ್ರವಲ್ಲದೆ ಭಾರತದಲ್ಲಿ ವೈಟ್ ಫಂಗಸ್, ಎಲ್ಲೋ ಫಂಗಸ್ ಪ್ರಕರಣವೂ ಕಂಡುಬಂದಿದೆ. ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್‌ಗೆ ತುತ್ತಾದವರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.
ರಾಜ್ಯದಲ್ಲಿ ಒಟ್ಟು 1,379 ಪ್ರಕರಣಗಳು ಕಂಡುಬಂದಿದೆ. ಅದರಲ್ಲಿ 27 ರೋಗಿಗಳು ಗುಣಮುಖರಾಗಿದ್ದಾರೆ. 1,292 ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ 51 ರೋಗಿಗಳು ಬಲಿಯಾಗಿದ್ದಾರೆ.
ಜಿಲ್ಲಾವಾರು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್, ಅಂದರೆ 557 ಕೇಸ್ಗಳು ಕಂಡುಬಂದಿದೆ. ಧಾರವಾಡ 156, ಕಲಬುರಗಿ 104, ಬಾಗಲಕೋಟೆ 70, ವಿಜಯಪುರ 57 ಪ್ರಕರಣ ಪತ್ತೆಯಾಗಿದೆ. ಇವಿಷ್ಟು ಜಿಲ್ಲೆಗಳಲ್ಲಿ 50ಕ್ಕಿಂತಲೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ. ಉಳಿದಂತೆ ಬೆಳಗಾವಿ 47, ರಾಯಚೂರು 46, ಕೋಲಾರ 43, ಶಿವಮೊಗ್ಗದಲ್ಲಿ 38, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ ತಲಾ 35 ಕೇಸ್, ಚಿತ್ರದುರ್ಗ 34, ದಾವಣಗೆರೆಯಲ್ಲಿ 26 ಪ್ರಕರಣ, ಬೆಂಗಳೂರು ಗ್ರಾಮಾಂತರ 20, ಬೀದರ್ 18, ಕೊಪ್ಪಳ 16, ಗದಗ 11, ಉಡುಪಿಯಲ್ಲಿ 10, ತುಮಕೂರು 10, ಹಾಸನ 9, ಹಾವೇರಿ 8, ಬಳ್ಳಾರಿ 6, ಮಂಡ್ಯ, ರಾಮನಗರ, ಯಾದಗಿರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 3 ಪ್ರಕರಣ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಬ್ಲ್ಯಾಕ್ ಫಂಗಸ್ ಪ್ರಕರಣ ಕಂಡುಬಂದಿದೆ.
ಚರ್ಮಕ್ಕೂ ಬ್ಲ್ಯಾಕ್ ಫಂಗಸ್ ಈಗ ಚರ್ಮಕ್ಕೂ ಫಂಗಸ್ ಬರುವುದನ್ನು ಎದುರಿಸುವಂತಾಗಿದೆ. ಅದೂ ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದ್ದು, ಆತಂಕಕಾರಿಯಾಗಿದೆ ಎಂದು ಕಿವಿ, ಮೂಗು ಮತ್ತು ಗಂಟಲು (ಇಎನ್ಟಿ) ತಜ್ಞ ಡಾ. ಎನ್.ಬಿ. ಪ್ರಹ್ಲಾದ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖವಾಗುತ್ತಿದ್ದ ವ್ಯಕ್ತಿಗೆ ಹೊಸದಾಗಿ ಚರ್ಮದ ಮೇಲೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಕರ್ನಾಟಕ ಇಎನ್ಟಿ ಆಸ್ಪತ್ರೆಯಲ್ಲಿ ಈ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು E.N.T ತಜ್ಞ ಪ್ರಹ್ಲಾದ್ ಅವರು ತಿಳಿಸಿದ್ದಾರೆ. ಕೊವಿಡ್ ನಿಂದ ಗುಣಮುಖವಾಗುತ್ತಿದ್ದ ಪಂಚಾಕ್ಷರಪ್ಪ(54) ಎಂಬುವವರಿಗೆ ಚರ್ಮದ ಬ್ಲ್ಯಾಕ್ ಫಂಗಸ್ ದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್‌ಗೆ ಕಲಬುರಗಿ ನಿವೃತ್ತ ಹೆಚ್ಚುವರಿ ಎಸ್ಪಿ ಬಲಿ
Published On - 2:51 pm, Tue, 1 June 21