AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್​ ನ್ಯೂಸ್​ ಕೊಟ್ಟ BMRCL: ನಮ್ಮ ಮೆಟ್ರೋ ಜಾಲ ವಿಸ್ತರಣೆ; ಎಲ್ಲಿಂದ ಎಲ್ಲಿಗೆ ಹೊಸ ಸಂಪರ್ಕ?

ಪ್ರಯಾಣಿಕರಿಗೆ ನಮ್ಮ ಮೆಟ್ರೋ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. ಬೆಂಗಳೂರಿಂದ ಹೊಸ ಏರಿಯಾ ಮತ್ತು ಊರುಗಳಿಗೆ ಮೆಟ್ರೋ ಜಾಲ ವಿಸ್ತರಣೆಯಾಗಲಿದ್ದು, ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಎಂಆರ್​ಸಿಎಲ್ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡ್ತಿದ್ದಂತೆ‌ DPR ಸಿದ್ಧವಾಗಲಿದ್ದು, ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಲಿದೆ.

ಗುಡ್​ ನ್ಯೂಸ್​ ಕೊಟ್ಟ BMRCL: ನಮ್ಮ ಮೆಟ್ರೋ ಜಾಲ ವಿಸ್ತರಣೆ; ಎಲ್ಲಿಂದ ಎಲ್ಲಿಗೆ ಹೊಸ ಸಂಪರ್ಕ?
ನಮ್ಮ ಮೆಟ್ರೋ
Kiran Surya
| Updated By: ಪ್ರಸನ್ನ ಹೆಗಡೆ|

Updated on:Oct 24, 2025 | 3:08 PM

Share

ಬೆಂಗಳೂರು, ಅಕ್ಟೋಬರ್​ 24: ಹಳದಿ ಮಾರ್ಗದ ಕಾರ್ಯಚರಣೆಯ ಆರಂಭದ ಬೆನ್ನಲ್ಲೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ (Namma Metro) ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. ಬೆಂಗಳೂರಿಂದ 8 ಏರಿಯಾ, ಊರುಗಳಿಗೆ ಮೆಟ್ರೋ ವಿಸ್ತರಣೆಗೆ ನಿರ್ಧರಿಸಲಾಗಿದ್ದು, 3A, 4ನೇ ಹಂತದಲ್ಲಿ 236 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಗೆ BMRCL ಮುಂದಾಗಿದೆ. ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ ಗಳು​​ ಸೇರಿ ಪಿಂಕ್, ಆರೆಂಜ್ ಬ್ಲ್ಯೂ ಲೈನ್​ನಿಂದ 203.67 ಕಿಮೀ ಮೆಟ್ರೋ ಜಾಲವಿದೆ. ಇದನ್ನು ಮತ್ತೆ 236 ಕಿಲೋ ಮೀಟರ್​​ ವಿಸ್ತರಣೆ ಮಾಡುವ ಮೂಲಕ ಒಟ್ಟು 450 ಕಿ.ಮೀ.ಗೆ ಹೆಚ್ಚಿಸಲು ವರದಿ ರೆಡಿಯಾಗಿದೆ. ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಎಂಆರ್​ಸಿಎಲ್ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡ್ತಿದ್ದಂತೆ‌ DPR ಸಿದ್ಧವಾಗಲಿದ್ದು, ಅದನ್ನುರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಲಿದೆ.

ಎಲ್ಲಿಂದ ಎಲ್ಲಿಗೆ ಮೆಟ್ರೋ ಸೇವೆ ವಿಸ್ತರಣೆ?

  • ಸಿಲ್ಕ್ ಇನ್ಸ್ಟಿಟ್ಯೂಟ್ TO ಹಾರೋಹಳ್ಳಿ 24 ಕಿ.ಮೀ.
  • ಬೊಮ್ಮಸಂದ್ರ TO ಅತ್ತಿಬೆಲೆ 11 ಕಿ.ಮೀ.
  • ಚಲ್ಲಘಟ್ಟ TO ಬಿಡದಿ 15 ಕಿ.ಮೀ.
  • ಕಡಬಗೆರೆ TO ತಾವರೆಕೆರೆ ವಿಲೇಜ್ 6 ಕಿ.ಮೀ.
  • ಮಾದಾವರ TO ತುಮಕೂರು 59.6 ಕಿ.ಮೀ.
  • ಸರ್ಜಾಪುರ ಟು ಹೆಬ್ಬಾಳ 37 ಕಿ.ಮೀ.
  • ಕೆ.ಆರ್.ಪುರ TO ಹೊಸಕೋಟೆ 16.30 ಕಿ.ಮೀ.
  • ಕಾಳೇನ ಅಗ್ರಹಾರ TO ಜಿಗಣಿ 68 ಕಿ.ಮೀ.

ಇದನ್ನೂ ಓದಿ: ಪೆಟ್ರೋಲ್ ಕದಿಯುವಾಗ ಸಿಕ್ಕಿಬಿದ್ದ ವ್ಯಕ್ತಿ, ಮೆಟ್ರೋ ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಹಲ್ಲೆ

ಮತ್ತೊಂದೆಡೆ ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಈಗಾಗಲೇ BMRCL ಸ್ಪಷ್ಟನೆ ನೀಡಿದ್ದು, ತಾಂತ್ರಿಕವಾಗಿ ಇದು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್  ನಡೆಸಿದ ಅಧ್ಯಯನದ ಪ್ರಕಾರ, 23 ಕಿ.ಮೀ. ಉದ್ದದ ಹೊಸೂರು-ಬೊಮ್ಮಸಂದ್ರ ಕಾರಿಡಾರ್‌ಗೆ 25 ಕೆವಿ ಎಸಿ ಓವರ್‌ಹೆಡ್ ವಿದ್ಯುತ್ ಶಕ್ತಿ ಬಳಕೆಗೆ ಪ್ರಸ್ತಾಪವಿತ್ತು. ಆದರೆ, ನಮ್ಮ ಮೆಟ್ರೋ ಜಾಲ ಬಳಸುತ್ತಿರುವುದು 750 ಕೆವಿ ಡಿಸಿ ವಿದ್ಯುತ್ ಶಕ್ತಿಯಾದ್ದರಿಂದ ಇವುಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಈ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆ ಸಂಯೋಜನೆ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ BMRCL ಈಗಾಲೇ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Fri, 24 October 25