AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka News Live: ವಿಧಾನಪರಿಷತ್ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್ ದರ್ಬಾರ್! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Breaking News Today Live Updates:ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಧಿಸಿದ ಜಯಭೇರಿ, ರಾಜ್ಯದ ಹವಾಮಾನ ವರದಿ ಹಾಗೂ ಬೆಂಗಳೂರಿನಲ್ಲಿ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಕುರಿತ ಜಿಬಿಎ ನಿರಾಸಕ್ತಿಯ ಪ್ರಮುಖ ಸುದ್ದಿಗಳ ಬ್ರೇಕಿಂಗ್ ಲೈವ್ ಅಪ್‌ಡೇಟ್‌ಗಳು ಇಲ್ಲಿ ಲಭ್ಯವಿವೆ.

Karnataka News Live: ವಿಧಾನಪರಿಷತ್ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್ ದರ್ಬಾರ್! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಭಾವನಾ ಹೆಗಡೆ
|

Updated on:Oct 28, 2026 | 9:46 AM

Share

LIVE NEWS & UPDATES

  • 28 Oct 2026 09:46 AM (IST)

    ‘ರಾಮಾಯಣ’ ಅಬ್ಬರಕ್ಕೆ ಗಾಡ್ಜಿಲ್ಲಾ ಸಿನಿಮಾ ಮುಂದಕ್ಕೆ? ಯಶ್-ರಣಬೀರ್ ಚಿತ್ರದ ಪ್ರಭಾವ!

    ಭಾರತದಲ್ಲಿ ಐಮ್ಯಾಕ್ಸ್ (IMAX) ಸ್ಕ್ರೀನ್‌ಗಳ ಕೊರತೆಯಿಂದಾಗಿ ‘ಗಾಡ್ಜಿಲ್ಲಾ ಮೈನಸ್ ಜೀರೋ’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಈ ಬೆಳವಣಿಗೆಯು ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಆರಂಭಿಕ ಬಾಕ್ಸ್ ಆಫೀಸ್ ಗಳಿಕೆಗೆ ದೊಡ್ಡ ವರದಾನವಾಗಲಿದ್ದು, ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

  • 28 Oct 2026 09:44 AM (IST)

    ಅಭಿಷೇಕ್ ಆರ್ಭಟಕ್ಕೆ ಕಿಂಗ್ ಕೊಹ್ಲಿ ದಾಖಲೆ ಧೂಳೀಪಟ: 38 ಎಸೆತಗಳಲ್ಲಿ ಭರ್ಜರಿ ಶತಕ!

    ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಆರಂಭಿಕ ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 11 ಸಿಕ್ಸರ್, 9 ಫೋರ್‌ಗಳೊಂದಿಗೆ 113 ರನ್ ಚಚ್ಚಿದ್ದಾರೆ. ಈ ಭರ್ಜರಿ ಶತಕದೊಂದಿಗೆ ಅಭಿಷೇಕ್, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ರಮುಖ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾರೆ. ಮತ್ತಷ್ಟು ಓದಿ

  • 28 Oct 2026 09:43 AM (IST)

    ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಗ್ರ್ಯಾಂಡ್ ಎಂಟ್ರಿ: ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ!

    ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ಹಾಗೂ ಸೌಂದರ್ಯಾ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಅವರನ್ನು ಅಕ್ಕರೆಯಿಂದ ಸ್ವಾಗತಿಸಿದ್ದು, ರಕ್ಷಿತಾ ಆಗಮನದಿಂದ ಮನೆಯಲ್ಲಿ ಹೊಸ ಸಂಚಲನ ಹಾಗೂ ಉತ್ಸಾಹ ಮೂಡಿದೆ.

  • 28 Oct 2026 09:40 AM (IST)

    ರೈಲ್ವೇ ಪ್ರಯಾಣಿಕರಿಗೆ ಬಿಗ್ ಆಫರ್: ಕೌಂಟರ್ ಟಿಕೆಟ್‌ಗಳಿಗೂ 10 ಲಕ್ಷ ಅಪಘಾತ ವಿಮೆ!

    ಆನ್‌ಲೈನ್ ಜೊತೆಗೆ ಕೌಂಟರ್ ಟಿಕೆಟ್‌ಗಳಿಗೂ 10 ಲಕ್ಷ ರೂ. ಅಪಘಾತ ವಿಮೆಯನ್ನು ರೈಲ್ವೇ ಮಂಡಳಿ ವಿಸ್ತರಿಸಿದೆ. ಡಿಜಿಟಲ್ ಪಾವತಿ ಮೂಲಕ ಕೇವಲ 45 ಪೈಸೆ ಪ್ರೀಮಿಯಂ ಪಾವತಿಸಿ ಈ ಸೌಲಭ್ಯ ಪಡೆಯಬಹುದು. ಕ್ಯಾಶ್‌ಲೆಸ್ ವ್ಯವಹಾರ ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಆರ್ಥಿಕ ಭದ್ರತೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮತ್ತಷ್ಟು ಓದಿ

  • 28 Oct 2026 09:38 AM (IST)

    ವೀರ ಪೈಲಟ್ ಸ್ಮಿತ್ ಮಚ್ಚರ್‌ಗೆ ಯುಎಇ ಗೌರವ

    ವಿಮಾನದ ಕಾಕ್‌ಪಿಟ್‌ನಲ್ಲಿ ದಾಳಿಗೆ ಒಳಗಾಗಿ ಗಾಯಗೊಂಡರೂ ಧೈರ್ಯದಿಂದ ಬಾಗಿಲು ತೆರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಯುಎಇ ಗೌರವಿಸಿದೆ. ಇಸ್ರೇಲ್ ನಾಗರಿಕ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ಅವರ ಧೈರ್ಯಕ್ಕೆ ಜಾಗತಿಕವಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮತ್ತಷ್ಟು ಓದಿ

  • 28 Oct 2026 09:35 AM (IST)

    ಕರ್ನಾಟಕಕ್ಕಿಲ್ಲ ‘ಅರ್ನಬ್’ ಚಂಡಮಾರುತದ ಭೀತಿ

    ‘ಅರ್ನಬ್’ ಚಂಡಮಾರುತವು ಆಂಧ್ರಪ್ರದೇಶ ಹಾಗೂ ಒಡಿಶಾ ಮೂಲಕ ಉತ್ತರ ಭಾರತದತ್ತ ಸಾಗಲಿದ್ದು, ಕರ್ನಾಟಕದ ಮೇಲೆ ಇದರ ನೇರ ಪರಿಣಾಮವಿರುವುದಿಲ್ಲ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಟಿವಿ9ಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಮೋಡಮುಸುಕಿದ ವಾತಾವರಣವಿದ್ದು, ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯಿದೆ

  • 28 Oct 2026 08:48 AM (IST)

    ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್: ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

    ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಮಾಡಿ ಕಿಕ್ ಹೊಡೆಯುವಾಗ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಭಸ್ಮವಾಗಿದೆ. ಕಬ್ಬಿಣದ ಚೈನ್‌ನಿಂದ ಬೈಕ್ ಹೊರ ಎಳೆದು ಬೆಂಕಿ ನಂದಿಸಿದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Breaking News Today Live Updates in Kannada: ಕರ್ನಾಟಕ ವಿಧಾನಪರಿಷತ್‌ನ 4 ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮೇಲುಗೈ ಸಾಧಿಸಿದ್ದು, ಎ.ಪಿ. ರಂಗನಾಥ್, ಶಶೀಲ್ ಜಿ. ನಮೋಶಿ ಹಾಗೂ ಎಸ್.ವಿ. ಸಂಕನೂರು, ಕೆ.ಎಂ. ಸುರೇಶ್ ಗೆಲುವು ದಾಖಲಿಸಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಅಕ್ಟೋಬರ್ 29ರಂದು ಉತ್ತರ ಕರ್ನಾಟಕ ಹಾಗೂ ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಇನ್ನು ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ ಮತ್ತು ಬಸವನಗುಡಿ ಸೇರಿದಂತೆ ಹಲವೆಡೆ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಜಿಬಿಎ ನಿರಾಸಕ್ತಿ ತೋರಿದ್ದು, ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE TV

Published On - Oct 28,2026 8:48 AM

Follow Us