AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡು ಮತ್ತು ಕೊರೊನಾ: ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬ ಕ್ವಿಕ್ ಡಿಟೇಲ್ಸ್ ಇಲ್ಲಿದೆ

ಕುತೂಹಲಕಾರಿ ಅಂಶವೆಂದರೆ ಈಗ ಕಂಡುಬರುತ್ತಿರುವ ಪ್ರಕರಣಗಳಲ್ಲಿ ಕೊರೊನಾ ಸೋಂಕಿನ ಯಾವುದೇ ಪ್ರಾಥಮಿಕ ಲಕ್ಷಣಗಳಿಲ್ಲದವರಲ್ಲಿಯೇ ಪಾಸಿಟವ್ ಪತ್ತೆಯಾಗುವುದು ಜಾಸ್ತಿಯಾಗಿದೆ.

ಕರುನಾಡು ಮತ್ತು ಕೊರೊನಾ: ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬ ಕ್ವಿಕ್ ಡಿಟೇಲ್ಸ್ ಇಲ್ಲಿದೆ
Skanda
| Edited By: |

Updated on: Nov 26, 2020 | 6:41 PM

Share

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19ಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರ ಪ್ರತಿದಿನ ಅಂಕಿ ಅಂಶಗಳ ಸಮೇತ ನೀಡುತ್ತಿದೆ. ನಿನ್ನೆಯ (ನ.26) ತನಕ ಕರ್ನಾಟದಲ್ಲಿ ಎಷ್ಟು ಸಾವುಗಳಾಗಿವೆ, ಎಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಯಾವ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರಿದ್ದಾರೆ ಎಂಬಿತ್ಯಾದಿ ವಿವರಗಳ ಕ್ವಿಕ್ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕದಲ್ಲಿ ಆರಂಭದಿಂದ ನಿನ್ನೆ ಸಂಜೆಯ ತನಕ ದಾಖಲಾದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,78,055. ಇದರಲ್ಲಿ 8,41,432 ಜನ ಗುಣಮುಖರಾಗಿದ್ದಾರೆ. 11,714ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 1,781 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದೊಂದು ವಾರದ ಅವಧಿಯಲ್ಲಿ ಅತ್ಯಧಿಕ ಹೊಸ ಪ್ರಕರಣಗಳು ಪತ್ತೆಯಾಗಿರುವುದರಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿದ್ದರೆ ಹಾವೇರಿ ಕೊನೆಯ ಸ್ಥಾನದಲ್ಲಿದೆ. ಮೃತರರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Covid-19 ಸೋಂಕಿಗೆ ತುತ್ತಾಗಿರುವವರಲ್ಲಿ 21-30 ವರ್ಷದ ಯುವ ಜನತೆಯೇ ಹೆಚ್ಚಿದ್ದಾರೆ. ಇದುವರೆಗೆ ಒಟ್ಟು 1,92,111 ಯುವಕ, ಯುವತಿಯರಲ್ಲಿ ಸೋಂಕು ಪತ್ತೆಯಾಗಿದೆ. 31-40 ವರ್ಷದವರಲ್ಲಿ 1,90,033, 41-50 ವರ್ಷದವರಲ್ಲಿ 1,55,431, 51-60 ವರ್ಷದವರಲ್ಲಿ 1,25,179, 60ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 1,19,620 ಕೇಸ್​ಗಳು ಪತ್ತೆಯಾಗಿದ್ದರೆ 11-20 ವಯೋಮಾನದ ಮಕ್ಕಳಲ್ಲಿ 67,649 ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 30,256 ಪ್ರಕರಣಗಳು ದಾಖಲಾಗಿವೆ.

ಕೊಡಗಿನಲ್ಲಿ ಅತಿ ವೇಗವಾಗಿ ಕೇವಲ 58 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದರೆ ಚಿತ್ರದುರ್ಗದಲ್ಲಿ 60, ಬೆಂಗಳೂರು ಗ್ರಾಮಾಂತರದಲ್ಲಿ 61, ತುಮಕೂರಿನಲ್ಲಿ 65 ದಿನಗಳ ಅವಧಿಯಲ್ಲಿ ಪ್ರಕರಣಗಳು ದುಪ್ಪಟ್ಟಾಗಿವೆ. ಪಟ್ಟಿಯಲ್ಲಿ ಬೀದರ್​ ಕೊನೆಯ ಸ್ಥಾನದಲ್ಲಿದ್ದು ಅಲ್ಲಿ ಕೊರೊನಾ ಕೇಸ್ ಎರಡು ಪಟ್ಟಾಗಲು ತೆಗೆದುಕೊಂಡ ಅವಧಿ 102 ದಿನ. ಒಟ್ಟಾರೆ ಕರ್ನಾಟಕದಲ್ಲಿ 76 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.

ಪ್ರಸ್ತುತ ಬೆಂಗಳೂರು ನಗರದಲ್ಲಿ ಬರೋಬ್ಬರಿ 22,094 ಜನ ಕ್ವಾರಂಟೈನ್​ನಲ್ಲಿದ್ದು ನಂತರದ ಸ್ಥಾನದಲ್ಲಿರುವ ದಕ್ಷಿಣ ಕನ್ನಡದಲ್ಲಿ 2,792, ಮೈಸೂರಿನಲ್ಲಿ 2,585, ಬೆಂಗಳೂರು ಗ್ರಾಮಾಂತರದಲ್ಲಿ 1,299, ಉಡುಪಿಯಲ್ಲಿ 1,285 ಜನ ಕ್ವಾರಂಟೈನ್ ವಾಸ ಮಾಡುತ್ತಿದ್ದಾರೆ.

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಈಗ ಕಂಡುಬರುತ್ತಿರುವ ಪ್ರಕರಣಗಳಲ್ಲಿ Corona virus ಸೋಂಕಿನ ಯಾವುದೇ ಪ್ರಾಥಮಿಕ ಲಕ್ಷಣಗಳಿಲ್ಲದವರಲ್ಲಿಯೇ ಪಾಸಿಟವ್ ಪತ್ತೆಯಾಗುವುದು ಜಾಸ್ತಿಯಾಗಿದೆ.