ಯಡಿಯೂರಪ್ಪ ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ: ರುದ್ರಭೂಮಿಗೆ ಈಗ ಗುದ್ದಲಿ ಪೂಜೆ

ಶಿವರಾಮ ಕಾರಂತ ಬಿಡಿಎ ನೋಟಿಫಿಕೇಷನ್ ಮಾಡಿದ್ದ ಜಾಗವನ್ನು 2008 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರು ಮಾಡಲಾಗಿತ್ತು. ಬಿಎಸ್ ಯಡಿಯೂರಪ್ಪ ಸಂಬಂಧಿ ಜಿ.ಮರಿಸ್ಬಾಮಿ ಒತ್ತಡದಿಂದ ಜಾಗ ಮಂಜೂರು ಮಾಡಲಾಗಿತ್ತು. ಇದೀಗ ಎಂಟು ವರ್ಷಗಳ ಬಳಿಕ ಮೂರು ಎಕರೆ ಜಾಗದಲ್ಲಿ ವೀರಶೈವರಿಗೆ ರುದ್ರಭೂಮಿಯಲ್ಲಿ ಗುದ್ದಲಿ ಪೂಜೆ ಮಾಡಲಾಗಿದೆ.

ಯಡಿಯೂರಪ್ಪ ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ: ರುದ್ರಭೂಮಿಗೆ ಈಗ ಗುದ್ದಲಿ ಪೂಜೆ
ಯಡಿಯೂರಪ್ಪ ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ, ರುದ್ರಭೂಮಿಗೆ ಈಗ ಗುದ್ದಲಿ ಪೂಜೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2024 | 6:58 PM

ನೆಲಮಂಗಲ, ಜುಲೈ 29: ಬಿಎಸ್​ ಯಡಿಯೂರಪ್ಪ (BS Yediyurappa) ಮಂಜೂರು ಮಾಡಿದ್ದ ಜಾಗ 8 ವರ್ಷಗಳ ಬಳಿಕ ಪತ್ತೆ ಆಗಿದ್ದು, ಇದೀಗ ರುದ್ರಭೂಮಿಗೆ (Rudrabhoomi) ಗುದ್ದಲಿ ಪೂಜೆ ನೆರವೆರಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯ ಸರ್ವೆ ನಂಬರ್‌ 19ರಲ್ಲಿ 3 ಎಕರೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಮೂರು ಎಕರೆ ಜಾಗದಲ್ಲಿ ಇಂದು ವೀರಶೈವ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್​ನಿಂದ ಗುದ್ದಲಿ ಪೂಜೆ ಮಾಡಲಾಗಿದೆ.

ಶಿವರಾಮ ಕಾರಂತ ಬಿಡಿಎ ನೋಟಿಫಿಕೇಷನ್ ಮಾಡಿದ್ದ ಜಾಗ. 2008 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರು ಮಾಡಲಾಗಿತ್ತು. ಬಿಎಸ್ ಯಡಿಯೂರಪ್ಪ ಸಂಬಂಧಿ ಜಿ.ಮರಿಸ್ಬಾಮಿ ಒತ್ತಡದಿಂದ ಜಾಗ ಮಂಜೂರು ಮಾಡಲಾಗಿತ್ತು.

ಉಳಿದ ಸಮುದಾಯದವರ ಕೆಂಗಣ್ಣಿಗೆ ಗುರಿಯಾದ ರುದ್ರಭೂಮಿ ಪೂಜೆ

ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯ ಸರ್ವೆ ನಂಬರ್‌ 19ರಲ್ಲಿ 3 ಎಕರೆ ಜಾಗದಲ್ಲಿ ಕೇವಲ ಒಂದು ಸಮುದಾಯಕ್ಕೆ ಕೋಟ್ಯಂತರ ಮೌಲ್ಯದ ರುದ್ರಭೂಮಿ ಮಂಜೂರು ಮಾಡಿರುವುದು ಸದ್ಯ ಉಳಿದ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದೆ.

ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಒದ್ದಾಟ: ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಅನ್ನೂ ಈ ಗ್ರಾಮದಲ್ಲಿ ಕಳೆದ ಹಲವು ದಶಕಗಳಿಂದ ಅಂತ್ಯ ಸಂಸ್ಕಾರ ಮಾಡಿಕೊಂಡು ಬರ್ತಿದ್ದು ಕಳೆದ ಮೂರು ತಿ‌ಂಗಳಿಂದೆ ಇದ್ದ ಸ್ಮಶಾನವನ್ನ ಖಾಸಗಿಯವರು ನಮಗೆ ಸೇರಿದ್ದು ಅಂತ ಸಮಾಧಿಗಳನ್ನ ಕಿತ್ತು ಹಾಕಿದ್ರಂತೆ. ಹೀಗಾಗಿ ಅಂದಿನಿಂದ ಗ್ರಾಮದ ದಲಿತ ಕುಟುಂಬಗಳಿಗೆ ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅವ್ಯವಸ್ಥೆ ಅನಾವರಣ

ಹಲವು ಭಾರಿ ಅಧಿಕಾರಿಗಳಿಗೆ ಸ್ಮಶಾನ ಭೂಮಿ ಕಬಳಿಕೆ ಮಾಡಿದ್ದು ಬಿಡಿಸಿಕೊಡುವಂತೆ ಮನವಿ ಮಾಡಿದ್ರಂತೆ. ಆದರೆ ಹಲವು ಭಾರಿ ಮನವಿ ಮಾಡಿದ್ರು ಅಧಿಕಾರಿಗಳು ಸ್ಪಂದಿಸಿಲ್ಲ. ಗ್ರಾಮದಲ್ಲಿ ದೇವರಾಜ್ ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ ಅಂತ ಆ್ಯಂಬುಲೇನ್ಸ್ ಮೂಲಕ ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಶವ ತಂದು ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನೆಗೆ ಮುಂದಾಗ್ತಿದ್ದಂತೆ ಎಚ್ಚೆತ್ತ ದೊಡ್ಡಬಳ್ಳಾಪುರ ಎಸಿ ಮತ್ತು ತಹಶಿಲ್ದಾರ್ ಸ್ಥಳಕ್ಕೆ ದೌಡಾಯಿಸಿ ಬಂದು ಗ್ರಾಮಸ್ಥರ ಮನವೊಲಿಸುವ ಯತ್ನಿಸಿದರು. ಆದರೆ ಕಳೆದ ಹಲವು ತಿಂಗಳುಗಳಿಂದ ಸ್ಮಶಾನ ಜಾಗಕ್ಕಾಗಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊ‌ಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.