ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾದ ಉದಾಹರಣೆ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ; ಯಡಿಯೂರಪ್ಪ ಸವಾಲು

ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾದ ಉದಾಹರಣೆ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ; ಯಡಿಯೂರಪ್ಪ ಸವಾಲು
ಬಿಎಸ್ ಯಡಿಯೂರಪ್ಪ

ನಾನು ಸಿಎಂ ಆದಾಗಲೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವ ಮಾಡಿಲ್ಲ. ಕರ್ನಾಟಕದ ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾಗಿದೆ ಎಂದು ಒಂದು ಉದಾಹರಣೆ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

TV9kannada Web Team

| Edited By: Sushma Chakre

Oct 21, 2021 | 8:30 PM

ವಿಜಯಪುರ: ಮುಸ್ಲಿಂ ಬಂಧುಗಳಿಗೆ ನಾನು ಬಹಿರಂಗವಾಗಿಯೇ ಪ್ರಶ್ನೆಯೊಂದನ್ನು ಕೇಳಲು ಬಯಸ್ತೇನೆ. ನಾನು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ ಉದಾಹರಣೆ ಕೊಡಿ. ಕರ್ನಾಟಕದ ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾಗಿದೆ ಎಂದು ಒಂದು ಉದಾಹರಣೆ ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಎಲ್ಲ ವರ್ಗದ ಜನರನ್ನ ಒಂದೇ ರೀತಿ ನೋಡಿದ್ದಾರೆ. ನಾನು ಸಿಎಂ ಆಗಿದ್ದಾಗಲೂ ಯಾವುದೇ ಭೇದ ಮಾಡಿಲ್ಲ. ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ನೀಡಿ. ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ ಒಂದು ಉದಾಹರಣೆ ಕೊಟ್ಟರೆ ನಾನು‌ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮೋದಿ ಅವರು ಎಲ್ಲ ವರ್ಗದ ಜನರನ್ನು ಒಂದೇ ತಾಯಿ ಮಕ್ಕಳಂತೆ ನೋಡ್ತಿದ್ದಾರೆ. ನಾನು ಸಿಎಂ ಆದ ವೇಳೆಯೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವ ಮಾಡಿಲ್ಲ. ಬಿಜೆಪಿಯ ಐವರು ಸಚಿವರು ಇಲ್ಲಿದ್ದಾರೆ. ಇವರು ಸಿಂದಗಿ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಚೀಲದಲ್ಲಿ ಹಣ ತಂದು ಕೊಡ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು. ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಮೇಲೆ ನಿಮ್ಮ ಅಪಪ್ರಚಾರಗಳಿಗೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಪ್ರತಿದಿನ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದೀರಿ. ಚೀಲದಲ್ಲಿ ಹಣ ತಂದು ಬಿಜೆಪಿ ಕೊಡ್ತಿದೆ ಎಂದು ಹೇಳುತ್ತಿದ್ದೀರಿ. ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು. ಆಮೇಲೆ ನಿಮ್ಮ ಅಪಪ್ರಚಾರಗಳಿಗೆ ತಕ್ಕ ಉತ್ತರ ಕೊಡುತ್ತೇವೆ. ಹೆಣ್ಣು ಹುಟ್ಟಿದರೆ ಕಣ್ಣೀರು ಹಾಕ್ತಿದ್ದ ಕಾಲದಲ್ಲಿ ಅವಳಿಗೆ ಭಾಗ್ಯಲಕ್ಷ್ಮಿ ಎಂದು ಕರೆದಿದ್ದು ಇದೇ ಯಡಿಯೂರಪ್ಪ. ರೈತರ ಪಂಪಸೆಟ್ ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ‌ ಮಾಡೋಣ. ಸಿದ್ದರಾಮಯ್ಯ ಅದೇ ಸಮುದಾಯದವರು ಆಗಿದ್ದರೂ ಅಭಿವೃದ್ಧಿ ಮಾಡಿಲ್ಲ. ಆದರೆ ಈ ನಿಮ್ಮ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಕೋಟಿ ಖರ್ಚು ಮಾಡಿ ಕಾಗಿನೆಲೆ ಅಭಿವೃದ್ಧಿ ಮಾಡಿದ್ದೇನೆ. ನಿನ್ನೆ ಹಾಗೂ ಇಂದು ನಾನು ಸಭೆ ನಡೆಸಿ, ಸೇರಿದ ಜನಸ್ತೋಮ ನೋಡಿದಾಗಲೇ ನೀವು ಬಿಜೆಪಿಯನ್ನು ಖಂಡಿತ ಗೆಲ್ಲಿಸುತ್ತೀರಿ ಎಂಬುದು ಗೊತ್ತಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: BS Yediyurappa: ‘ಹಣ, ಹೆಂಡದ ಬಲದಿಂದ ಕಾಂಗ್ರೆಸ್ ಪಕ್ಷ ದೇಶ ಆಳುತ್ತಿತ್ತು’; ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ

ಆರ್​ಎಸ್​ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ, ಮುಂದೆ‌ ಹೆಚ್​ಡಿ ಕುಮಾರಸ್ವಾಮಿ ಪಶ್ಚಾತ್ತಾಪ ಪಡುತ್ತಾರೆ -ಬಿ.ಎಸ್. ಯಡಿಯೂರಪ್ಪ

Follow us on

Related Stories

Most Read Stories

Click on your DTH Provider to Add TV9 Kannada