Crime News: ಬೆಂಗಳೂರಿನಲ್ಲಿ ಅಂಬರ್​ಗ್ರೀಸ್ ಮಾರುತ್ತಿದ್ದ ಐವರ ಬಂಧನ

ಬಂಧಿತರಿಂದ ₹ 17 ಕೋಟಿ ಮೌಲ್ಯದ 17 ಕೆಜಿ ಅಂಬರ್​ಗ್ರೀಸ್​ ಜಪ್ತಿ ಮಾಡಲಾಗಿದೆ

Crime News: ಬೆಂಗಳೂರಿನಲ್ಲಿ ಅಂಬರ್​ಗ್ರೀಸ್ ಮಾರುತ್ತಿದ್ದ ಐವರ ಬಂಧನ
ಅಂಬರ್​ಗ್ರೀಸ್ ಮಾರುತ್ತಿದ್ದ ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 21, 2021 | 7:51 PM

ಬೆಂಗಳೂರು: ಅಕ್ರಮವಾಗಿ ಅಂಬರ್​ಗ್ರೀಸ್ ಮಾರುತ್ತಿದ್ದ ಐವರನ್ನು ಮಲ್ಲೇಶ್ವರಂ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಿಂದ ₹ 17 ಕೋಟಿ ಮೌಲ್ಯದ 17 ಕೆಜಿ ಅಂಬರ್​ಗ್ರೀಸ್​ ಜಪ್ತಿ ಮಾಡಲಾಗಿದೆ. ಇವರ ಮೇಲೆ ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪುನೀತ್ ಕುಮಾರ್, ಮಧುಕುಮಾರ್, ನಂದೀಶ್, ಯೋಗೇಶ್, ಗೋಪಾಲ ಬಂಧಿತರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರಸನ್ನನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳು ಹೊರಹಾಕುವ ದ್ರವವನ್ನು ಅಂಬರ್​ಗ್ರೀಸ್ ಎನ್ನುತ್ತಾರೆ. ಸ್ಪರ್ಮ್ ವೇಲ್ ತಿಮಿಂಗಿಲಗಳು ಕಾಟ್ಲಾ ಫಿಶ್, ಸ್ಕ್ಬಿಡ್ ಫಿಶ್​ಗಳನ್ನು ಮಾತ್ರ ಬೇಟೆಯಾಡಿ‌ ತಿನ್ನುತ್ತವೆ. ತಿಂಗಳಾನುಗಟ್ಟಲೆ ಮೀನುಗಳ ಮುಳ್ಳುಗಳು ಜೀರ್ಣವಾಗುವುದಿಲ್ಲ. ಹಲವು ತಿಂಗಳು ಹೊಟ್ಟೆಯಲ್ಲಿರೋದ್ರಿಂದ ರಾಸಾಯನಿಕ‌ ಪ್ರಕ್ರಿಯೆಗೆ ಒಳಪಡುತ್ತದೆ. ನಂತರ ಅದು ಮೇಣದಂತೆ ರಚನೆಯಾಗುತ್ತದೆ. ಈ ಸಂದರ್ಭದಲ್ಲಿ ಅದು ಸುಗಂಧಿತವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಸ್ಪರ್ಮ್ ತಿಮಿಂಗಿಲಗಳು ಹೊಟ್ಟೆಯಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಂತೆ ಇಡೀ ಮೇಣದ ವಸ್ತುವನ್ನ ವಾಂತಿ‌ ಮಾಡುವ ಮೂಲಕ‌ ಹೊರ ಹಾಕುತ್ತದೆ. ಈ ವಾಂತಿಯು ಹಗುರವಾಗಿರುತ್ತದೆ. ಹಾಗಾಗಿ ಆದು ಸಮುದ್ರದಲ್ಲಿ ತೇಲಾಡುತ್ತದೆ. ಈ ವಸ್ತುವಿನ ವೈಜ್ಞಾನಿಕ ಹೆಸರು ಅಂಬರ್​ಗ್ರೀಸ್. ಕಾನೂನು ಪ್ರಕಾರ ಅಂಬರ್​ಗ್ರೀಸ್​ ಮಾರುವಂತಿಲ್ಲ. ಸಂಶೋಧನೆಗಾಗಿ ಮಾತ್ರ ಬಳಸಬಹುದು.

ಕೆರೆಯಲ್ಲಿ ಯುವಕನ ಶವ ಪತ್ತೆ ನೆಲಮಂಗಲ ತಾಲ್ಲೂಕು ಹೊನ್ನಸಂದ್ರದ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಯುವಕನನ್ನು ಕೊಂದು ಕೆರೆಗೆ ಶವ ಎಸೆದಿದ್ದಾರೆ ಎಂದು ಹೇಳಲಾಗಿದೆ.

ಲಾರಿ ಡಿಕ್ಕಿ: ಬೈಕ್ ಸವಾರ ಸಾವು ಚಿತ್ರದುರ್ಗ ಜಿಲ್ಲೆ ಬುಡ್ನಹಟ್ಟಿ ಬಳಿ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ. ಮೃತನನ್ನು ಆನಂದ್ (40) ಎಂದು ಗುರುತಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.

ವಿದ್ಯುತ್ ತಂತಿ ಸ್ಪರ್ಶ: ರೈತ ಸಾವು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಸಮೀಪ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ರೈತ ಮಹೇಶ್ (25) ಮೃತರು. ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವ ವೇಳೆ ದುರ್ಘಟನೆ ಸಂಭವಿಸಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ವ್ಯಕ್ತಿ ಸಾವು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ವರದಾಪುರ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತನ ಹೆಸರು, ವಿಳಾಸ ಪತ್ತೆಯಾಗಿಲ್ಲ. ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ; ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪದಡಿ ಕೋಲಾರದಲ್ಲಿ ಇಬ್ಬರ ಬಂಧನ ಇದನ್ನೂ ಓದಿ: Sperm Whale Ambergris: ಮತ್ತೆ 80 ಕೋಟಿ ರೂ ಮೌಲ್ಯದ ಅಂಬರ್​​​ಗ್ರೀಸ್​ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು, ಐವರ ಬಂಧನ