ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್​​ಸಿಗ್ನಲ್.. ಯಾರಿಗೆ ಯಾವ ಖಾತೆ? ವಿವರ ಇಲ್ಲಿದೆ

ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಗ್ರೀನ್​​ಸಿಗ್ನಲ್ ಕೊಟ್ಟಿದ್ದಾರೆ. ಸಿಎಂ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್​​ಸಿಗ್ನಲ್.. ಯಾರಿಗೆ ಯಾವ ಖಾತೆ? ವಿವರ ಇಲ್ಲಿದೆ
ರಾಜ್ಯಪಾಲ ವಜುಭಾಯಿ ವಾಲಾ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 21, 2021 | 11:36 AM

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಗ್ರೀನ್​​ಸಿಗ್ನಲ್ ಕೊಟ್ಟಿದ್ದಾರೆ. ಸಿಎಂ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. 7 ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗುತ್ತೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟದ 10 ಸಚಿವರ ಖಾತೆ ಬದಲಾವಣೆಯಾಗುತ್ತೆ. ಸಚಿವರ ಖಾತೆ ಬದಲಾವಣೆ, ಖಾತೆ ಹಂಚಿಕೆಯೊಂದಿಗೆ ಸಂಭಾವ್ಯ ನೂತನ ಪಟ್ಟಿಯನ್ನ ರಾಜಭವನಕ್ಕೆ ಕಳುಹಿಸಲಾಗಿದ್ದು ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಫೈನಲ್ ಆಗಿದೆ.

ಸಿಎಂ ಯಡಿಯೂರಪ್ಪರಿಂದ ಅಂತಿಮಗೊಂಡಿರುವ ಖಾತೆಗಳು
1. ಬಿಎಸ್‌ವೈ-ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ
2. ಉಮೇಶ್ ಕತ್ತಿ-ಆಹಾರ ಮತ್ತು ನಾಗರಿಕ ಪೂರೈಕೆ
3. ಎಸ್.ಅಂಗಾರ-ಮೀನುಗಾರಿಕೆ & ಬಂದರು, ಒಳನಾಡು ಜಲಸಾರಿಗೆ
4. ಬಸವರಾಜ ಬೊಮ್ಮಾಯಿ-ಗೃಹ ಖಾತೆ, ಕಾನೂನು & ಸಂಸದೀಯ
5. ಜೆ.ಸಿ.‌ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ಕನ್ನಡ ಸಂಸ್ಕೃತಿ ಖಾತೆ
6. ಸಿ.ಸಿ.ಪಾಟೀಲ್-ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ
7. ಅರವಿಂದ ಲಿಂಬಾವಳಿ-ಅರಣ್ಯ ಇಲಾಖೆ
8. ಮುರುಗೇಶ್ ನಿರಾಣಿ-ಗಣಿ ಮತ್ತು ಭೂವಿಜ್ಞಾನ ಇಲಾಖೆ
9. ಎಂಟಿಬಿ ನಾಗರಾಜ್-ಅಬಕಾರಿ ಇಲಾಖೆ
10. ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ
11. ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
12. ಆನಂದ್ ಸಿಂಗ್-ಪ್ರವಾಸೋದ್ಯಮ, ಪರಿಸರ ಇಲಾಖೆ
13. ಸಿ.ಪಿ.ಯೋಗೇಶ್ವರ್-ಸಣ್ಣ ನೀರಾವರಿ ಇಲಾಖೆ
14. ಪ್ರಭು ಚೌಹಾಣ್-ಪಶುಸಂಗೋಪನೆ ಇಲಾಖೆ
15. ಆರ್.ಶಂಕರ್-ಪೌರಾಡಳಿತ ಮತ್ತು ರೇಷ್ಮೆ ಇಲಾಖೆ
16. ಗೋಪಾಲಯ್ಯ-ತೋಟಗಾರಿಕೆ ಮತ್ತು ಸಕ್ಕರೆ
17. ನಾರಾಯಣ ಗೌಡ-ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್

Karnataka BS Yediyurappa Cabinet Expansion ಮೂರನೇ ಬಾರಿಗೆ ವಿಸ್ತರಣೆಗೊಂಡ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 7 ಮಂದಿ ಸೇರ್ಪಡೆ, ಯಾರವರು?

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us