‘HDKಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ’ ಸಚಿವ ರಾಮುಲು ಹೀಗೆ ಗುಡುಗಿದ್ಯಾಕೆ?

‘HDKಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ' ಸಚಿವ ರಾಮುಲು ಹೀಗೆ ಗುಡುಗಿದ್ಯಾಕೆ?

ಬಾಗಲಕೋಟೆ: ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಪ್ರಶ್ನೆ ಎತ್ತಿದ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಸಚಿವ ಶ್ರೀರಾಮುಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ವ್ಯಯಕ್ತಿಕ ವಿಚಾರ ಎತ್ತಿದ ಕುಮಾರಸ್ವಾಮಿ ವಿರುದ್ಧ ಬಾಗಲಕೋಟೆಯಲ್ಲಿ ರಾಮುಲು ತೀವ್ರ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ. ಅದು ಅವ್ರ ಸಂಸ್ಕಾರವನ್ನು ತಿಳಿಸುತ್ತದೆ. ಅವ್ರೊಬ್ಬ ಮಾಜಿ ಪ್ರಧಾನ ಮಂತ್ರಿ ಮಗ ಅನ್ನೋದನ್ನ ಮರೆಯಬಾರದು. […]

sadhu srinath

|

Sep 21, 2019 | 3:50 PM

ಬಾಗಲಕೋಟೆ: ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಪ್ರಶ್ನೆ ಎತ್ತಿದ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಸಚಿವ ಶ್ರೀರಾಮುಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಡಿಯೂರಪ್ಪ ವ್ಯಯಕ್ತಿಕ ವಿಚಾರ ಎತ್ತಿದ ಕುಮಾರಸ್ವಾಮಿ ವಿರುದ್ಧ ಬಾಗಲಕೋಟೆಯಲ್ಲಿ ರಾಮುಲು ತೀವ್ರ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ. ಅದು ಅವ್ರ ಸಂಸ್ಕಾರವನ್ನು ತಿಳಿಸುತ್ತದೆ. ಅವ್ರೊಬ್ಬ ಮಾಜಿ ಪ್ರಧಾನ ಮಂತ್ರಿ ಮಗ ಅನ್ನೋದನ್ನ ಮರೆಯಬಾರದು. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಬಾರದು. ಯಡಿಯೂರಪ್ಪ ಬಗ್ಗೆ ಮಾತನಾಡಲು ಹೆಚ್​ಡಿಕೆಗೆ ಯಾವ ನೈತಿಕತೆಯೂ ಇಲ್ಲ ಎಂದು ಎಚ್ಚರಿಸಿದ್ದಾರೆ.

‘ನೀವೊಬ್ಬ ಸಣ್ಣ ರಾಜಕಾರಣಿ, ನೀನೊಬ್ಬ ಹುಡುಗ’ ಯಡಿಯೂರಪ್ಪ ಆಗಲಿ, ಅವ್ರ ಕುಟುಂಬದವ್ರ ತಂಟೆಗೆ ಹೋಗೊ ಕೆಲಸ ಮಾಡಬೇಡಿ. ಇದನ್ನು ನಾನು ತುಂಬಾ ಸೀರಿಯಸ್ಸಾಗಿ ಹೇಳ್ತಿದೀನಿ ಎನ್ನುತ್ತಾ, ಹೆಚ್​ಡಿಕೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶ್ರೀರಾಮುಲು… 40 ವರ್ಷ ರಾಜಕಾರಣದಲ್ಲಿ ದುಡಿದ ಯಡಿಯೂರಪ್ಪ ಬಗ್ಗೆ ಮಾತಾಡ್ತೀರಾ? ನೀವೊಬ್ಬ ಸಣ್ಣ ರಾಜಕಾರಣಿ, ನೀನೊಬ್ಬ ಹುಡುಗ. ಲಾಸ್ಟ್ ಬೆಂಚ್​ನಲ್ಲಿ ಕುಂತ ನೀವು ಪ್ರಧಾನಮಂತ್ರಿ ಮಗ ಅನ್ನೋ ಕಾರಣಕ್ಕೆ ಸಿಎಂ ಆಗಿದ್ರಿ. ಯಡಿಯೂರಪ್ಪ ಆಗಲ್ಲ, ಹೋರಾಟ ಮಾಡಿ ಸಿಎಂ ಆದವ್ರು. ನಿಮ್ಮ ತಂದೆಗೆ ಎಷ್ಟು ಅನುಭವ ಇದೆಯೋ, ಅಷ್ಟೇ ಅನುಭವ ಯಡಿಯೂರಪ್ಪಗೆ ಇದೆ. ಅವ್ರ ತಂದೆ ರಾಜಕಾರಣದಲ್ಲಿ ಎಷ್ಟು ಚತುರತೆ ಹೊಂದಿದ್ದಾರೋ, ಅಷ್ಟೇ ಚತುರತೆ ಯಡಿಯೂರಪ್ಪ ಹೊಂದಿದ್ದಾರೆ. 40 ವರ್ಷಗಳ ಕಾಲ ಹೋರಾಟ ಮಾಡಿ ಮೂರು ಬಾರಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಬಗ್ಗೆ ರಾಜಕೀಯವಾಗಿ ಟೀಕೆ ಮಾಡಿ, ಆದ್ರೆ ಅವ್ರ ಕುಟುಂಬದ ಬಗ್ಗೆ ಮಾತನಾಡಬೇಡಿ ಎಂದರು.

‘ಸಿರಿಯಸ್ ಆಗಿ ಹೇಳ್ತೀದೀನಿ..’ ನಿಮಗೆ ಸಿರಿಯಸ್ ಆಗಿ ಹೇಳ್ತೀದಿನಿ. ನೀವು ಇದೇ ತರ ಮುಂದುವರೆಸಿದ್ರೆ, ಮುಂದಿನ ಪೀಳಿಗೆಗೆ ಕೆಟ್ಟ ಸಂಪ್ರದಾಯ ಹಾಕಿದಂತಾಗುತ್ತದೆ. ನೀವು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡ್ತೀರಿ. ಹಂಗಾಗೋದಿಲ್ಲ, ಹಂಗಾಗೋಕೆ ನಾವು ಬಿಡೋ ಪ್ರಶ್ನೆಯೂ ಇಲ್ಲ. ರಾಜಕಾರಣ ಇರಬಹುದು, ಹೋಗಬಹುದು. ಯಾವುದೂ ಶಾಶ್ವತ ಅಲ್ಲ. ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತರಬೇಡಿ. ನಿಮ್ಮ ಉದ್ದೇಶ ಏನೇ ಇರಲಿ, ರಾಜಕಾರಣಕ್ಕೆ ಕುಟುಂಬವನ್ನು ಎಳೆದು ತರಬಾರದು ಎಂದು ಮಗದೊಮ್ಮೆ ಆರೋಗ್ಯ ಸಚಿವ ಶ್ರೀರಾಮುಲು ಖಂಡತುಂಡವಾಗಿ ಹೇಳಿದರು. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ? ಅವ್ರ ಶಕ್ತಿ ಇದ್ರೆ ಆಗಲಿ. ನಾವು ಬೇಡ ಅನ್ನಲ್ಲ. ಆದ್ರೆ ಯಡಿಯೂರಪ್ಪ ಕುಟುಂಬದ ಮಾತನಾಡೋದು ಸರಿಯಲ್ಲ, ನಿಮಗೆ ಪದೇ ಪದೇ ಹೇಳ್ತೀನಿ ಎಂದು ಎಚ್ಚರಿಕೆ ಮಿಶ್ರಿತ ದನಿಯಲ್ಲಿ ರಾಮುಲು ಕುಮಾರಸ್ವಾಮಿಗೆ ವಾರ್ನ್​ ಮಾಡಿದರು.

Follow us on

Related Stories

Most Read Stories

Click on your DTH Provider to Add TV9 Kannada