ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

Businesswise Gold Reserves: ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಜಸ್ಟ್​ 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ!

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?
ಸೌದಿ ಅರೇಬಿಯಾಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕವಾಗಿದೆ!

Updated on: Jun 21, 2024 | 9:44 AM

ಭಾರತೀಯರಿಗೆ ಚಿನ್ನದ (Gold) ಮೇಲೆ ವಿಪರೀತ ಎನಿಸುವಷ್ಟು ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಮಕ್ಕಳ ವಿದ್ಯಾಭ್ಯಾಸ, ಕೃಷಿಗೆ ಸಹಾಯ, ಹೆಣ್ಣುಮಗುವಿನ ಮದುವೆ, ಉದ್ಯಮ ಆರಂಭಿಸುವುದು (Business), ಮನೆ ಕೊಳ್ಳುವುದು ಅದಕ್ಕೆಲ್ಲಾ ಚಿನ್ನ ಶ್ರೀರಾಮ ರಕ್ಷೆಯಾಗಿ ಕೆಲಸ ಮಾಡುತ್ತದೆ. ಬೆಳೆ ಚೆನ್ನಾಗಿ ಕೈಹಿಡಿದರೆ ರೈತ ಖರೀದಿಸುವುದು ಚಿನ್ನವನ್ನೇ (Personal Finance). ಅದೇ ಚಿನ್ನವನ್ನು ಅಡವಿಟ್ಟು ಬೆಳೆ ಬೆಳೆಯಬಲ್ಲ ಚತುರಮತಿ ನಮ್ಮ ರೈತರು. ಇನ್ನು ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ! ಪ್ರಪಂಚದಲ್ಲಿರುವ ಚಿನ್ನದ ಪೈಕಿ ಅಂದಾಜು ಶೇ.11 ರಷ್ಟು ಚಿನ್ನ ಭಾರತದಲ್ಲಿದೆ! ಈಗೀಗ ದೇಶದಲ್ಲಿ ಉದ್ಯೋಗ ಭದ್ರತೆ ಎಂಬುದು ಸಮಾಧಾನಕರವಾಗಿದೆ. ಆದರೆ 20 ಅಥವಾ 30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಯುವಜನತೆಗೆ ಅದು ತುಂಬಾ ಶೋಚನೀಯ ದಿನಗಳು. ಯಾವಾಗ ನೌಕರಿ ಕಳೆದುಕೊಂಡು ಬದುಕು ತಲೆಕೆಳಗಾಗುತ್ತದೋ ಎಂದು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನೆಲೆಸಿತ್ತು ಆಗ. ಅಂತಹ ಶೋಚನೀಯ ಪರಿಸ್ಥಿತಿಗಳಲ್ಲಿ ಬೇರೊಬ್ಬರ ಬಳಿ ಕೈ ಚಾಚುವ ಬದಲು ಅಷ್ಟೋ ಇಷ್ಟೋ ಚಿನ್ನ ಖರೀದಿಸಿಟ್ಟುಕೊಂಡು ದುರ್ದಿನಗಳಲ್ಲಿ ಅನೇಕ ಭಾರತೀಯರು ಬಚಾವಾಗುತ್ತಿದ್ದರು....

Published On - 4:54 pm, Wed, 12 June 24

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ