Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್

Updated on: Jun 05, 2025 | 1:45 PM

ಪೊಲೀಸ್ ಕಮೀಶನರ್ ತನಗೆ ಫೋನ್ ಮಾಡಿ ಕಾಲ್ತುಳಿತದ ಘಟನೆ ನಡೆದಿದೆ, ಎರಡು ಮೂರು ಜನ ಸತ್ತಿರುವಂತಿದೆ ಎಂದು ಹೇಳಿ ಅದಷ್ಟು ಬೇಗ ಕಾರ್ಯಕ್ರಮ ಮುಗಿಸಲು ಹೇಳಿದರು. ಹಾಗಾಗೇ, ತಾವು ಯಾರಿಗೂ ಭಾಷಣ ಮಾಡುವ ಅವಕಾಶ ನೀಡದೆ, ಯಾವ ಘೋಷಣೆಗಳನ್ನೂ ಮಾಡದೆ ಕೇವಲ ಹತ್ತು-ಹದಿನೈದು ನಿಮಿಷಗಳಲ್ಲಿ ಅಟಗಾರರ ಸತ್ಕಾರ ಸಮಾರಂಭವನ್ನು ಮುಗಿಸಿದ್ದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜೂನ್ 5: ಬುಧವಾರ ಸಾಯಂಕಾಲ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium) ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ದುರ್ಘಟನೆಯಲ್ಲಿ ಜನ ಸತ್ತಿರುವ ವಿಷಯ ತನಗೆ ಗೊತ್ತೇ ಇರಲಿಲ್ಲ, ಮೀಡಿಯಾದವರ ಮೂಲಕವೇ ಗೊತ್ತಾಗಿದ್ದು, ಅದಾದ ಬಳಿಕವೇ ನಗರ ಪೊಲೀಸ್ ಕಮೀಷನರ್ ತನಗೆ ಫೋನ್ ಮಾಡಿ ವಿಷಯ ತಿಳಿಸಿದರು ಎಂದು ಹೇಳಿದರು. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಪ್ಲ್ಯಾನ್ ಸಹ ತನಗೆ ಇರಲಿಲ್ಲ, ಕೆಎಸ್​ಸಿಎ ಪದಾಧಿಕಾರಿಗಳು ಒತ್ತಾಯ ಮಾಡಿದ್ದಕ್ಕಾಗಿ ಹೋಗಬೇಕಾಯಿತು, ಅದರ ಕೆಲ ಅಧಿಕಾರಿಗಳು ತನ್ನ ಜೊತೆಯಲ್ಲೇ ಕಾರಲ್ಲಿದ್ದರು ಎಂದು ಹೇಳಿದ ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  Bengaluru RCB Celebration: ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್: ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More