ಕೊಡಗು: ಆಸ್ತಿ ವಿಚಾರದಲ್ಲಿ ಜಾತಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಹರೀಶ್ ಬಂಧಿತರಾಗಿದ್ದರು. ಪತಿಯ ಬಂಧನವನ್ನು ಖಂಡಿಸಿ ಹರೀಶ್ ಪತ್ನಿ ವಿಮಾ, ಮಡಿಕೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯ ಮುಂದೆ ಧರಣಿಗೆ ಕುಳಿತಿದ್ದಾರೆ.
ಪತಿ ಹರೀಶ್ ಬಂಧನಕ್ಕೆ ಒಳಗಾಗಿದ್ದನ್ನು ಖಂಡಿಸಿದ ಪತ್ನಿ ವಿಮಾ, ಸುಳ್ಳು ಮೊಕದ್ದಮೆ ಆರೋಪ ಹೂಡಿದ್ದಾರೆ ಎಂದು ತನ್ನ ಇಬ್ಬರು ಮಕ್ಕಳೊಡನೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.