ದಾವಣಗೆರೆ, ಜುಲೈ 28: ಜಾತಿ (caste) ಪದ್ಧತಿ ಹೋಗಲ್ಲ ಎಂಬುದು ನನ್ನ ಅಭಿಪ್ರಾಯ. ನಾವು ಬದಲಾಗದಿದ್ದರೆ ಮುಂದೆಯೂ ಗ್ರಾಮಗಳ ಹೊರಗೆ ಇರಬೇಕಾಗುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಛಲವಾದಿ ಮಹಾ ಸಭೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಂಎ, ಪಿಹೆಚ್‌ಡಿ ಮಾಡಿದ್ದೇನೆ, ಆದರೆ ನನ್ನ ಜಾತಿ ನನ್ನ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.
ಪರಮೇಶ್ವರ್ ಬುದ್ಧಿವಂತ ಆದರೆ ಎಸ್ಸಿಗೆ ಸೇರಿದ್ದಾನೆ, ಇಲ್ಲದಿದ್ದರೆ ಎಲ್ಲೋ ಹೋಗುತ್ತಿದ್ದ ಅಂತಾರೆ. ಹೀಗಾಗಿ ಜಾತಿ ನಾಶ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಎಡ, ಬಲ ಹೀಗೆ ಹತ್ತಾರು ಗುಂಪುಗಳನ್ನಾಗಿ ಮಾಡಿದ್ದಾರೆ. ಈ ಜನ್ಮದಲ್ಲಿ ಒಂದಾಗದ ರೀತಿಯಲ್ಲಿ ಒಡೆದು ಹಾಕಿದ್ದಾರೆ ಎಂದಿದ್ದಾರೆ.
ಪರಿಶಿಷ್ಟರ ಹಣ ದುರ್ಬಳಕೆ ವಿಚಾರವಾಗಿ ಮಾತನಾಡಿ ಅವರು, ಪರಿಶಿಷ್ಟರ ಹಣ ದುರ್ಬಳಕೆ ಸುಳ್ಳು ಆರೋಪ. ಸಿಎಂ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಎಸ್ಟಿಪಿ ಟಿಎಸ್ಪಿ ಯೋಜನೆ ಜಾರಿಗೆ ತಂದಿದ್ದೇವೆ. ಎಸ್ಸಿ ಎಸ್ಟಿ ಜಾತಿಯ ಜನ ಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಲಾಗಿದೆ. ಈ ಕಾನೂನಿನಲ್ಲಿ 7ಡಿ ತಿದ್ದುಪಡಿ ಮಾಡಿ ಹಣ ಬೇರೆ ಕಾಮಗಾರಿಗೆ ಬಳಸದಂತೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಗ್ಯಾರಂಟಿಗಳಿಗೆ ಹಿಂದುಳಿದ ವರ್ಗಗಳ ಹಣ ಬಳಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಮಹದೇವಪ್ಪ
ಈ ಹಣ ಗ್ಯಾರಂಟಿ ಯೋಜನೆ ಬಳಸಲಾಗಿದೆ ಎನ್ನಲಾಗಿದೆ. ಗ್ಯಾರಂಟಿಯಲ್ಲಿ ಶೇಖಡವಾರು ಆ ಜನ ಬರುತ್ತಾರೆ. ಈ ವರ್ಷ ಬಳಕೆ ಆಗದೇ ಉಳಿದ ಹಣ ಮುಂದಿನ ವರ್ಷಕ್ಕೆ ವರ್ಗಾಯಿಸಲಾಗುವುದು. ಆದರೆ ಸುಳ್ಳು ಆರೋಪ ಮಾಡಲಾಗುತ್ತಿದೆ ಅದು ತಪ್ಪು ಎಂದು ಹೇಳಿದ್ದಾರೆ.
ಛಲವಾದಿ ಸಮಾಜ ಒನಕೆ ಓಬವ್ವನ ಹೆಸರಿನಲ್ಲಿ ಒಂದು ಸ್ಮರಣೋತ್ಸವ ಎಂಬ ದೊಡ್ಡ ಸಮಾವೇಶ ಮಾಡಲಾಗುದು. ಅದು ಇತಿಹಾಸದಲ್ಲಿ ಮರೆಯಲಾಗದ ಸಮಾವೇಶ ಆಗಬೇಕು. ಇಷ್ಟರಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು. ಬೆಂಗಳೂರು, ಚಿತ್ರದುರ್ಗ ಅಥವಾ ದಾವಣಗೆರೆ ಈ ಮೂರರಲ್ಲಿ ಒಂದು ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮುಡಾ ಹಗರಣ ಖಂಡಿಸಿ ಮೈಸೂರಿಗೆ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ್ದು, ನಾಡಿನ ನೆಲ ಉಳಿಸಲು ನಾವು ಬಳ್ಳಾರಿ ಪಾದಯಾತ್ರೆ ಮಾಡಿದ್ದು, ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲು ಪಾದಯಾತ್ರೆ ಮಾಡಿದ್ದೇವೆ. ಆದರೆ ಬಿಜೆಪಿ ಸತ್ಯಾಂಶ ಇಲ್ಲದ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಉತ್ತರಿಸಿದ್ದಾರೆ. ಆದ್ರೆ ಬಿಜೆಪಿಯವರು ಪಾದಯಾತ್ರೆ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವಾಲ್ಮೀಕಿ ನಿಗಮ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಎಸ್ಐಟಿ ಮಾಡಿದೆ, ಈಗ ಸಿಬಿಐ, ಇಡಿ ತನಿಖೆ ಮಾಡುತ್ತಿದೆ. ಅವ್ಯವಹಾರ ಆಗಿದ್ದರೆ ಸೂಕ್ತ ಕ್ರಮ ಆಗುತ್ತದೆ. ಆದರೆ ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸತ್ಯ ತಿಳಿಸಲು ಸಿಎಂ ನ್ಯಾ.ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದಾರೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.