ಗ್ಯಾರಂಟಿಗಳಿಗೆ ಹಿಂದುಳಿದ ವರ್ಗಗಳ ಹಣ ಬಳಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಮಹದೇವಪ್ಪ
ದಾವಣಗೆರೆ ನಗರದ ಎಸ್ಎಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿನಡೆದ ಛಲವಾದಿ ಮಹಾ ಸಭೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಳಿಕ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ಬಜೆಟ್ನಲ್ಲಿ ನಿಗದಿಯಾಗಿರುವ ಅನುದಾನ ಒಂದು ವೇಳೆ ಬಿಡುಗಡೆಯಾಗದೇ ಇರಬಹುದು, ಆದರೆ ಸ್ಥಗಿತವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದಾವಣಗೆರೆ, ಜುಲೈ 28: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರ್ಕಾರ ಪಂಚ ಗ್ಯಾರಂಟಿ (guarantee) ಯೋಜನೆಗಳಿಗೆ ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದ್ದು, ಇದೀಗ ಇದರ ಬೆನ್ನಲ್ಲೇ ಹಿಂದುಳಿದ ವರ್ಗಗಳ ಇಲಾಖೆಯ ಹಣವನ್ನು ಕೂಡ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ (HC Mahadevappa) ಪ್ರತಿಕ್ರಿಯಿಸಿದ್ದು, ಅನುದಾನ ಬಿಡುಗಡೆಯಾಗದೇ ಇರಬಹುದು, ಆದರೆ ಸ್ಥಗಿತವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್ನಲ್ಲಿ ನಿಗದಿಯಾಗಿರುವ ಅನುದಾನ ಮಂಜೂರಾತಿ ಆಗಲಿದೆ. ಇಲಾಖೆವಾರು ಅನುದಾನ ಬಿಡುಗಡೆ ಆಗಲಿದೆ. ಆದರೆ ಸ್ಥಗಿತವಾಗುವುದಿಲ್ಲ ಎಂದು ಹೇಳಿದ್ದಾರೆ.
ಶಾಲೆ ನಿರ್ಮಾಣಕ್ಕೆ 36 ಕಡೆ ಜಾಗ ಗುರುತು
ಗೋದಾಮಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ 821 ವಸತಿ ಶಾಲೆಗಳಿವೆ. 821 ವಸತಿ ಶಾಲೆಗಳ ಪೈಕಿ 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡವಿದೆ. ಉಳಿದ 201 ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣ ಬಳಸುತ್ತಿರುವುದಕ್ಕೆ ವಿರೋಧವಿದೆ ಎಂದ ಮಾವಳ್ಳಿ ಶಂಕರ್
36 ಕಡೆ ನಮಗೆ ಜಾಗ ಸಿಕ್ಕಿದ್ದು ವಸತಿ ಶಾಲೆ ಕಟ್ಟಡ ನಿರ್ಮಿಸುತ್ತಿದ್ದೇವೆ. ಜಾಗ ಇಲ್ಲದ ಕಡೆ ಜಾಗ ಹುಡುಕಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಎಸ್ಸಿ ಎಸ್ಟಿ ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಎಂದು ಹೇಳಬೇಕು. ಸಂವಿಧಾನದ 17 ಪರಿಚ್ಛೇದದಲ್ಲಿ ಹೇಳಿದಂತೆ ನಡೆದುಕೊಳ್ಳಬೇಕು. ರಾಜಕೀಯ ಅಧಿಕಾರ ನಮ್ಮ ಭವಿಷ್ಯ ಇದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದರೆ ನಾವು ನಮ್ಮ ಹಕ್ಕು ಪಡೆಯಲು ಆಗಲುತ್ತಿಲ್ಲ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ, ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು
ದೇಶದಲ್ಲಿ ಇನ್ನೂ ಸಮಾನತೆ ಬಂದಿಲ್ಲ. ಜಗತ್ತಿಗೆ ಸಮಾನತೆಯ ಪಾಠ ಹೇಳಿದವರು ಡಾ.ಅಂಬೇಡ್ಕರ್. ಇದೇ ಕಾರಣಕ್ಕೆ ವಿಶ್ವ ಸಂಸ್ಥೆ ಡಾ. ಅಂಬೇಡ್ಕರ್ ಜನ್ಮ ದಿನವನ್ನ ಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಶೋಷಿತ ಸಮುದಾಯಗಳು ಒಂದಾಗಿ ಒಗ್ಗಟ್ಟಾಗಿ ವೈಜ್ಞಾನಿಕ ವೈಚಾರಿಕ ಬದುಕು ರೂಪಿಸಿಕೊಳ್ಳಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.