IMA ವಂಚನೆ ಪ್ರಕರಣ: BDA ವಿಶೇಷ ಭೂಸ್ವಾಧೀನಾಧಿಕಾರಿ ಅರೆಸ್ಟ್
ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ CBI ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. CBI ಅಧಿಕಾರಿಗಳಿಂದ BDA ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿದೆ. ಮನ್ಸೂರ್ ಖಾನ್ ಹಣ ರಿಯಲ್ ಎಸ್ಟೇಟ್ಗೂ ಹೂಡಿದ್ದ. ಈ ನಡುವೆ, ಆತನ ಬಳಿ 3-4 ಕೋಟಿ ರೂಪಾಯಿ ಪಡೆದಿದ್ದ ಕುಮಾರ್ ವಿರುದ್ಧ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದರು. ಇದೀಗ, ಅಧಿಕಾರಿಗಳು ಕುಮಾರ್ನನ್ನ ಬಂಧಿಸಿ CBI ವಿಶೇಷ ಕೋರ್ಟ್ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆಂದು ಕುಮಾರ್ನನ್ನು 3 ದಿನಗಳ […]
ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ CBI ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. CBI ಅಧಿಕಾರಿಗಳಿಂದ BDA ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿದೆ.
ಮನ್ಸೂರ್ ಖಾನ್ ಹಣ ರಿಯಲ್ ಎಸ್ಟೇಟ್ಗೂ ಹೂಡಿದ್ದ. ಈ ನಡುವೆ, ಆತನ ಬಳಿ 3-4 ಕೋಟಿ ರೂಪಾಯಿ ಪಡೆದಿದ್ದ ಕುಮಾರ್ ವಿರುದ್ಧ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದರು.
ಇದೀಗ, ಅಧಿಕಾರಿಗಳು ಕುಮಾರ್ನನ್ನ ಬಂಧಿಸಿ CBI ವಿಶೇಷ ಕೋರ್ಟ್ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆಂದು ಕುಮಾರ್ನನ್ನು 3 ದಿನಗಳ ಕಾಲ CBI ಕಸ್ಟಡಿಗೆ ನೀಡಿದೆ
ಮನ್ಸೂರ್ ಖಾನ್ ನ.27ರವರೆಗೆ ಸಿಬಿಐ ವಶಕ್ಕೆ ಇತ್ತ, IMA ಸಂಸ್ಥೆ ಮುಖ್ಯಸ್ಥ ಮನ್ಸೂರ್ ಖಾನ್ನನ್ನ ನವೆಂಬರ್ 27ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ. ನಗರದ ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಐಎಂಎಯಿಂದ ವಂಚನೆ ಪ್ರಕರಣದ ವಿಚಾರಣೆಗಾಗಿ ಮನ್ಸೂರ್ ಖಾನ್ನನ್ನು ಸಿಬಿಐ ಕಸ್ಟಡಿಗೆ ಕೋರ್ಟ್ ನೀಡಿದೆ.
Published On - 5:10 pm, Mon, 23 November 20