ಬೆಂಗಳೂರು: ಕೊವಿಡ್ ಚಿಕಿತ್ಸೆಗೆ ಅಗತ್ಯ ಲಸಿಕೆ ಅಕ್ರಮವಾಗಿ ಸಂಗ್ರಹ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜೇಶ್, ಶಕೀಬ್, ಸೊಹೈಲ್ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ರೆಮ್‌ಡಿಸಿವಿರ್ ಔಷಧವನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಪ್ರತಿ ಇಂಜೆಕ್ಷನ್ 10,500 ರೂ.ಗೆ ಮಾರುತ್ತಿದ್ರು. ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ರೆಮ್‌ಡಿಸಿವಿರ್ ಲಸಿಕೆಯ 11 ಬಾಟಲ್ ವಶಕ್ಕೆ ಪಡೆದಿದ್ದಾರೆ.
ಮಹಾಮಾರಿ ಕೊರೊನಾದಿಂದ ಜನ ನರಳುತ್ತಿದ್ದಾರೆ. ಲಸಿಕೆ ಸಿಗದೆ ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಕ್ರಮವಾಗಿ ಕೊವಿಡ್ ಚಿಕಿತ್ಸೆಗೆ ಬೇಕಿರುವ ರೆಮ್‌ಡಿಸಿವಿರ್ ಔಷಧವನ್ನು ಸಂಗ್ರಹಿಸಿಟ್ಟಿದ್ದಾರೆ. ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಹಣ ಮಾಡಲು ಮುಂದಾಗಿದ್ದಾರೆ. ಸದ್ಯ ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇವರೆಗೆ ಇಂಜೆಕ್ಷನ್ ಸಿಗುತಿದ್ದ ಮೂಲ ಯಾವುದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಬಂಧಿತ ರಾಜೇಶ್ ಗುರುಶ್ರೀ ಮೆಡಿಕಲ್ ನಡೆಸುತಿದ್ದ ಎಂಬ ಮಾಹಿತಿ ಸಿಕ್ಕಿದೆ. ಘಟನೆ ಸಂಬಂಧ ಸದಗುಂಟೆ ಪಾಳ್ಯ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
With reports emerging abt hoarding & blackmarketing of Remdesiver injection reqd for Covid treatment, CCB conducted drive across Bengaluru, arrested 3 accused,having illegal stock of the injection & selling at Rs 10,500, much higher than MRP. @CPBlr @BlrCityPolice pic.twitter.com/e5ifvxUeIM
— Sandeep Patil IPS (@ips_patil) April 18, 2021
ಇದನ್ನೂ ಓದಿ; ದೆಹಲಿಯಲ್ಲಿ ಆಕ್ಸಿಜನ್, ರೆಮ್‌ಡಿಸಿವಿರ್ ಔಷಧಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್