ರೌಡಿಶೀಟರ್ಗಳ ಪರ ಫ್ಯಾನ್ ಪೇಜ್ ತೆರದಿದ್ದರೆ ಎಚ್ಚರ! ನಿಮ್ಮೇಲಿದೆ ಸಿಸಿಬಿ ಕಣ್ಣು
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್ಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಪೇಜ್ ತೆರದು, ಅವರ ಪರವಾಗಿ ಪೋಸ್ಟ್ ಹಾಕುವುದು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಅಪರಾಧ ವಿಭಾಗ ಮಹತ್ವದ ಹೆಜ್ಜೆ ಇರಿಸಿದೆ.
ಬೆಂಗಳೂರು, ಜುಲೈ 05: ರೌಡಿಶೀಟರ್ಗಳ (Rowdy Sheeter) ಪರವಾಗಿ ಸಮಾಜಿಕ ಜಾಲತಾಣದಲ್ಲಿ (Social Media) ತೆರಯಲಾಗಿರುವ ಫ್ಯಾನ್ ಪೇಜ್ಗಳ (Fan Page) ಮೇಲೆ ಸಿಸಿಬಿ (CCB) ಹದ್ದಿನ ಕಣ್ಣಿರಿಸಿದೆ. ರೌಡಿಶೀಟರ್ಗಳ ಹೆಸರು ಬಳಸಿ ಸಾಲು ಸಾಲು ಫ್ಯಾನ್ ಪೇಜ್ಗಳು ತೆಗೆಯುವ ಸಹಚರರು ಅವರಿಗೆ ಬಿಲ್ಡಪ್ ಕೊಟ್ಟು ಪೋಸ್ಟ್ ಹಾಕುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು ಸಿಸಿಬಿ ರೌಡಿ ವಿಂಗ್ ಮುಂದಾಗಿದೆ.
ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ರೌಡಿಶೀಟರ್ಗಳ ಫ್ಯಾನ್ ಪೇಜ್ಗಳು ಹೆಚ್ಚಾಗಿವೆ. ರೌಡಿಗಳಿಗೆ N BOSS, S BOSS ,C BOSS ಅಂತ ಪೇಜ್ ತೆರಯಲಾಗಿದೆ. ಕುಖ್ಯಾತ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನಿಲ, ಸೈಕಲ್ ರವಿ, ಕಾಡುಬೀಸನಹಳ್ಳಿ ರೋಹಿತ, ಸೇರಿದಂತೆ ಹಲವರ ಹೆಸರಲ್ಲಿರುವ ಫ್ಯಾನ್ ಪೇಜ್ಗಳಿವೆ. ಇಂತಹ ಪೇಜ್ ಅನ್ನು ಸಾವಿರಾರು ಯುವಕರು ಫಾಲೋ ಮಾಡುತ್ತಿದ್ದಾರೆ.
ಬೆಂಗಳೂರು ಡಾನ್, ಅಂಡರ್ ವಲ್ಡ್ ಡಾನ್, ಅಂತ ಬಿಲ್ಡಪ್ ಕೊಟ್ಟು ಪೇಜ್ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಬೆಂಕಿ, ಲಾಂಗು ಮಚ್ಚು ಎಫೆಕ್ಟ್ಗಳನ್ನ ಹಾಕಿ ಸಿನಿಮಾ ಸ್ಟೈಲ್ನಲ್ಲಿ ರೌಡಿಗಳಿಗೆ ಬಿಲ್ಡಪ್ ಕೊಡುತ್ತಾರೆ. ಇದು ಅಡ್ಡದಾರಿ ಹಿಡಿಯುತ್ತಿರುವ ಯುವಕರಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಇಂತಹ ಪೇಜ್ಗಳಿಂದಾಗಿ ಯುವಜನತೆ ರೌಡಿಸಂ ನತ್ತ ಆಕರ್ಷಿತರಾಗುತ್ತಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಮೂಲಕ ಶಾಸಕ ಹರೀಶ್ಗೌಡಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಗಳ ಬಂಧನ
ಇಂತಹ ರೌಡಿಶೀಟರ್ ಫ್ಯಾನ್ ಪೇಜ್ಗಳಿಗೆ ಹಲವು ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ಹಲವರು ದೂರು ನೀಡಿದ್ದಾರೆ. ಇಂತಹ ಫ್ಯಾನ್ ಪೇಜ್ಗೆ ಕಡಿವಾಣ ಹಾಕುವಂತೆ ಮನವಿ ಮನವಿ ಮಾಡಿದ್ದಾರೆ.
ಹೀಗಾಗಿ ಇದಕ್ಕೆಲ್ಲ ಕಡಿವಾಣ ಹಾಕಲು ಸಿಸಿಬಿ ಮುಂದಾಗಿದೆ. ಸಿಸಿಬಿ ರೌಡಿ ವಿಂಗ್ ಈಗಾಗಲೆ ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಹಲವು ಪೇಜ್ಗಳನ್ನ ಕ್ಲೋಸ್ ಮಾಡಿಸಿದೆ. ಅಲ್ಲದೆ, ಈ ರೀತಿ ಫ್ಯಾನ್ ಪೇಜ್ ತೆರೆಯುವವರ ವಿರುದ್ಧ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ