ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಕ್ಕೆ ಸಿಡಿ ಯುವತಿ ಸ್ಪಷ್ಟನೆ; ಅಸಲಿಗೆ ಡಿ.ಕೆ.ಶಿ ಈಗ ಎಲ್ಲಿದ್ದಾರೆ? ಅವರ ಮುಂದಿನ ನಡೆಯೇನು?
ಬೆಂಗಳೂರು: ಮಾಜಿ ಸಚಿವ ರಾಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣದಲ್ಲಿ ನಿನ್ನೆ ರಾತ್ರಿ ಏಕಾಏಕಿ ಮೂರನೆಯ ಸಿಡಿ ರಿಲೀಸ್ ಮಾಡಿದ್ದ ಸಿಡಿ ಲೇಡಿ, ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಡಿಯೋದಲ್ಲಿ ಕಾಂಗ್ರೆಸ್ ಶಾಸಕ, ಪ್ರಕರಣದ ಮಹಾನಾಯಕ ಎಂದು ಬಿಂಬಿಸಲಾಗುತ್ತಿರುವ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಇನ್ನೇನು ಡಿ.ಕೆ.ಶಿವಕುಮಾರ್ ಅವರೇ ಪ್ರಕರಣದಲ್ಲಿ ಮಹಾನಾಯಕ ಎಂದು ರಾಜಕೀಯ ವಲಯದಲ್ಲಿ ಬಿರುಸಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ CD ಯಲ್ಲಿದ್ದ ಯುವತಿಯ ಇಂದು ಬೆಳಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ ಕೆಲವು ಸ್ಪಷ್ಟನೆಗಳನ್ನು […]
ಬೆಂಗಳೂರು: ಮಾಜಿ ಸಚಿವ ರಾಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣದಲ್ಲಿ ನಿನ್ನೆ ರಾತ್ರಿ ಏಕಾಏಕಿ ಮೂರನೆಯ ಸಿಡಿ ರಿಲೀಸ್ ಮಾಡಿದ್ದ ಸಿಡಿ ಲೇಡಿ, ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಡಿಯೋದಲ್ಲಿ ಕಾಂಗ್ರೆಸ್ ಶಾಸಕ, ಪ್ರಕರಣದ ಮಹಾನಾಯಕ ಎಂದು ಬಿಂಬಿಸಲಾಗುತ್ತಿರುವ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಇನ್ನೇನು ಡಿ.ಕೆ.ಶಿವಕುಮಾರ್ ಅವರೇ ಪ್ರಕರಣದಲ್ಲಿ ಮಹಾನಾಯಕ ಎಂದು ರಾಜಕೀಯ ವಲಯದಲ್ಲಿ ಬಿರುಸಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ CD ಯಲ್ಲಿದ್ದ ಯುವತಿಯ ಇಂದು ಬೆಳಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ.
ನಿನ್ನೆ ರಿಲೀಸ್ ಆಗಿದ್ದ ಆಡಿಯೋಗೆ ಟಕ್ಕರ್ ಕೊಟ್ಟಿರುವ ಯುವತಿ ಡಿ.ಕೆ.ಶಿವಕುಮಾರ್ ಸಂಪರ್ಕಿಸಲು ಯತ್ನಿಸಿದೆವು. ಆದ್ರೆ ಡಿ.ಕೆ.ಶಿವಕುಮಾರ್‌ರನ್ನು ಭೇಟಿಯಾಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ವಿಡಿಯೋ ಗ್ರಾಫಿಕ್ಸ್ ಎಂಬುದಾಗಿ ಆಡಿಯೋದಲ್ಲಿ ಹೇಳಿದ್ದರ ಬಗ್ಗೆಯೂ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕುಟುಂಬಸ್ಥರು ಅಳುತ್ತಿದ್ದರು. ಹೀಗಾಗಿ ಸಮಾಧಾನ ಮಾಡಿದ್ದೆ. ಕುಟುಂಬಸ್ಥರು ಅಳುತ್ತಿದ್ದರು. ಅವರನ್ನು ಸಮಾಧಾನ ಮಾಡುವ ಸಲುವಾಗಿ ಡಿಕೆಶಿ ಮನೆಗೆ ಹೋಗ್ತಿದ್ದಾಗಿ ಹೇಳಿದ್ದೆ ಎಂದು ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪಕ್ಕೆ ಯುವತಿ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ, ಯುವತಿ ಹಾಗೂ ರಮೇಶ್ ಜಾರಕಿಹೊಳಿ ಮಧ್ಯೆ ಆಡಿಯೊ ಮತ್ತು ವಿಡಿಯೋ ವಾರ್ ಜೋರಾಗಿ ನಡೆದಿದೆ.
ಅಸಲಿಗೆ ಡಿ.ಕೆ.ಶಿ ಈಗ ಎಲ್ಲಿದ್ದಾರೆ? ಅವರ ಮುಂದಿನ ನಡೆಯೇನು? ಈ ಮಧ್ಯೆ, ಡಿ.ಕೆ.ಶಿವಕುಮಾರ್ ಹೈದರಾಬಾದ್ಗೆ ತೆರಳಿದ್ದು, ಇನ್ನೇನು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೆಲವೇ ಕ್ಷಣಗಳಲ್ಲಿ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸಕ್ಕೆ ಮರಳಲಿದ್ದಾರೆ. ಬಳಿಕ ಕೃಷ್ಣಗಿರಿಗೆ ಅಸೆಂಬ್ಲಿ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ಈ ಮಧ್ಯೆ, CD ಲೇಡಿ ಹೇಳಿಕೆ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆಯೂ ಎಂದು ಡಿಕೆಶಿ ಆಪ್ತ ಮೂಲಗಳು ಹೇಳಿವೆ.
CD ಷಡ್ಯಂತ್ರಿಗಳ ಮಹತ್ವದ 11 ಆಡಿಯೋ, ವಿಡಿಯೋ? ಒಂದೊಂದೇ ಆಸ್ತ್ರ ಹೊರಬಿಡ್ತಾರಾ ರಮೇಶ್ ಜಾರಕಿಹೊಳಿ?:
ಇನ್ನು, ಶಾಸಕ ರಮೇಶ್ ಜಾರಕಿಹೊಳಿ CD ಸುದ್ದಿ ಸ್ಫೋಟ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರನ್ನು ಖುದ್ದಾಗಿ ಸಿಡಿ ಯುವತಿಯೇ ಪ್ರಸ್ತಾಪಿಸಿರುವುದರಿಂದ ರಮೇಶ್ ಕೊಂಚ ನಿರಾಳರಾಗಿದ್ದಂತೆ ಕಂಡುಬಂದಿದೆ. ರಮೇಶ್ ಮೂಲಕ ಮಧ್ಯಾಹ್ನ ವೇಳೆಗೆ ಕೇಸ್‌ಗೆ ಮಹತ್ವದ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಇಂದು ಮತ್ತೊಂದು ಆಡಿಯೋ ಬಾಂಬ್ ಸ್ಫೋಟ ಮಾಡುವ ಸಾಧ್ಯತೆಯಿದೆ. ಮಹಾ ಬಾಂಬ್ ಸಿಡಿಸುವುದಾಗಿ ನಿನ್ನೆಯೇ ರಮೇಶ್ ಹೇಳಿದ್ದರು.
ಇಂದು ಮಹಾನಾಯಕನ ಹೆಸರನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ರಮೇಶ್ ಬಳಿ CD ಷಡ್ಯಂತ್ರಿಗಳ ಮಹತ್ವದ 11 ಆಡಿಯೋ- ವಿಡಿಯೋಗಿವೆ ಎನ್ನಲಾಗಿದೆ. ಒಂದೊಂದೇ ಆಸ್ತ್ರ ಹೊರಬಿಡ್ತಾರಾ ರಮೇಶ್ ಜಾರಕಿಹೊಳಿ? ಇದರಿಂದ ಮಹಾನಾಯಕನಿಗೆ ಕಂಟಕವಾಗುತ್ತದಾ? ಸಂಜೆ ವರೆಗೂ ಕಾದು ನೋಡಬೇಕಿದೆ.
Published On - 9:33 am, Sat, 27 March 21