ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪ: ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ ಪ್ರತಿಕ್ರಿಯೆ

ವಿರೋಧ ಪಕ್ಷದ ನಾಯಕರು ತನಗೆ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮಹಿಳೆ ಆಶಯವನ್ನು ಇಟ್ಟು‌ಕೊಂಡಿದ್ದಾರೆ ಎಂದು ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪ: ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 27, 2021 | 10:57 AM

ಆನೇಕಲ್: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ ಪ್ರತಿಕ್ರಿಯೆ ನೀಡಿದ್ದಾರೆ.  ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನ‌ ಮೇಲೆ ನ್ಯಾಯ ಸಮ್ಮತ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸರ್ಕಾರ ಮಹಿಳೆಯರ ಪರವೆಂದು ತೋರಿಸಬೇಕು. ಸಿಡಿ ಬಿಡುಗಡೆ ಮಾಡಿರುವುದು ಡಿ.ಕೆ ಶಿವಕುಮಾರ್ ಎಂಬ ಆರೋಪ ಕೂಡ ಕೇಳಿ ಬಂದಿದೆ. ರಾಜಕೀಯ ವೈರಿಗಳ‌ ಮೇಲೆಯೇ ಆರೋಪ ಮಾಡಬೇಕು ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ವಿ ಪಕ್ಷದ ನಾಯಕರು ತನಗೆ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮಹಿಳೆ ಆಶಯ ಇಟ್ಟು‌ಕೊಂಡಿದ್ದಾರೆ: ಸಂತ್ರಸ್ತ ಮಹಿಳೆ‌ ಸೋಷಿಯಲ್ ಮೀಡಿಯಾದಲ್ಲಿ ತನ್ನ ನೋವನ್ನು ಹೇಳಿದ್ದಾರೆ. ಇದುವರೆಗೂ ಸರ್ಕಾರ ಸಂತ್ರಸ್ತೆ ವಿಚಾರವಾಗಿ ರಕ್ಷಣೆ ಹಾಗೂ ಸಹಾನುಭೂತಿ ವಿಷಯವಾಗಿ ಯಾರೂ ಮಾತಾಡಿಲ್ಲ. ಇದೀಗ ವಿರೋಧ ಪಕ್ಷದ ನಾಯಕರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ತನಗೆ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮಹಿಳೆ ಆಶಯವನ್ನು ಇಟ್ಟು‌ಕೊಂಡಿದ್ದಾರೆ ಎಂದು ಆನೇಕಲ್​ನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಜಾರಕಿಹೊಳಿ ಸರ್ಕಾರ ಬೀಳಿಸುತ್ತೇನೆ ಎಂದು ಎಚ್ಚರ ನೀಡಿರುವ ಬಗ್ಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅದು ಬಿಜೆಪಿ ಪಕ್ಷಕ್ಕೂ ಹಾಗೂ ಅವರ ಶಾಸಕರಿಗೂ ಇರುವ ವಿಚಾರ. ಇಂದು ಸಂತ್ರಸ್ತ ಮಹಿಳೆ ನೀಡಿರುವ ದೂರಿನ‌ ಮೇಲೆ ನ್ಯಾಯ ಸಮ್ಮತ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಸರ್ಕಾರದ ವೈಫಲ್ಯ ದುರಾಡಳಿತಗಳನ್ನು ಎತ್ತಿ ಹಿಡಿಯ ಬೇಕಾಗಿರುವುದು ನಮ್ಮ ಕರ್ತವ್ಯ. ಇದೀಗ ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಸದ್ಯ ಮಹಿಳೆ ಪರ ಹೋರಾಟ ಮಾಡುವುದು ಸರಿ ಎನ್ನಿಸಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ:

ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೊರ್ಟ್ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೊಗುತ್ತೇವೆ – ವಕೀಲ ಜಗದೀಶ್

ಆರೋಪಿ ಜಾರಕಿಹೊಳಿ ಗೂಳಿ ಥರಾ ಓಡಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಅರೆಸ್ಟ್ ಮಾಡಿ: ಸಿಡಿ ಯುವತಿ ಪರ ವಕೀಲ ಎಫ್ ಬಿ ಲೈವ್ ಮೂಲಕ ಆಗ್ರಹ