ಸಿಡಿ ಪ್ರಕರಣ: ಎಸ್​ಐಟಿ ತಾಂತ್ರಿಕ ವಿಭಾಗದ ಮುಂದೆ ಸಿಡಿ ಯುವತಿ ಪೋಷಕರು ಹಾಜರು

ಬೆಂಗಳೂರಿನಲ್ಲಿ ಇರುವ ಎಸ್​ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾಗಿದ್ದು, ಎಸ್‌ಐಟಿಗೆ ಹೇಳಿಕೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಸಿಡಿ ಪ್ರಕರಣ: ಎಸ್​ಐಟಿ ತಾಂತ್ರಿಕ ವಿಭಾಗದ ಮುಂದೆ ಸಿಡಿ ಯುವತಿ ಪೋಷಕರು ಹಾಜರು
ಸಿಡಿ ಯುವತಿಯ ಕುಟುಂಬಸ್ಥರು
Follow us
preethi shettigar
| Updated By: guruganesh bhat

Updated on:Mar 27, 2021 | 1:57 PM

ಬೆಂಗಳೂರು: ಇದೀಗ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಸಮ್ಮುಖದಲ್ಲಿ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಯುವತಿಯ ತಂದೆ- ತಾಯಿ ಮತ್ತು ಸಹೋದರರ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರಿನ ಆಡುಗೋಡಿಯಲ್ಲಿ ಇರುವ ಎಸ್​ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾಗಿರುವ ಯುವತಿ ಪೋಷಕರು ಎಸ್​‌ಐಟಿಗೆ ಹೇಳಿಕೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ ಯುವತಿಯೊಂದಿಗೆ ರಾಸಲೀಲೆ ವಿಡಿಯೋ ಬಹಿರಂಗ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಪೊಲೀಸರು ವಿಡಿಯೋದಲ್ಲಿದ್ದ ಯುವತಿಯ ಅಜ್ಜಿ ಮನೆಯ ನೆರೆಹೊರೆಯವರ ಬಳಿ‌ ಮಾಹಿತಿ ಕಲೆ ಹಾಕಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿರುವ ಯುವತಿಯ ಅಜ್ಜಿ ಮನೆಗೆ ಸಿಸಿಬಿ ಪೊಲೀಸರು ತೆರಳಿದ್ದಾರೆ.

ಯುವತಿಯ ಅಜ್ಜಿ ಮನೆಗೂ ತೆರಳಿದ ಪೊಲೀಸರು

ಪೊಲೀಸರು ಯುವತಿಯ ಇಬ್ಬರು ಸಹೋದರಿಗೆ ಪೊಲೀಸ್ ನೊಟೀಸ್ ನೀಡಲು ಆಗಮಿಸಿದ್ದು, ಈ ಬಳಿಕ ಸಿಸಿಬಿ ತಂಡ ಯುವತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿದೆ. ಕಳೆದ ಮಾರ್ಚ್ 24 ರಂದು ಮಾಹಿತಿ ಕಲೆ ಹಾಕಿದ ಸಿಸಿಬಿ ತಂಡ ವಿಡಿಯೋದಲ್ಲಿರುವ ಯುವತಿ ಅಜ್ಜಿ ಮನೆಗೆ ಬಂದು ಹೋಗುತ್ತಿದ್ದಳಾ? ಯುವತಿ ಅಜ್ಜಿ ಮನೆಗೆ ಯಾವಾಗ ಯಾವಾಗ ಬರುತ್ತಿದ್ದಳು? ಯುವತಿ ಇತ್ತ ಬಂದ ವೇಳೆ ಆಕೆಯನ್ನು ನೋಡಿದ್ದೀರಾ? ಎಂಬಿತ್ಯಾದಿ ಮಾಹಿತಿಯನ್ನು ನೆರೆಹೊರೆಯವರ ಬಳಿ ಕೇಳಿದ್ದಾರೆ.

‘ಯುವತಿ ಬಗ್ಗೆ ಯಾವುದೇ ಮಾಹಿತಿ ನಮಗೆ ಗೊತ್ತಿಲ್ಲ’ ಎಂದು ಸ್ಥಳಿಯರು ಉತ್ತರಿಸಿದ್ದಾರೆ. ನಂತರ ಬೀಗ ಹಾಕಿದ ಸ್ಥಿತಿಯಲ್ಲಿದ್ದ ಅಜ್ಜಿಮನೆ‌ಯ ಕಾಂಪೌಂಡ್​ಗೆ ಯುವತಿ ಸಹೋದರಿಬ್ಬರ ಹೆಸರಿಗೆ ಸಿಸಿಬಿ ಪೊಲೀಸರು ನೊಟೀಸ್ ಅಂಟಿಸಿದ್ದಾರೆ. ಮಾರ್ಚ್ 29 ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟರಾಗೇಷನ್ ಸೆಂಟರ್​ಗೆ ಬಂದು ಹಾಜರಾಗುವಂತೆ ಯುವತಿಯ ಸಹೋದರರಿಗೆ ನೊಟೀಸ್ ನೀಡಲಾಗಿದೆ. ಈ ಹಿಂದೆ ಕಳೆದ ಮಾರ್ಚ್ 14 ರಂದು ಸಹ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಇದೇ ಮನೆಗೆ ನೊಟೀಸ್ ಅಂಟಿಸಿದ್ದರು

ಇಂದು ಬೆಳಿಗ್ಗೆ ಅಷ್ಟೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳುತ್ತಾರೆ. ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳ್ತಾರೆ ಎಂದು ಯುವತಿ ಇಂದು ಬೆಳಗ್ಗೆ ಬಿಡುಗಡೆಯಾದ ವಿಡಿಯೋದಲ್ಲಿ ಹೇಳಿದ್ದರು.

ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಯುವತಿ ತಂದೆ- ತಾಯಿ ಎಸ್​ಐಟಿ ಮುಂದೆ ಹಾಜರಾಗಿದ್ದಾರೆ.

ಈ ಹಿಂದೆ ಕೂಡ ಯುವತಿ ಪೋಷಕರು ಈ ವಿಚಾರವಾಗಿ ಮೌನ ಮುರಿದಿದ್ದರು.  ಆ ಸಂದರ್ಭದಲ್ಲಿ ಎಸ್​ಐಟಿಗೆ ಯುವತಿ ಪೋಷಕರು ತಿಳಿಸಿದಂತೆ ಸಿಡಿ ಲೇಡಿ ನಾಪತ್ತೆಯಾದಾಗಿನಿಂದ ನಾಲ್ಕು ಬಾರಿ ಫೋನ್ ಮಾಡಿದ್ದಳು. ಗೋವಾ, ಬೆಂಗಳೂರು, ಚೆನ್ನೈ ಸೇರಿ 4 ಸ್ಥಳದಿಂದ ಸಂಪರ್ಕ ಮಾಡಿದ್ದಳು ಎಂದು ಕುಟುಂಬಸ್ಥರು ಹೇಳಿದ್ದರು. ಮೊದಲ ಬಾರಿ ಗೋವಾದಿಂದ ಕರೆ ಮಾಡಿ ನಾನು ಆರಾಮಾಗಿದ್ದೇನೆ ಇದ್ದೇನೆ ಎಂದು ಹೇಳಿದ್ದಳಂತೆ. ಇದಾದ ಬಳಿಕ ಬೆಂಗಳೂರಿನಿಂದ ಒಮ್ಮೆ ಕರೆ ಮಾಡಿದ್ದಳು. ಚೆನ್ನೈನಿಂದ ಕರೆ ಮಾಡಿದಾಗ ಭಯದಿಂದ ಮಾತಾಡಿದ್ದಳು. ಬಲವಂತವಾಗಿ ನನ್ನನ್ನ ಇಟ್ಟುಕೊಂಡಿದ್ದಾರೆ ಎಂದು ಕೇಳಿದ್ದಾಳೆ. ಹೀಗಾಗಿ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ತಂದೆ SIT ಗೆ ಹೇಳಿದ್ದಾರೆ. ಅಲ್ಲದೆ ಒಬ್ಬ ಸಹೋದರನ ಬಳಿ ಸಿಡಿ ಲೇಡಿ ಕಾಲ್​ ರೆಕಾರ್ಡಿಂಗ್ ಇದೆಯಂತೆ ಎನ್ನುವ ಮಾಹಿತಿ ನೀಡಿದ್ದರು. ಇನ್ನು ಇಂದಿನ ವಿಚಾರಣೆಯ ಬಳಿಕ ಯಾವ ವಿಚಾರಗಳು ಹೊರ ಬರುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ:

ಸಿಡಿ ಲೇಡಿ ಕುರಿತು ಎಸ್​ಐಟಿಗೆ ಸ್ಫೋಟಕ ಮಾಹಿತಿ? ಯುವತಿ ತಂದೆ-ತಾಯಿ ಹೇಳಿಕೆ ದಾಖಲು

‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!

Published On - 12:02 pm, Sat, 27 March 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?