Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ನಾಟಕವಾಡಿ ಸರಸ ಸಲ್ಲಾಪ.. 3 ಬಾರಿ ಅಬಾರ್ಷನ್‌..ಮದ್ವೆ ದಿನವೇ ಪ್ರಿಯಕರ ಪರಾರಿ!

ಗಡಿ ನಾಡು ಚಾಮರಾಜನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದು ಪ್ರಿಯತಮೆಯ ಬಾಳನ್ನೇ ದುರಳನೊಬ್ಬ ನರಕ ಮಾಡಿದ್ದಾನೆ. ಈಗಾಗಲೇ ಯುವತಿಗೆ ಮದುವೆಯಾಗಿದ್ದರೂ ಸಹ ಆಕೆ ಪತಿಗೆ ತಮ್ಮಿಬ್ಬರ ಖಾಸಗಿ ಫೋಟೋಗಳನ್ನು ಕಳುಹಿಸಿ ಡಿವೋರ್ಸ್​ ಆಗುವಂತೆ ಮಾಡಿದ್ದಾನೆ. ಬಳಿಕ ತಾನು ಮದ್ವೆಯಾಗುತ್ತೇನೆಂದು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೇ ಅಬಾರ್ಷನ್‌ ಕೂಡ ಮಾಡಿಸಿ ಇದೀಗ ಕೈಕೊಟ್ಟಿದ್ದಾನೆ.

ಪ್ರೀತಿ ನಾಟಕವಾಡಿ ಸರಸ ಸಲ್ಲಾಪ.. 3 ಬಾರಿ ಅಬಾರ್ಷನ್‌..ಮದ್ವೆ ದಿನವೇ ಪ್ರಿಯಕರ ಪರಾರಿ!
ಪ್ರೆಸಿಲ್ಲಾ-ಕ್ಲಿಂಟನ್
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ರಮೇಶ್ ಬಿ. ಜವಳಗೇರಾ

Updated on:Feb 15, 2025 | 1:10 PM

ಚಾಮರಾಜನಗರ, (ಫೆಬ್ರವರಿ 15): ಚಾಮರಾಜನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿ ಪ್ರೇಮಾ ಅಂತ ನಾಟಕ ಮಾಡಿ ಪ್ರಿಯತಮೆಯೊಂದಿಗೆ ತನ್ನ ಕಾಮದಾಹವನ್ನು ತೀರಿಸಿಕೊಂಡಿದ್ದಾನೆ. ಅಲ್ಲದೇ ಆಕೆಗೆ ಮೂರು ಬಾರಿ ಅಬಾರ್ಷನ್‌ ಕೂಡ ಮಾಡಿಸಿ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ. ವಿಚಿತ್ರ ಅಂದ್ರೆ ಪ್ರೇಯಸಿಗೆ ಈಗಾಗಲೇ ಒಂದು ಮದ್ವೆಯಾಗಿತ್ತು. ಆದ್ರೆ, ಪ್ರಿಯಕರನೇ ಅವರಿಗೆ ಡಿವೋರ್ಸ್​ ಕೊಡಿಸಿ ಆಕೆಯೊಂದಿಗೆ 10 ತಿಂಗಳ ಸಂಸಾರ ಮಾಡಿದ್ದ. ಆದ್ರೆ, ಈಗ ಮದುವೆಗೆ ಬರುತ್ತೇನೆಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಪ್ಪಿಸಿಕೊಂಡಿದ್ದಾನೆ. ವಿಚಿತ್ರ ಹಾಗೂ ವಿಲಕ್ಷಣ ಪ್ರೇಮ್ ಕಹಾನಿಗೆ ಬಲಿಯಾಗಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

2021ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಜಾನ್‌ ಪ್ರೆಸಿಲ್ಲಾ ಎನ್ನುವ ಯುವತಿಗೆ ಕ್ಲಿಂಟನ್ ಎಂಬಾತನ ಪರಿಚಯವಾಗಿತ್ತು.ಇಬ್ಬರೂ ಮೇಡ್ ಫಾರ್ ಈಚ್ ಅದರ್ಸ್ ಎಂಬಂತೆ ಸುತ್ತಾಟ ಕೂಡ ಮಾಡಿದ್ದರು. ಇವರಿಬ್ಬರ ಪ್ರೀತಿ ಪ್ರೇಮ ಪ್ರಯಣದ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿತ್ತು.ವಿಚಾರ ತಿಳಿದ ಪ್ರೇಯಸಿ ಜಾನ್ ಪ್ರೆಸಿಲ್ಲಾಳ ಕುಟುಂಬಸ್ಥರು ಕ್ಲಿಂಟನ್ ನ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ, ಕ್ಲಿಂಟನ್ ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಕ್ಲಿಂಟನ್ ಮದುವಗೆ ಕುಟುಂಬಸ್ಥರು ನಿರಾಕರಿಸಿದ್ದರು. ಆದ್ದರಿಂದ ಪ್ರೆಸಿಲ್ಲಾಳ ಕುಟುಂಬಸ್ಥರು 2022 ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ ರಾಜ್ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು.

ಇದನ್ನೂ ಓದಿ: ತನ್ನ ಲೈಂಗಿಕ ವೀಡಿಯೊಗಳನ್ನು ತೋರಿಸಿ ಚಿತ್ರಹಿಂಸೆ: ಪತಿಯ ವಿಕೃತಿಗೆ ಬೇಸತ್ತು ನವವಿವಾಹಿತೆ ದುರಂತ ಸಾವು

ನಂತರ ಮಾಜಿ ಪ್ರಿಯಕರ ಕ್ಲಿಂಟನ್ ತನ್ನ ದುರ್ಬುದ್ಧಿ ತೋರಿಸಿದ್ದಾನೆ. ವಿವಾಹದ ಬಳಿಕ ಕ್ಲಿಂಟನ್, ಪ್ರೆಸಿಲ್ಲಾಳ ಪ್ರೈವೇಟ್ ಫೋಟೊ ಹಿಡಿದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಪತಿ ಸ್ಟೀಫನ್ ರಾಜ್ ಗೂ ಪ್ರೆಸಿಲ್ಲಾಳ ಫೋಟೊ ಕಳುಹಿಸಿ ಟಾರ್ಚರ್ ಕೊಡಲು ಶುರು ಮಾಡಿದ್ದ. ಪತ್ನಿಯ ಲವ್ವಿ ಡವ್ವಿ ವಿಚಾರ ತಿಳಿದು ಸ್ಟೀಫನ್‌ ರಾಜ್‌ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಕ್ಮಿಂಟನ್​, ಪತಿ ಸ್ಟೀಫನ್ ಗೆ ವಿಚ್ಛೇದನ ನೀಡಿ ಬಾ ನಾನು ಮದ್ವೆ ಆಗುತ್ತೇನೆ ಎಂದು ಪ್ರೆಸಿಲ್ಲಾಗೆ ಹೇಳಿದ್ದಾನೆ. ಅದರಂತೆ ಸ್ಟೀಫನ್ ಹಾಗೂ ಪ್ರೆಸಿಲ್ಲಾ ಡಿವೋರ್ಸ್​ ಆಗಿದೆ.

ವಿಚ್ಛೇದನ ಬಳಿಕ ಮದುವೆ ಆಗದೆ ಪ್ರೆಸಿಲ್ಲಾ ಜೊತೆ ಕ್ಲಿಂಟನ್ 10 ತಿಂಗಳ ಸಂಸಾರ ಕೂಡ ನಡೆಸಿದ್ದ. ಪ್ರೆಸಿಲ್ಲಾ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ 3 ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದ. ಇದೆ ಫ್ರೆಬ್ರವರಿ 12 ರಂದು ಕೊಳ್ಳೇಗಾಲದಲ್ಲಿ ಕ್ಲಿಂಟನ್ ಹಾಗೂ ಪ್ರೆಸಿಲ್ಲಾಗೆ ರಿಜಿಸ್ಟರ್ ಮ್ಯಾರೇಜ್ ಫಿಕ್ಸ್ ಆಗಿತ್ತು. ಆದರೆ, ರಿಜಿಸ್ಟರ್ ಮ್ಯಾರೇಜ್ ಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಲಿಂಟನ್ ಎಸ್ಕೇಪ್ ಆಗಿದ್ದಾನೆ. ಪರಾರಿಯಾದ ಕ್ಲಿಂಟನ್ ನ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆಯ ಕಣ್ಣೀರಿಟ್ಟಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:03 pm, Sat, 15 February 25