ಮಡಹಳ್ಳಿ ಬಳಿ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿತ ಪ್ರಕರಣ; ಇಂದು ಮತ್ತೋರ್ವ ಕಾರ್ಮಿಕನ ಶವ ಪತ್ತೆ
ರಕ್ಷಣಾ ಸಿಬ್ಬಂದಿ ಕಾರ್ಮಿಕ ಮಿರಾಜ್ ಮೃತದೇಹ ಹೊರತೆಗೆದಿದ್ದಾರೆ. ನಿನ್ನೆ ಅಜೀಮುಲ್ಲಾ ಮೃತದೇಹ ಹೊರತೆಗೆಯಲಾಗಿತ್ತು. ಸದ್ಯ ಮಿರಾಜ್ ಹಾಗೂ ಅಜೀಮುಲ್ಲಾ ಮೃತದೇಹ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಮತ್ತೊಬ್ಬ ಕಾರ್ಮಿಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಳಿ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಮಣ್ಣು, ಬಂಡೆ ಅಡಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ. ರಕ್ಷಣಾ ಸಿಬ್ಬಂದಿ ಕಾರ್ಮಿಕ ಮಿರಾಜ್ ಮೃತದೇಹ ಹೊರತೆಗೆದಿದ್ದಾರೆ. ನಿನ್ನೆ ಅಜೀಮುಲ್ಲಾ ಮೃತದೇಹ ಹೊರತೆಗೆಯಲಾಗಿತ್ತು. ಸದ್ಯ ಮಿರಾಜ್ ಹಾಗೂ ಅಜೀಮುಲ್ಲಾ ಮೃತದೇಹ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಮತ್ತೊಬ್ಬ ಕಾರ್ಮಿಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಗಣಿಗಳ ಬಗ್ಗೆ ಪರಿಶೀಲನೆಗೆ ರಾಜ್ಯ ಸರ್ಕಾರ 8 ತಂಡ ರಚಿಸಿದೆ ರಾಜ್ಯ ಸರ್ಕಾರ ಗಣಿ ಇಲಾಖೆಯಿಂದ 8 ತಂಡ ಮಾಡಿದೆ. ಜಿಲ್ಲೆಯಲ್ಲಿರುವ ಎಲ್ಲಾ ಕ್ವಾರಿಗಳ ಬಗ್ಗೆ ಕೂಲಂಕಷ ಪರಿಶೀಲನೆ ಮಾಡ್ತಿದ್ದೇವೆ. ಸರ್ಕಾರಿ, ಖಾಸಗಿ ಕ್ವಾರಿಗಳ ಪರಿಶೀಲನೆ ಮಾಡ್ತಿದ್ದೇವೆ. ದಾಖಲೆ ಪರಿಶೀಲಿಸಿ ಪರವಾನಗಿ ಪರಿಶೀಲನೆ ಮಾಡಬೇಕಾಗಿದೆ. ಪರಿಶೀಲನೆ ನಾಳೆ ಬೆಳಗ್ಗೆಯಿಂದ ಪ್ರಾರಂಭ ಮಾಡ್ತೀವಿ. ಸರ್ವೇ ನಡೆಸಿ ದಾಖಲಾತಿ ಪರಿಶೀಲನೆ ನಡೆಸ್ತಿವೆ. ತಪ್ಪು ಕಂಡುಬಂದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಪೊಲೀಸರು, ಕಂದಾಯ, ಗಣಿ ಅಧಿಕಾರಿಗಳ ಜತೆಗೂಡಿ ಸರ್ವೆ ಮಾಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಘಟನೆ ವಿವರ; ಮಾರ್ಚ್ 4ರಂದು ಮಧ್ಯಾಹ್ನ 12.30 ರ ಸಮಯದಲ್ಲಿ ಜೆಸ್ಟ್ 15 ಸೆಕೆಂಡ್‌ನಲ್ಲೇ ದೊಡ್ಡ ಅನಾಹುತ ನಡೆದು ಹೋಗಿತ್ತು. ಹತ್ತಾರು ಜೆಸಿಬಿ, ಹಿಟಾಚಿ, ಟಿಪ್ಪರ್ ಬಳಸಿಕೊಂಡು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ರು. ಆದ್ರೆ 12.30 ರ ಸಮಯದಲ್ಲಿ ಮಾತ್ರ ಗುಡ್ಡ ಕುಸಿಯೋ ಭೀತಿ ಸುಳಿವು ಸಿಕ್ಕಿತ್ತು. ಮೇಲಿದ್ದವರು ಇದನ್ನ ವಿಡಿಯೋ ಮಾಡುತ್ತಾ ಕೆಳಗಿಳಿದವರಿಗೆ ಓಡಿ ಓಡಿ ಬನ್ನಿ ಅಂತಾ ಕೂಗಿ ಕೊಂಡ್ರು. ಆದ್ರೆ ಅಲ್ಲಿದ್ದವರು ಬಚಾವ್ ಆಗೋದ್ರಲ್ಲೇ 15 ಸೆಕೆಂಡ್‌ನಲ್ಲೇ ಇಡೀ ಬೆಟ್ಟ ಕುಸಿದಿತ್ತು. ಬ್ಲಾಸ್ಟಿಂಗ್‌ಗೂ ಅಲುಗಾಡದೇ ಇದ್ದ ಟನ್ ಭಾರದ ಕಲ್ಲುಗಳು ಜೆಸಿಬಿ, ಟಿಪ್ಪರ್ ಮೇಲೆ ಉರುಳಿದ್ವು. ಇಡೀ ಕ್ವಾರಿಗೆ ಬಾಂಬ್ ಹಾಕಿರುವಂತೆ ಚಿತ್ರಣ ಕಂಡಿತ್ತು.
ಕಲ್ಲು ರಾಶಿಯ ಕೆಳಗೆ ಐವರು ಕಾರ್ಮಿಕರು ಸಿಲುಕಿದ್ರು. ಸ್ಥಳಕ್ಕೆ ಆಗಮಿಸಿದ ಐದು ಅಗ್ನಿಶಾಮಕ ಟೀಂಗಳು ಕಾರ್ಯಚಾರಣೆ ಮಾಡಿ ಫ್ರಾನ್ಸಿಸ್ , ಅಸ್ರಫ್ ಹಾಗೂ ನೂರೂದ್ದೀನ್ ಅನ್ನೋ ಮೂವರನ್ನ ರಕ್ಷಣೆ ಮಾಡಿದ್ದರು. ನಿನ್ನೆ ಓರ್ವನ ಮೃತದೇಹ ಮತ್ತು ಇಂದು ಓರ್ವನ ಮೃತದೇಹ ಹೊರ ತಗೆಯಲಾಗಿದೆ.
ಇದನ್ನೂ ಓದಿ: ಶ್ರೀನಗರದ ಜನನಿಬಿಡ ರಸ್ತೆಯಲ್ಲಿ ಗ್ರೆನೇಡ್ ದಾಳಿ: ಓರ್ವ ನಾಗರಿಕ ಸಾವು, ಹಲವರಿಗೆ ಗಾಯ
ಚಾಮರಾಜನಗರ ಜಿಲ್ಲೆಯ ಕಲ್ಲು ಕ್ವಾರಿಗಳಿಗೆ ಡಿಸಿ ನೇತೃತ್ವದಲ್ಲಿ ತಜ್ಞರ ತಂಡ ಭೇಟಿ