ಎಚ್ ವಿಶ್ವನಾಥ್‌ಗೆ ಅರ್ಚಕರಿಂದ ನಿಂಬೆಹಣ್ಣಿನ ಅಭಯ!
ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್ ವಿಶ್ವನಾಥ್ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು. ಅರ್ಚಕರಿಂದ ನಿಂಬೆಹಣ್ಣಿನ ಅಭಯ: ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು […]
ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್ ವಿಶ್ವನಾಥ್ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು.
ಅರ್ಚಕರಿಂದ ನಿಂಬೆಹಣ್ಣಿನ ಅಭಯ: ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು ವಿಶ್ವನಾಥ್ ನೀಡಿದರು.
ಹಳ್ಳಿಹಕ್ಕಿ ಟೆಂಪಲ್ ರನ್! ಅದಾದ ನಂತರ, ಹುಣಸೂರು ತಾಲ್ಲೂಕಿನ ಹೊಸರಾಮೇನಹಳ್ಳಿಯಲ್ಲಿ ವೀರಾಂಜನೇಯನಿಗೆ ಹಳ್ಳಿಹಕ್ಕಿ ವಿಶ್ವನಾಥ್ ಪೂಜೆ ಸಲ್ಲಿಸಿದರು. ವೀರಾಂಜನೇಯನಿಗೆ ಪೂಜೆ ಸಲ್ಲಿಸಿಸುವ ವೇಳೆ ವಿಶ್ವನಾಥ್ ಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು.
Published On - 11:01 am, Mon, 18 November 19