ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ (Kollegal Municipal Corporation) ಫಲಿತಾಂಶ ಹೊರಬಿದ್ದಿದೆ. ಬೈಎಲೆಕ್ಷನ್ ನಡೆದಿದ್ದ 7 ವಾರ್ಡ್ಗಳ ಪೈಕಿ ಬಿಜೆಪಿ 6ರಲ್ಲಿ ಭರ್ಜರಿ ಜಯ ಸಾಧಿಸಿದೆ. ಒಂದು ವಾರ್ಡ್ನಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ದಕ್ಕಿದೆ. ತನ್ಮೂಲಕ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ತಮ್ಮ ವರ್ಚಸ್ಸು ಉಳಿಸಿಕೊಂಡಿದ್ದಾರೆ. BSPಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದ ಎನ್. ಮಹೇಶ್ (BJP MLA N Mahesh) 7 ಕಾರ್ಪೊರೇಟರುಗಳ ಪೈಕಿ 6 ಜನರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘನೆಯಾಗಿತ್ತು. ಬಿಎಸ್ಪಿಯ 7 ಸದಸ್ಯರು ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರು. ಅನರ್ಹಗೊಂಡ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಬಿಎಸ್ಪಿಯ ಆ ಏಳೂ ಸದಸ್ಯರು ಶಾಸಕ ಮಹೇಶ್ ಜತೆ ಗುರುತಿಸಿಕೊಂಡಿದ್ದರು. ಮುಂದೆ, ಅನರ್ಹಗೊಂಡಿದ್ದ 7 ಜನರಿಗೂ ಮಹೇಶ್ ಬಿಜೆಪಿ ಟಿಕೆಟ್ ಕೊಡಿಸಿದ್ದರು.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ:
ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಾಸಕ ಡಾ. ಎನ್. ಮಹೇಶ್ & ದೇವದುರ್ಲಭ ಕಾರ್ಯಕರ್ತರಿಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಾಸಕ ಡಾ. ಎನ್. ಮಹೇಶ್ & ದೇವದುರ್ಲಭ ಕಾರ್ಯಕರ್ತರಿಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. @BJP4Karnataka
2/2— Basavaraj S Bommai (@BSBommai) October 31, 2022
Published On - 11:42 am, Mon, 31 October 22