ಚಾಮರಾಜನಗರ: ಗ್ಯಾಸ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ಚಾಮರಾಜನಗರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಗ್ಯಾಸ್​ ಕೊಡುವ ನೆಪದಲ್ಲಿ ಬಂದ ಡೆಲಿವರಿ ಬಾಯ್​ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಾಮರಾಜನಗರ: ಗ್ಯಾಸ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ
ಪ್ರಾತಿನಿಧಿಕ ಚಿತ್ರ, ಆರೋಪಿ ಮಹೇಶ್​
Edited By:

Updated on: May 30, 2025 | 4:07 PM

ಚಾಮರಾಜನಗರ, ಮೇ 30: ಗ್ಯಾಸ್ ಡೆಲವರಿ ನೀಡಲು ಬಂದ ಡೆಲಿವರಿ ಬಾಯ್​ (Delivery boy) ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಾಮರಾಜನಗರ (Chamrajnagar) ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ. ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್​ ಮಹೇಶ್ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ. ಸಂತೇಮರಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಮೇ 21 ರಂದು ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ದೂರಿನಲ್ಲಿ ಏನಿದೆ?

“ಮಹಿಳೆ ಅನಾರೋಗ್ಯದ ನಿಮಿತ್ತ ಮೇ.21 ರಂದು ಮೈಸೂರಿಗೆ ತೆರಳಲು ಸಿದ್ಧವಾಗುತ್ತಿದ್ದರು. ಮಧ್ಯಾಹ್ನ 12-30 ರ ಸುಮಾರಿಗೆ, ಮಹಿಳೆ ಇದ್ದ ಮನೆಗೆ ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ಬಂದು, ಬಾಗಿಲು ಬಡೆದಿದ್ದಾನೆ. ಮಹಿಳೆ ಯಾರು ಎಂದು ಕೇಳಿದಾಗ, ಗ್ಯಾಸ್ ಡೆಲಿವರಿ ಮಾಡುವನು ಅಂತ ಆರೋಪಿ ಮಹೇಶ್​ ಹೇಳಿದ್ದಾನೆ. ನಾನು ಗ್ಯಾಸ್ ಬುಕ್ ಮಾಡಿಲ್ಲ” ಎಂದು ಮಹಿಳೆ ಹೇಳಿದ್ದಾರೆ. ಅದಕ್ಕೆ, ಆರೋಪಿ ಮಹೇಶ್​ “ಬುಕ್ ಮಾಡದಿದ್ದರೂ ಕೊಡುತ್ತೇವೆ ಖಾಲಿ ಇದ್ದರೆ ತೆಗೆದುಕೊಳ್ಳಿ” ಎಂದು ಹೇಳಿದ್ದಾನೆ.

“ಅಮೌಂಟ್ ಎಷ್ಟು ಎಂದು ಮಹಿಳೆ ಕೇಳಿದಾಗ 920 ರೂ. ಎಂದು ಹೇಳಿ ಹಣವನ್ನು ಪಡೆದುಕೊಂಡಿದ್ದಾನೆ. ತದನಂತರ, ಗ್ಯಾಸ್ ಕಂಪನಿ ಕಡೆಯಿಂದ ಕೆವೈಸಿ ಮಾಡಬೇಕು. ಹೀಗಾಗಿ, ಮನೆಯ ಫೋಟೊ ತೆಗೆಯಬೇಕು ಅದನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಬೇಕೆಂದು ಆರೋಪಿ ಮಹೇಶ್​ ಹೇಳಿದ್ದಾನೆ. ನಂತರ, ಮಹಿಳೆಯನ್ನು ಮಹಿಳೆಯನ್ನು ಗ್ಯಾಸ್ ಸಿಲಿಂಡರ್ ಪಕ್ಕ ನಿಲ್ಲಿಸಿ ಫೋಟೊ ತೆಗೆದಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ
ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದ ಅರಣ್ಯ ಇಲಾಖೆ
ಇನ್ಸ್ಟಾಗ್ರಾಮ್​ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು!
ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಅಪಹಾಸ್ಯ: ಪತಿ ಪರಶಿವಮೂರ್ತಿ ಆತ್ಮಹತ್ಯೆ
ಚಾಮರಾಜನಗರ: ಬಂಡೀಪುರಕ್ಕೆ ತೆರಳಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ

ಆನಂತರ ಕೇಂದ್ರ ಸರ್ಕಾರದ ಆದೇಶ ಇದೆ. ನಿಮ್ಮ, ಅಡುಗೆ ಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿ ಬರುತ್ತದೆಯೋ, ಇಲ್ಲವೋ ಪರಿಶೀಲಿಸಬೇಕು. ಫೋಟೋ ತೆಗೆಯಬೇಕು ಎಂದು ಆರೋಪಿ ಮಹೇಶ್​ ಹೇಳಿದ್ದಾನೆ. ಸರಿ ಅಂತ, ಮಹಿಳೆ ಆರೋಪಿ ಮಹೇಶ್​ನನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಆರೋಪಿ ಮಹೇಶ್​ ಮನೆಯೊಳಗೆ ಬಂದ ಕೂಡಲೆ, ಮಹಿಳೆಯನ್ನು ತಳ್ಳಿದ್ದಾನೆ. ಚಾಕು ತೋರಿಸಿ ಕಿರುಚಿದರೆ ನಿನ್ನನ್ನು ಇಲ್ಲೇ ಮುಗಿಸಿಬಿಡುತ್ತೇನೆ ಅಂತ ಆರೋಪಿ ಮಹೇಶ್​ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಕಾಲು ಮುರಿದ ಮಹಿಳೆಯರು: ಚಿಕಿತ್ಸೆ ಫಲಿಸದೇ ಸಾವು

ಬಳಿಕ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದನು. ಅಲ್ಲದೆ, ಮಹಿಳೆಯ ಮುಖಕಕ್ಕೆ ಹೊಡೆದಿದ್ದಾನೆ. ನಂತರ, ಮಹಿಳೆಯನ್ನು ಎಳೆದಾಡಿ ಕಿರುಕುಳ ನೀಡಿದ್ದಾನೆ. ಮಹಿಳೆಯ ಎದೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 30 May 25