ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಕಾಲು ಮುರಿದ ಮಹಿಳೆಯರು: ಚಿಕಿತ್ಸೆ ಫಲಿಸದೇ ಸಾವು
ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ, ಹಸು ಮೇಯಿಸುವ ವಿಚಾರಕ್ಕೆ ಮೂವರು ಮಹಿಳೆಯರಿಂದ ಓರ್ವ ವೃದ್ಧನ ಕಾಲು ಮುರಿದಿದ್ದು, ಆಪರೇಷನ್ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಪೊಲೀಸರು ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಕುಟುಂಬಸ್ಥರು ಕೊಲೆ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದಾರೆ. ಏಪ್ರಿಲ್ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ, ಮೇ 18: ತಮ್ಮ ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ಮೂವರು ನಾರಿಮಣಿಯರು (Womens) ಓರ್ವ ವೃದ್ಧನ (old man) ಕಾಲು ಮುರಿದು ಹಾಕಿದ್ದಾರೆ. ಇದೀಗ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ ಏಪ್ರಿಲ್ 22ರಂದು ನಡೆದಿದ್ದ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲಾಗಿ ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಮೃತ ವೃದ್ಧನ ಕುಟುಂಬಸ್ಥರಿಂದ ಆರೋಪಿಸಲಾಗಿದೆ.
ಗಡಿ ನಾಡು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ ಚೆನ್ನಬಸವಯ್ಯ ಎಂಬ ವಯೋ ವೃದ್ಧ ಅಂದು ಸಂಜೆ ತಮ್ಮ ಜಮೀನಿನ ಬಳಿ ತೆರಳಿದ್ದ ವೇಳೆ ಜಮೀನಿನಲ್ಲಿ ಸಂಬಂಧಿಕರು ಹಾಗೂ ಪಕ್ಕದ ಮನೆಯವರಾದ ನಾಗರತ್ನ ತನ್ನ ಹಸುವನ್ನ ಮೇಯಲು ಬಿಟ್ಟಿದ್ದರು. ಇದನ್ನ ನೋಡಿದ ವೃದ್ಧ ಚೆನ್ನಬಸವಯ್ಯ, ಜಮೀನಿನಿಂದ ಹಸುವನ್ನ ಕರೆದುಕೊಂಡು ಹೋಗಿ ಎಂದು ಬುದ್ಧಿ ಮಾತು ಹೇಳಿದ್ದಾರೆ.
ಇದನ್ನೂ ಓದಿ: ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ರಾಸುಗಳು ಸಾವು
ವೃದ್ಧನ ಮಾತಿನಿಂದ ಕೆರಳಿದ ನಾಗರತ್ನ, ಚೆನ್ನಬಸವಯ್ಯ ಜೊತೆ ಜಗಳ ಶುರು ಮಾಡಿದ್ದಾರೆ. ಬಳಿಕ ಸುವಾಸಿನಿ ಹಾಗೂ ರೋಹಿಣಿ ಚೆನ್ನಬಸವಯ್ಯರ ಊರುಗೋಲು ಕಿತ್ತುಕೊಂಡು ಆತನ ಕಾಲಿಗೆ ಹೊಡೆದಿದ್ದಾರೆ. ನಾರಿಮಣಿಯರ ಆಟಾಟೋಪಕ್ಕೆ ವೃದ್ಧನ ಕಾಲಿನ ಮೂಳೆಯೇ ಮುರಿದು ಹೋಗಿದೆ.
ಇನ್ನು ಕಳೆದ ಏಪ್ರಿಲ್ 22ಕ್ಕೆ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಚೆನ್ನಬಸವಯ್ಯರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 26 ರಂದು ಚೆನ್ನಬಸವಯ್ಯರಿಗೆ ಅನಸ್ಥೇಶಿಯಾ ನೀಡಿ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆದರೆ ಚಾಮರಾಜನಗರದ ಪೂರ್ವ ಠಾಣಾ ಪೊಲೀಸರು ಕೇವಲ ಗಲಾಟೆ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಸರ್ಕಾರದಿಂದ ಉತ್ತೇಜನ, ರೈತರಿಗೆ ಸಕಲ ಸವಲತ್ತು
ಚೆನ್ನಬಸವಯ್ಯ ಸಾವನ್ನಪ್ಪಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದು ಮೃತನ ಕುಟುಂಬಸ್ಥರ ವಾದವಾಗಿದೆ. ಕೇವಲ ಎಫ್‌ಐಆರ್ ರಿಜಿಸ್ಟರ್ ಮಾಡ್ಕೊಂಡು ಸುಮ್ಮನೆ ಕುಳಿತಿದ್ದಾರೆ, ಕನಿಷ್ಠ ಪಕ್ಷ ಆರೋಪಿಗಳಾದ ನಾಗರತ್ನ, ರೋಹಿಣಿ ಹಾಗೂ ಸುಹಾಸಿನಿಯನ್ನ ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ದ ಕ್ರಮ ಆಗಲೇ ಬೇಕೆಂಬುದು ಮೃತನ ಕುಟುಂಬಸ್ಥರು ಆಹ್ರಗಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







