ಚಾಮರಾಜನಗರದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ

ಮೂಲತಃ ಚಾಮರಾಜನಗರ ನಿವಾಸಿಗಳಾಗಿದ್ದ ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರಾಗಿದ್ದು ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋದವರು ಇಲ್ಲಿಯವರೆಗೂ ಪತ್ತೆಯಾಗಿರಲಿಲ್ಲ. ಇದೀಗ, ಗುಜರಾಜತನ ಬುಜ್​ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇವರ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಚಾಮರಾಜನಗರದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ
ನಾಗರಾಜ್​, ಇರ್ಷಾದ್​
Edited By:

Updated on: May 19, 2024 | 1:10 PM

ಚಾಮರಾಜನಗರ, ಮೇ 19: ಒಂದು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಮಾನಸಿಕ ಅಸ್ವಸ್ಥರು (Mentally Ill) ಗುಜರಾತ್​​ನ (Gujarath) ಬುಜ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರಾಗಿದ್ದು, ಮೂಲತಃ ಚಾಮರಾಜನಗರ (Chamarajanagar) ನಿವಾಸಿಗಳಾಗಿದ್ದಾರೆ. ನಾಗರಾಜ ಕುಟುಂಬ ಚಾಮರಾಜನಗರದ ಮೇದಾರ ಬೀದಿಯಲ್ಲಿ ವಾಸವಾಗಿದೆ. ಇನ್ನು ಇರ್ಷದ್​​ ಕುಟುಂಬಸ್ಥರು ನಗರದ ಗುಂಡ್ಲುಪೇಟೆ ಸರ್ಕಲ್​​ ಬಳಿ ಇರುವ ಗಾಳಿಪುರದಲ್ಲಿ ವಾಸವಾಗಿದ್ದಾರೆ.

ಇರ್ಷದ್ ಹಾಗೂ ನಾಗರಾಜ್ ಕುಟುಂಬ ಬಡತನದಿಂದ ಕೂಡಿದ್ದು, ಇವರಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ. ಇನ್ನು ನಾಗರಾಜ ಮತ್ತು ಇರ್ಷದ್​​ ಪ್ರತಿನಿತ್ಯ ಊರಲ್ಲಿ ಸುತ್ತಾಡುತ್ತಾ ಸಾಯಂಕಾಲ ಮನೆ ಕಡೆಗೆ ಮರುಳುತ್ತಿದ್ದರು. ಅಲ್ಲದೆ ಕೆಲವು ಸಲ ಈ ಇಬ್ಬರೂ ಮನೆ ಬಿಟ್ಟು 2-3 ದಿನಗಳ ಕಾಲ ಹೋಗಿದ್ದು ಇದೆ. ಆಗ ಅಪರಚಿತ ವ್ಯಕ್ತಿಗಳನ್ನು ಮನೆಗೆ ತಂದು ಬಿಡುತ್ತಿದ್ದರು. ಅಥವಾ ತಾವೇ ಮನೆಗೆ ಬರುತ್ತಿದ್ದರು.

ಇದನ್ನೂ ಓದಿ: ವಿಜಯಪುರ: ಮೊಬೈಲ್​ ಟವರ್​ ಏರಿದ ಮಾನಸಿಕ ಅಸ್ವಸ್ಥ, ವಿಡಿಯೋ ನೋಡಿ

ಹೀಗೆ, ಕಳೆದ ಒಂದು ತಿಂಗಳ ಹಿಂದೆ ಮನೆಯಿಂದ ಹೊರಗಡೆ ಹೋದ ನಾಗರಾಜ ಮತ್ತಿ ಇರ್ಷದ್​​ 2-3 ದಿನ ಕಳೆದರೂ ಮನೆಗೆ ಮರಳಲಿಲ್ಲ. ಇದರಿಂದ ಆತಂಕಗೊಂಡ ಇವರ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದ್ದರು ಕೂಡ ಪತ್ತೆಯಾಗಿರಲಿಲ್ಲ. ಇದರಿಂದ ಈ ಇಬ್ಬರ ಕುಟುಂಬಸ್ಥರು ಆತಂಕಗೊಂಡಿದ್ದರು.

ಇದೀಗ, ಇಬ್ಬರೂ ಬುಜ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಪೊಲೀಸರು ಇವರನ್ನು ಮಾನವ ಜ್ಯೋತಿ ವಸತಿ ಕೇಂದ್ರದಲ್ಲಿರಿಸಿದ್ದಾರೆ. ಬಳಿಕ ಇವರ ಹಿನ್ನಲೆ ತಿಳಿದುಕೊಂಡು, ಜ್ಯೋತಿ ವಸತಿ ಕೇಂದ್ರದ ಸಿಬ್ಬಂದಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ನಾಗರಾಜ ಮತ್ತು ಇರ್ಷಾದ ಕುಟುಂಬಕ್ಕೆ ತಿಳಿಸಿದ್ದಾರೆ. ಇದರಿಂದ ಸಂತಸಗೊಂಡ ಕುಟುಂಬಸ್ಥರು ನಾಗರಜಾ ಮತ್ತು ಇರ್ಷಾದನನ್ನು ಕರೆದುಕೊಂಡು ಬರಲು ಗುಜರಾತ್​​ಗೆ ತೆರಳಿದ್ದಾರೆ ಎಂದು ಮೂಲಗಳಿಂದ ಟಿವಿ9ಗೆ ಮಾಹಿತಿ ದೊರೆತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Sun, 19 May 24

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us