ಚಾಮರಾಜನಗರ: ಕಲುಷಿತಗೊಂಡ ಕಾವೇರಿ ನದಿ: ಜನರಿಗೆ ಶುರುವಾಯ್ತು ಚರ್ಮರೋಗ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2023 | 9:31 PM

ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಕಾವೇರಿ ನದಿ ಹರಿಯಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ಮಲಿನವಾಗುತ್ತಿದ್ದಾಳೆಂದು ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಜನರಲ್ಲಿ ಈ ನೀರಿನಿಂದ ಅನಾರೋಗ್ಯ ಸಂಭವಿಸಿದೆ.ಪವಿತ್ರ ಕಾವೇರಿ ನದಿಯನ್ನು ಅಶುಚಿತ್ವಗೊಳಿಸುವುದನ್ನು ನಿಲ್ಲಿಸಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ.

ಚಾಮರಾಜನಗರ: ಕಲುಷಿತಗೊಂಡ ಕಾವೇರಿ ನದಿ: ಜನರಿಗೆ ಶುರುವಾಯ್ತು ಚರ್ಮರೋಗ
ಕಲುಷಿತ ನೀರು
Follow us on

ಚಾಮರಾಜನಗರ, ನವೆಂಬರ್​ 20: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರಭಾಗದಲ್ಲಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗ್ತಿಲ್ಲ. ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಹರಿಯಬಿಡಲಾಗ್ತಿದೆ. ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಅಲ್ಲದೇ ದಾಸನಪುರ, ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲನ್ನು ಸೇರುತ್ತಿದೆ. ಕಾವೇರಿ ಜನರ ಜೀವನಾಡಿಯಾಗಿದ್ದು, ಕಾವೇರಿ ನದಿ (Kaveri River) ಯ ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನದಿಂದ ಕಾವೇರಿ ಮಲಿನವಾಗ್ತಿದ್ದಾಳೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಈ ಕಾವೇರಿ ನದಿ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಈ ನೀರನ್ನೂ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿ ಕುಡಿಯುವ ನೀರಿಗಾಗಿ ನೆರೆ ರಾಜ್ಯ ತಮಿಳುನಾಡು ಜೊತೆಗೆ ಫೈಟ್ ಮಾಡ್ತಿದ್ದೇವೆ. ಇದರ ಗಂಭೀರತೆ ಅರಿಯದ ನಗರಸಭೆ ಅಧಿಕಾರಿಗಳು ಕಲುಷಿತ ನೀರನ್ನು ಕಾವೇರಿ ನದಿಗೆ ಹರಿಬಿಟ್ಟು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: Explainer; ಕಾವೇರಿ ವಿವಾದದ ಕಿಡಿ ಹೊತ್ತಿಕೊಂಡಿದ್ದು ಯಾವಾಗ? ಇಲ್ಲಿದೆ ನದಿ ನೀರು ಹಂಚಿಕೆ ಕಲಹದ ಸುದೀರ್ಘ ಇತಿಹಾಸ

ಅಲ್ಲದೇ ಸ್ಥಳೀಯವಾಗಿಯೂ ಕೂಡ ಜನರಲ್ಲಿ ಈ ನೀರಿನಿಂದ ಅನಾರೋಗ್ಯ ಸಂಭವಿಸಿದೆ. ಸದ್ಯ ಕಾವೇರಿ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಅದು ಕಣ್ಣಿಗೆ ಕಾಣ್ತಿಲ್ಲ. ನೀರು ಹರಿಯೋದು ನಿಂತರೆ ಮಲಮೂತ್ರದ ನೀರು ನಿಂತಿರುತ್ತೆ. ಇದರಿಂದ ಜಲಚರ, ಜಾನುವಾರುಗಳಿಗೂ ತೊಂದರೆಯಾಗಿದೆ ಅಂತಾರೆ.

ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಮರೆತು ನದಿಯ ಒಡಲಿಗೆ ಒಳಚರಂಡಿ, ಮಲಮೂತ್ರದ ನೀರು ಹರಿಯ ಬಿಡುವ ಮೂಲಕ ಶುದ್ಧ ಜೀವಜಲವನ್ನು ಹಾಳು ಮಾಡ್ತಿದ್ದಾರೆ. ಪವಿತ್ರ ಕಾವೇರಿ ನದಿಯನ್ನು ಅಶುಚಿತ್ವಗೊಳಿಸುವುದನ್ನು ನಿಲ್ಲಿಸಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ತೀವ್ರ ಸ್ವರೂಪದ ನೀರಿನ ಅಭಾವವಿದ್ದರೂ ತಮಿಳುನಾಡಿಗೆ ಕಾವೇರಿ ನದಿನೀರು ಹರಿಬಿಡುತ್ತಿರುವ ರಾಜ್ಯ ಸರ್ಕಾರ

ಕರ್ನಾಟಕ ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. CWMA ಆದೇಶಕ್ಕೆ‌ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿದ್ರು‌‌. ಆದರೆ ಇದಕ್ಕೆ CWMA ಒಪ್ಪಿರಲಿಲ್ಲ. ಬಳಿಕ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಸೂಚಿಸುವಂತೆ ಮನವಿ ಮಾಡಿತ್ತು.

ಕಾವೇರಿ ನೀರಿಗಾಗಿ ಎರಡು ರಾಜ್ಯ ಸರ್ಕಾರಗಳು ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಕರ್ನಾಟಕದ ರೈತ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಕಾವೇರಿ ನೀರಿಗಾಗಿ ರೈತ ಸಂಘಟನೆಗಳು ಕೂಡ ಸುಪ್ರೀಂಗೆ ಅರ್ಜಿ ಸಲ್ಲಿಸಿವೆ.‌ ನಾವು ಬೆಳೆಗೆ ನೀರು ಕೇಳುತ್ತಿಲ್ಲ, ಕುಡಿಯಲು ಕೇಳುತ್ತಿದ್ದೇವೆ ಎಂದು ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.