ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಅಲ್ಲದೇ ದಾಸನಪುರ,ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲನ್ನು ಸೇರುತ್ತಿದೆ.ಕಾವೇರಿ ಜನರ ಜೀವನಾಡಿಯಾಗಿದ್ದು,ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು,ಅಧಿಕಾರಿಗಳ ಬೇಜವಾಬ್ದಾರಿ,ನಿರ್ಲಕ್ಷ್ಯತನದಿಂದ ಕಾವೇರಿ ಮಲಿನವಾಗ್ತಿದ್ದಾಳೆ

ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ
ಕಾವೇರಿ ನೀರನ್ನ ಕುಡಿಯುತ್ತಿರುವ ರಾಜಧಾನಿ ಬೆಂಗಳೂರಿನ ಜನರೇ... ಮಿಸ್ ಮಾಡ್ದೆ ಈ ಸ್ಟೋರಿ ಓದಿ
Edited By: ಸಾಧು ಶ್ರೀನಾಥ್​

Updated on: Nov 21, 2023 | 4:44 PM

ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿನ ನೋಡಲೇ ಬೇಕು. ಜೀವ ಜಲ ಕಾವೇರಿ ವಿಷಜಲವಾಗಿ (Contaminated cauvery water) ಹೇಗೆ ಬದಲಾಗುತ್ತಿದೆ ಎಂಬ ಅಘಾತಕಾರಿ ವಿಷಯ ಈಗ ಬೆಳಕಿಗೆ ಬಂದಿದೆ. ಯುಜಿಡಿ ನೀರನ್ನ ಕಾವೇರಿ ನದಿಗೆ ಬಿಟ್ಟು ಕೋಟ್ಯಾಂತರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಟಿವಿ 9 ವರದಿಯಿಂದ ಈಗ ಬಟಾಬಯಲಾಗುತ್ತಿದೆ. ಕರುನಾಡಿನ ಜೀವನಾಡಿ ಎಂದ್ರೆ ಅದು ಕಾವೇರಿ. ಈ ಕಾವೇರಿ ನದಿಯನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೊಳ್ಳೇಗಾಲ ನಗರಸಭೆ ( Kollegala, Chamrajnagar) ಮುಂದಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರಭಾಗದಲ್ಲಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗ್ತಿಲ್ಲ. ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಹರಿಯಬಿಡಲಾಗ್ತಿದೆ.

ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಅಲ್ಲದೇ ದಾಸನಪುರ,ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲನ್ನು ಸೇರುತ್ತಿದೆ.ಕಾವೇರಿ ಜನರ ಜೀವನಾಡಿಯಾಗಿದ್ದು,ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು,ಅಧಿಕಾರಿಗಳ ಬೇಜವಾಬ್ದಾರಿ,ನಿರ್ಲಕ್ಷ್ಯತನದಿಂದ ಕಾವೇರಿ ಮಲಿನವಾಗ್ತಿದ್ದಾಳೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಈ ಕಾವೇರಿ ನದಿ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಆಸರೆಯಾಗಿದೆ.ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಈ ನೀರನ್ನೂ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಈಗಾಗ್ಲೇ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿ ಕುಡಿಯುವ ನೀರಿಗಾಗಿ ನೆರೆ ರಾಜ್ಯ ತಮಿಳುನಾಡು ಜೊತೆಗೆ ಫೈಟ್ ಮಾಡ್ತಿದ್ದೇವೆ.ಇದರ ಗಂಭೀರತೆ ಅರಿಯದ ನಗರಸಭೆ ಅಧಿಕಾರಿಗಳು ಕಲುಷಿತ ನೀರನ್ನು ಕಾವೇರಿ ನದಿಗೆ ಹರಿಬಿಟ್ಟು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕಲುಷಿತಗೊಂಡ ಕಾವೇರಿ ನದಿ, ಜನರಿಗೆ ಶುರುವಾಯ್ತು ಚರ್ಮರೋಗ

ಅಲ್ಲದೇ ಸ್ಥಳೀಯವಾಗಿಯೂ ಕೂಡ ಜನರಲ್ಲಿ ಈ ನೀರಿನಿಂದ ಅನಾರೋಗ್ಯ ಸಂಭವಿಸಿದೆ.ಸದ್ಯ ಕಾವೇರಿ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಅದು ಕಣ್ಣಿಗೆ ಕಾಣ್ತಿಲ್ಲ.ನೀರು ಹರಿಯೋದು ನಿಂತರೆ ಮಲಮೂತ್ರದ ನೀರು ನಿಂತಿರುತ್ತೆ.ಇದರಿಂದ ಜಲಚರ,ಜಾನುವಾರುಗಳಿಗೂ ತೊಂದರೆಯಾಗಿದೆ ಅಂತಾರೆ.

ಒಟ್ನಲ್ಲಿ ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಮರೆತು ನದಿಯ ಒಡಲಿಗೆ ಒಳಚರಂಡಿ, ಮಲಮೂತ್ರದ ನೀರು ಹರಿಯ ಬಿಡುವ ಮೂಲಕ ಶುದ್ಧ ಜೀವಜಲವನ್ನು ಹಾಳು ಮಾಡ್ತಿದ್ದಾರೆ.ಪವಿತ್ರ ಕಾವೇರಿ ನದಿಯನ್ನು ಅಶುಚಿತ್ವಗೊಳಿಸುವುದನ್ನು ನಿಲ್ಲಿಸಿ ಅಂತಾ ಅಧಿಕಾರಿಗಳ ಬಳಿ ಮನವಿ ಮಾಡ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Tue, 21 November 23

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Loading...
Unable to load recommendations.
Follow Us