Chamarajanagar Police: ಚಿನ್ನದ ವ್ಯಾಪಾರಿಗಳೇ ಇವರ ಟಾರ್ಗೆಟ್! ಖತರ್ನಾಕ್ ಕೇರಳ ಗ್ಯಾಂಗ್ ಕೊನೆಗೂ ಅಂದರ್​: ಕಾರ್ಯಾಚರಣೆ ಹೇಗಿತ್ತು?

ಚಿನ್ನದ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡುವ ಈ ಕೇರಳ ಗ್ಯಾಂಗ್ ವ್ಯಾಪಾರಿಗಳು ಹಣ ತೆಗೆದುಕೊಂಡು ಹೋಗುವುದನ್ನ ಕಾದು ಕುಳಿತು ಬಳಿಕ, ಊಟಿ ಹಾಗೂ ಮೈಸೂರು ರಸ್ತೆಗೆ ಕಾರು ಎಂಟ್ರಿಯಾಗ್ತಯಿದ್ದಂತೆ ಹಣ ದೋಚಿ ಎಸ್ಕೇಪ್ ಆಗ್ತಾಯಿದ್ರು.  ಪ್ರಕರಣ ದಾಖಲಿಸಿಕೊಂಡ ಬೇಗೂರು ಪೊಲೀಸರು ಈಗ ಮೊಹಮ್ಮದ್ ತಾಜ್ ಸೇರಿದಂತೆ 11 ಮಂದಿ ಆರೋಪಿಗಳ ಕೈಗೆ ಕೋಳ ತೊಡಿಸಿದೆ.

Chamarajanagar Police: ಚಿನ್ನದ ವ್ಯಾಪಾರಿಗಳೇ ಇವರ ಟಾರ್ಗೆಟ್! ಖತರ್ನಾಕ್ ಕೇರಳ ಗ್ಯಾಂಗ್ ಕೊನೆಗೂ ಅಂದರ್​: ಕಾರ್ಯಾಚರಣೆ ಹೇಗಿತ್ತು?
ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್, ಖತರ್ನಾಕ್ ಕೇರಳ ಗ್ಯಾಂಗ್ ಕೊನೆಗೂ ಅರೆಸ್ಟ್
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​

Updated on: Oct 27, 2023 | 7:16 PM

ಚಿನ್ನದ ಉದ್ಯಮಿಗಳನ್ನೆ (gold traders) ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಕೇರಳ ಗ್ಯಾಂಗ್ (Dangerous Kerala gang) ಕೊನೆಗೂ ಪೊಲೀಸರ ಕೈಯಲ್ಲಿ ಲಾಕ್ ಆಗಿದೆ. ನಡು ರಸ್ತೆಯಲ್ಲಿ ಹತಿಯಾರ ಹಿಡಿದು ಆರ್ಭಟಿಸುತ್ತಿದ್ದವರು ಈಗ ನ್ಯಾಯಾಂಗ ಬಂಧನದ ಪಾಲಾಗಿದ್ದಾರೆ. ಅಷ್ಟಕ್ಕೂ ಈ ದರೋಡೆ ಗ್ಯಾಂಗ್ ಅಂದರ್ ಆಗಿದದಾದ್ರು ಹೇಗೆ ಅಂತೀರಾ? ಈ ಸ್ಟೋರಿ ನೋಡಿ. ಕಳೆದ ಎರಡು ತಿಂಗಳಿನಿಂದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕೇರಳ ಗ್ಯಾಂಗ್ ಕೊನೆಗೂ ಖಾಕಿ ಖೆಡ್ಡಾಗೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯ ಬೇಗೂರು ( Beguru Police of Chamarajanagar) ಠಾಣಾ ವ್ಯಾಪ್ತಿಯಲ್ಲಿ ಸಿವಾ ಎಂಬ ಚಿನ್ನದ ವ್ಯಾಪಾರಿಯ ಕಾರನ್ನ ಅಡ್ಡಗಟ್ಟಿ 40 ಲಕ್ಷ ಹಣವನ್ನ ದೋಚಿ ಪರಾರಿಯಾಗಿದ್ರು ಪ್ರಕರಣ ಕೈಗೆತ್ತಿಗೊಂಡ ಬೇಗೂರು ಪೊಲೀಸರು ಈಗ ಬರೋಬ್ಬರಿ 11 ಮಂದಿ ರಾಬರ್​​ಗಳನ್ನು ಬಂಧಿಸಿ 20 ಲಕ್ಷ ರೂಪಾಯಿ ಹಣವನ್ನ ರಿಕವರಿ ಮಾಡಿದ್ದಾರೆ.

ಚಿನ್ನದ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡುವ ಈ ಕೇರಳ ಗ್ಯಾಂಗ್ ವ್ಯಾಪಾರಿಗಳು ಹಣ ತೆಗೆದುಕೊಂಡು ಹೋಗುವುದನ್ನ ಕಾದು ಕುಳಿತು ಬಳಿಕ, ಊಟಿ ಹಾಗೂ ಮೈಸೂರು ರಸ್ತೆಗೆ ಕಾರು ಎಂಟ್ರಿ ಆಗ್ತಯಿದ್ದಂತೆ ಕಾರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನ ತೋರಿಸಿ ವ್ಯಾಪಾರಿಗಳ ಬಳಿ ಇರುವ ಹಣವನ್ನ ದೋಚಿ ಎಸ್ಕೇಪ್ ಆಗ್ತಾಯಿದ್ರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬೇಗೂರು ಪೊಲೀಸರು ಈಗ ಮೊಹಮ್ಮದ್ ತಾಜ್ ಸೇರಿದಂತೆ 11 ಮಂದಿ ಆರೋಪಿಗಳ ಕೈಗೆ ಕೋಳ ತೊಡಿಸಿದೆ.

ಇನ್ನು ಈ ಗ್ಯಾಂಗ್ ಕಥೆ ಇದಾದ್ರೆ ಆಗಸ್ಟ್ ನಲ್ಲೂ ಸಹ ಮಹೇಶ್ ಎಂಬ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿದ ಕೇರಳ ಗ್ಯಾಂಗ್ ಅವರ ಬಳಿಯಿದ್ದ 5 ಲಕ್ಷ ನಗದನ್ನ ದೋಚಿ ಪರಾರಿಯಾಗಿದ್ರು. ಈ ಪ್ರಕರಣದಲ್ಲೂ 10 ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಈ ಪ್ರಕರಣದ ದೊಡ್ಡ ದುರಂತ ಅಂತ ಹೇಳಿದರೆ ದೂರುದಾರರು ಪೊಲೀಸರಿಗೆ ಸೂಕ್ತ ಮಾಹಿತಿಯನ್ನೇ ನೀಡುತ್ತಿಲ್ಲ. ಹಣದ ಮೂಲದ ಕುರಿತು ಸ್ಪಷ್ಟ ಮಾಹಿತಿ ನೀಡದೆ ಇರುವುದು ಸಹ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿ ಕೊಡುವಂತಾಗಿದೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನ ಕಾಯಿ ಚಿಪ್ಪು, ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್

ಅದೇನೆ ಹೇಳಿ ಈ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸ ಬೇಕಿದೆ. ಚಿನ್ನದ ವ್ಯಾಪಾರಿಗಳನ್ನೇ ರಾಬರಿ ಗ್ಯಾಂಗ್ ಟಾರ್ಗೆಟ್ ಮಾಡ್ತಾಯಿರುವುದಾದ್ರು ಯಾಕೆ ಎಂಬುದರ ಅಸಲಿಯತ್ತು ಬಯಲಿಗೆ ಬರಬೇಕಿದೆ. ಮತ್ತೊಂದೆಡೆ ಟ್ಯಾಕ್ಸ್ ಉಳಿಸುವ ಸಲುವಾಗಿ ವ್ಯಾಪಾರಿಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಗೋಲ್ಡ್ ಬ್ಯುಸಿನೆಸ್ ಮಾಡ್ತಾಯಿದ್ದಾರಾ? ಇಂತವರ ಮೇಲೆ ರಾಬರ್ಸ್ ಗ್ಯಾಂಗ್ ಕಣ್ಣಿಟ್ಟಿದೆಯಾ ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ