ಚೆಕ್​ಪೋಸ್ಟ್​ನಲ್ಲಿ ಮೂವರ ನಕಲಿ ಕೊವಿಡ್ ರಿಪೋರ್ಟ್ ಪತ್ತೆ; ಕೇರಳ ಮೂಲದ ನಾಲ್ವರ ವಿರುದ್ಧ ಎಫ್ಐಆರ್ ದಾಖಲು

ಚೆಕ್​ಪೋಸ್ಟ್​ನಲ್ಲಿ ಮೂವರ ನಕಲಿ ಕೊವಿಡ್ ರಿಪೋರ್ಟ್ ಪತ್ತೆ; ಕೇರಳ ಮೂಲದ ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಪ್ರಾತಿನಿಧಿಕ ಚಿತ್ರ

ಒಂದೇ ಕೊವಿಡ್​ ನೆಗೆಟಿವಿ ವರದಿಯನ್ನು ಬಳಸಿ ಕೇರಳದಿಂದ ನಾಲ್ವರು ಆಗಮಿಸಿದ್ದಾರೆ. ಸದ್ಯ ಕೇರಳ ಮೂಲದ ವಿಜಯ್, ಜಯಪ್ರಕಾಶ್, ಸಂತೋಷ್, ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 1860ರ ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9kannada Web Team

| Edited By: preethi shettigar

Jan 20, 2022 | 6:57 PM

ಚಾಮರಾಜನಗರ: ಮೂವರ ನಕಲಿ ಕೊವಿಡ್​ ರಿಪೋರ್ಟ್(fake covid report)​ ಪತ್ತೆಯಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಬಳಿಯ ಮೂಲೆ ಹೊಳೆ ಚೆಕ್​​ಪೋಸ್ಟ್​ನಲ್ಲಿ(Check post) ನಡೆದಿದೆ. ಒಂದೇ ಎಸ್​ಆರ್​​ಎಫ್​​ ಐಡಿ ಬಳಸಿ ಮೂರು ನಕಲಿ ವರದಿ ಪ್ರಿಂಟ್​ ಮಾಡಿಸಿಕೊಂಡಿದ್ದಾರೆ. ಒಂದೇ ಕೊವಿಡ್​ ನೆಗೆಟಿವಿ ವರದಿಯನ್ನು (Covid negative report) ಬಳಸಿ ಕೇರಳದಿಂದ ನಾಲ್ವರು ಆಗಮಿಸಿದ್ದಾರೆ. ಸದ್ಯ ಕೇರಳ ಮೂಲದ ವಿಜಯ್, ಜಯಪ್ರಕಾಶ್, ಸಂತೋಷ್, ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 1860ರ ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ: ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ

ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ. ಮೃತರ ಕುಟುಂಬಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ನೀಡಿ. ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ. ಅದೇಷ್ಟೊ ಜನ ತಂದೆ ತಾಯಿ ಕುಟುಂಬದ ಆಧಾರ ಸ್ಥಂಬವನ್ನೆ ಕಳೆದುಕೊಂಡಿದ್ದಾರೆ. ಆ ಮೂಲಕ ನೊಂದವರು ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್​.ಎನ್​. ಸುಬ್ಬಾರೆಡ್ಡಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 54 ವಿದ್ಯಾರ್ಥಿಗಳಿಗೆ ಕೊರೊನಾ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಒಂದೆ ದಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪತ್ತೆಯಾಗಿದೆ. ಜತೆಗೆ ಇದೇ ಶಾಲೆಯ 14 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 14 ಶಾಲೆಗನ್ನು 4 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.

ಒಂದೆ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಧೃಡವಾದರೆ ಶಾಲೆ ಸಿಲ್​ಡೌನ್​ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ 142 ಜನ ಶಾಲಾ‌ ವಿದ್ಯಾರ್ಥಿಗಳಿಗೆ ಕೊರೊನಾ ದೃಡವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 58 ಶಾಲಾ ಶಿಕ್ಷಕರಿಗೆ  ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಟಿವಿ9 ಡಿಜಿಟಲ್​ಗೆ ಚಿಕ್ಕಬಳ್ಳಾಪುರ ಡಿಡಿಪಿಐ ಜಯರಾಮರೆಡ್ಡಿ ಮಾಹಿತಿ ನೀಡಿದ್ದಾರೆ.

ಹಾಸನ‌: ಚನ್ನರಾಯಪಟ್ಟಣ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಹಾಸನ‌ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ, ಚನ್ನರಾಯಪಟ್ಟಣ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆಯಿಂದ ಜ.26ರವರೆಗೆ ರಜೆ ನೀಡಿ ಡಿಸಿ ಗಿರೀಶ್‌ ಆದೇಶ ನೀಡಿದ್ದಾರೆ. ಮಕ್ಕಳಿಗೆ ಸೋಂಕು ಹಿನ್ನೆಲೆ 1 ರಿಂದ 9ನೇ ತರಗತಿವರೆಗೆ ರಜೆ ನೀಡಲಾಗಿದೆ. ಹಾಸನ, ಆಲೂರು ತಾಲೂಕಿನ ಶಾಲೆಗಳಿಗೂ ರಜೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊವಿಡ್ ನೆಗೆಟಿವ್ ನಕಲಿ ವರದಿ: ಒಟ್ಟು 7 ಜನರ ಬಂಧನ

Karnataka Covid19 Update: ಬೆಂಗಳೂರನ್ನು ಮೀರಿಸಿದ ದಕ್ಷಿಣ ಕನ್ನಡ; ಜಿಲ್ಲಾವಾರು ಕೊರೊನಾ ವರದಿ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada