ಚಾಮರಾಜನಗರ ಮನೆಯಲ್ಲಿ ಭಾರಿ ಸ್ಫೋಟ! ತನಿಖೆ ನಡೆಸುತ್ತಿರುವ ಪೊಲೀಸರು

ಮೊದಲು ಮನೆಯ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ ಸಿಲಿಂಡರ್​ಗಳಿಗೆ ಯಾವುದೇ ಹಾನಿಯಾಗಿಲ್ಲ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವಿಚಾರಣೆ ಬಳಿಕ ಭಾರಿ ಸ್ಫೋಟಕ್ಕೆ ನೈಜ ಕಾರಣ ತಿಳಿಯಲಿದೆ.

ಚಾಮರಾಜನಗರ ಮನೆಯಲ್ಲಿ ಭಾರಿ ಸ್ಫೋಟ! ತನಿಖೆ ನಡೆಸುತ್ತಿರುವ ಪೊಲೀಸರು
ಸ್ಫೋಟಗೊಂಡಿರುವ ಮನೆ ಬಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Edited By:

Updated on: Dec 21, 2021 | 2:35 PM

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದ ಮನೆಯಲ್ಲಿ ನಿಗೂಢವಾಗಿ ವಸ್ತು ಸ್ಫೋಟಗೊಂಡಿವೆ. ಸಿದ್ದರಾಜು ಎಂಬುವವರಿಗೆ ಸೇರಿದ ಮನೆಯಲ್ಲಿ ಭಾರಿ ಸ್ಫೋಟವಾಗಿದೆ. ಗ್ಯಾಸ್ ಸಿಲಿಂಡರ್​ಗೆ ಯಾವುದೇ ಹಾನಿಯಾಗದ ಹಿನ್ನೆಲೆ ಮನೆಯಲ್ಲಿ ಸ್ಫೋಟಕ ವಸ್ತು ಇಟ್ಟಿದ್ದರಾ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ. ಸದ್ಯ ಕೊಳ್ಳೇಗಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಮೊದಲು ಮನೆಯ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ ಸಿಲಿಂಡರ್​ಗಳಿಗೆ ಯಾವುದೇ ಹಾನಿಯಾಗಿಲ್ಲ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವಿಚಾರಣೆ ಬಳಿಕ ಭಾರಿ ಸ್ಫೋಟಕ್ಕೆ ನೈಜ ಕಾರಣ ತಿಳಿಯಲಿದೆ.

ಕಳ್ಳತನಕ್ಕೆ ಯತ್ನ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗಲಾಪುರ ಗ್ರಾ.ಪಂ. ಕಚೇರಿ, ಸಹಕಾರಿ ಬ್ಯಾಂಕ್​ನಲ್ಲಿ  ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬೀಗ ಒಡೆದು ಏನೂ ಸಿಗದೆ ವಾಪಸಾಗಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಚೇರಿಯಲ್ಲಿ ಎರಡು ಕಡೆ ಬೀಗ ಮುರಿದಿದ್ದಾರೆ. ಆದರೆ ತಿಜೋರಿಗಳಲ್ಲಿ ಬರೀ ಕಡತಗಳು ಪತ್ತೆಯಾಗಿವೆ. ಈ ಹಿನ್ನೆಲೆ ಬರಿಗೈಯಲ್ಲಿ ಕಳ್ಳರು ವಾಪಸ್ಸಾಗಿದ್ದಾರೆ.

ಇದನ್ನೂ ಓದಿ

ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಹಿಳಾ ಸಬಲೀಕರಣ ಯೋಜನೆಗಳ ಫಲಾನುಭವಿಗಳಿಗೆ ₹1000 ಕೋಟಿ ವರ್ಗಾವಣೆ ಮಾಡಲಿದ್ದಾರೆ ಮೋದಿ

MapmyIndia: 1033 ರೂಪಾಯಿಗೆ ವಿತರಿಸಿದ್ದ ಮ್ಯಾಪ್​​ಮೈಇಂಡಿಯಾ ಷೇರು ರೂ. 1565ಕ್ಕೆ ಬಂಪರ್ ಲಿಸ್ಟಿಂಗ್

Published On - 11:17 am, Tue, 21 December 21