AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MapmyIndia: 1033 ರೂಪಾಯಿಗೆ ವಿತರಿಸಿದ್ದ ಮ್ಯಾಪ್​​ಮೈಇಂಡಿಯಾ ಷೇರು ರೂ. 1565ಕ್ಕೆ ಬಂಪರ್ ಲಿಸ್ಟಿಂಗ್

ಮ್ಯಾಪ್​ಮೈಇಂಡಿಯಾ ಕಂಪೆನಿಯ ಷೇರುಗಳು ಡಿಸೆಂಬರ್ 21, 2021ರಂದು ಶೇ 51ರಷ್ಟು ಪ್ರೀಮಿಯುಂನೊಂದಿಗೆ 1565 ರೂಪಾಯಿಗೆ ಎನ್​ಎಸ್​ಇಯಲ್ಲಿ ಲಿಸ್ಟಿಂಗ್ ಆಗಿದೆ.

MapmyIndia: 1033 ರೂಪಾಯಿಗೆ ವಿತರಿಸಿದ್ದ ಮ್ಯಾಪ್​​ಮೈಇಂಡಿಯಾ ಷೇರು ರೂ. 1565ಕ್ಕೆ ಬಂಪರ್ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Dec 21, 2021 | 11:04 AM

Share

ಕಳೆದ ವಾರ ಐಪಿಒಗೆ ಅಮೋಘ ಪ್ರತಿಕ್ರಿಯೆ ಪಡೆದಿದ್ದ ಮ್ಯಾಪ್​ಮೈಇಂಡಿಯಾ (MapmyIndia) ಮಂಗಳವಾರದಂದು (ಡಿಸೆಂಬರ್ 21, 2021) ಪ್ರಬಲವಾದ ಲಿಸ್ಟಿಂಗ್ ಕಂಡಿದೆ. ಪ್ರತಿ ಷೇರಿಗೆ 1033 ರೂಪಾಯಿಯಂತೆ ವಿತರಿಸಿದ್ದ ಷೇರು ಶೇ 51ರಷ್ಟು ಪ್ರೀಮಿಯಂನೊಂದಿಗೆ 1565 ರೂಪಾಯಿಗೆ ಒಂದರಂತೆ ಎನ್​ಎಸ್​ಇಯಲ್ಲಿ ವಹಿವಾಟು ಶುರು ಮಾಡಿದೆ. ಇನ್ನು ಬಿಎಸ್​ಇಯಲ್ಲಿ ಪ್ರತಿ ಷೇರಿಗೆ 1581 ರೂಪಾಯಿಯಂತೆ ವ್ಯವಹಾರ ಆರಂಭಿಸಿತು. ಮೂರು ದಿನಗಳ ಕಾಲ ಐಪಿಒ ಸಬ್​ಸ್ಕ್ರಿಪ್ಷನ್​ಗಾಗಿ ತೆರೆದಿದ್ದ ಡಿಜಿಟಲ್ ಮ್ಯಾಪಿಂಗ್ ಕಂಪೆನಿ ಮ್ಯಾಪ್​ಮೈಇಂಡಿಯಾದ ಮಾತೃಸಂಸ್ಥೆ ಸಿಇ ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ 154.71 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಸಬ್​ಸ್ಕ್ರಿಪ್ಷನ್ ಡಿಸೆಂಬರ್ 13ನೇ ತಾರೀಕು ಕೊನೆಯಾಗಿತ್ತು.

“ಆರ್ಥಿಕವಾಗಿ ಕಂಪೆನಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮತ್ತು ಉದ್ಯಮದ ಮಾಡೆಲ್ ಸುಸ್ಥಿರವಾಗಿದೆ. ಈ ಐಪಿಒ ಪೂರ್ತಿಯಾಗಿ ಆಫರ್​ ಫಾರ್ ಸೇಲ್ ಆಧಾರಿತವಾದ್ದು ಎಂಬ ವಾಸ್ತವದ ಹೊರತಾಗಿಯೂ ಹೂಡಿಕೆದಾರರು 154 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದರು. ಹೊಸ ತಂತ್ರಜ್ಞಾನಗಳಾದ SaaS, PaaS ಮತ್ತು MaaS ಪ್ಲಾಟ್​ಫಾರ್ಮ್​ಗಳಂತೆ ಇದಕ್ಕೂ ಉಜ್ವಲ ಭವಿಷ್ಯ ಇದೆ,” ಎಂದು ಸ್ವಸ್ತಿಕಾ ಇನ್ವೆಸ್ಟ್​ಮಾರ್ಟ್​ ಲಿಮಿಟೆಡ್​ನ ರೀಸರ್ಚ್ ಹೆಡ್ ಸಂತೋಷ್ ಮೀನಾ ಹೇಳಿದ್ದಾರೆ ಎಂಬುದಾಗಿ “ಮಿಂಟ್” ವರದಿ ಮಾಡಿದೆ.

ಯಾರು ಐಪಿಒದಲ್ಲಿ ಗಳಿಕೆ ಕಂಡಿರುತ್ತಾರೋ ಅವರು 1480 ರೂಪಾಯಿಗೆ ಸ್ಟಾಪ್ ಲಾಸ್ ಇರಿಸಿಕೊಳ್ಳಬೇಕು. ಇನ್ನು ದೀರ್ಘಾವಧಿಗೆ ಈ ಷೇರು ಖರೀದಿ ಇರಿಸಿಕೊಳ್ಳಬೇಕು ಎಂಬ ಉದ್ದೇಶ ಇದ್ದು, ಐಪಿಒದಲ್ಲಿ ವಿತರಣೆ ಆಗಿದ್ದರೆ ದರ ಸ್ವಲ್ಪ ಇಳಿಕೆಯಾಗಿ ಹೊಸ ಹೂಡಿಕೆದಾರರು ಬರುವ ತನಕ ಮುಂದುವರಿಸಬೇಕು. ಐಪಿಒ ಪೂರ್ತಿಯಾಗಿ ಆಫರ್ ಫಾರ್ ಸೇಲ್ (OFS) ಆಗಿತ್ತು. 10,063,945 ಷೇರುಗಳನ್ನು ಈಗಾಗಲೇ ಇರುವ ಷೇರುದಾರರು ಮತ್ತು ಪ್ರವರ್ತಕರು 1000 ರೂಪಾಯಿಯಿಂದ 1033 ರೂ.ಗೆ (ಪ್ರತಿ ಷೇರಿಗೆ) ಐಪಿಒದಲ್ಲಿ ಮಾರಾಟ ಮಾಡಿದರು. ಆರಂಭಿಕ ಷೇರು ಮಾರಾಟಕ್ಕೆ ಪೂರ್ವವಾಗಿ ಕಂಪೆನಿಯು ಆಂಕರ್ ಹೂಡಿಕೆದಾರರ ಮೂಲಕ 312 ಕೋಟಿ ರೂಪಾಯಿ ಸಂಗ್ರಹಿಸಿತು.

ಸಿಇ ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ (C.E. Info Systems Ltd) ಅದರ ಬ್ರ್ಯಾಂಡ್ ಮ್ಯಾಪ್​ಮೈಇಂಡಿಯಾ (MapmyIndia) ಮೂಲಕ ಜನಪ್ರಿಯ ಆಗಿದೆ. ಜಾಗತಿಕ ವೈರ್‌ಲೆಸ್ ತಂತ್ರಜ್ಞಾನಗಳ ಕಂಪೆನಿ ಕ್ವಾಲ್​ಕಾಮ್ (Qualcomm) ಮತ್ತು ಜಪಾನೀಸ್ ಡಿಜಿಟಲ್ ಮ್ಯಾಪಿಂಗ್ ಝೆನ್​ರಿನ್​ (Zenrin)ನಿಂದ ಬೆಂಬಲಿತವಾಗಿದೆ. ಸುಧಾರಿತ ಡಿಜಿಟಲ್ ನಕ್ಷೆಗಳು, ಜಿಯೋಸ್ಪೇಷಿಯಲ್ ಸಾಫ್ಟ್‌ವೇರ್ ಮತ್ತು ಸ್ಥಳ ಆಧಾರಿತ IoT ತಂತ್ರಜ್ಞಾನಗಳ ಪ್ರಮುಖ ಪೂರೈಕೆದಾರ ಮ್ಯಾಪ್​ಮೈಇಂಡಿಯಾ ಆಗಿದೆ.

ಕಂಪೆನಿಯ ಡೇಟಾವು ಆಪಲ್ ಇಂಕ್.ನ ನಕ್ಷೆಗಳು ಮತ್ತು ಅಮೆಜಾನ್​.ಕಾಮ್​ (Amazon.com Inc)ನ ಅಲೆಕ್ಸಾ ಧ್ವನಿ ಸಹಾಯಕವನ್ನು ಹೊಂದಿದೆ. ಫೋನ್‌ಪೇ, ಫ್ಲಿಪ್‌ಕಾರ್ಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಏರ್‌ಟೆಲ್, ಹ್ಯುಂಡೈ, ಎಂಜಿ ಮೋಟಾರ್, ಅವಿಸ್, ಸೇಫ್‌ಎಕ್ಸ್‌ಪ್ರೆಸ್ ಮತ್ತು ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (ಜಿಎಸ್‌ಟಿಎನ್) ಕಂಪೆನಿಯ ಗ್ರಾಹಕ ಸಂಸ್ಥೆಗಳಾಗಿವೆ.

ಇದನ್ನೂ ಓದಿ: Rategain Travel Technologies Listing: 425 ರೂಪಾಯಿಗೆ ವಿತರಿಸಿದ್ದ ರೇಟ್​ಗೇಯ್ನ್ ಷೇರು 360 ರೂ.ಗೆ ಲಿಸ್ಟಿಂಗ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ