Debit, credit card: ಡೆಬಿಟ್, ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಜನವರಿಯಿಂದ ಬದಲಾವಣೆ
2022ರ ಜನವರಿಯಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಾವಳಿಗಳಿಗಳಲ್ಲಿ ಬದಲಾವಣೆ ಆಗಲಿದೆ. ಇನ್ನು ಮುಂದೆ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.
ಪ್ರತಿ ವ್ಯಾಪಾರಿ ಹಾಗೂ ಪೇಮೆಂಟ್ ಗೇಟ್ವೇಗಳ ಬಳಿ ಇರುವ ಗ್ರಾಹಕರ ಸೂಕ್ಷ್ಮ ಡೇಟಾವನ್ನು ಅಳಿಸಿ ಹಾಕುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಪಾವತಿಯನ್ನು ಹೆಚ್ಚು ಸುರಕ್ಷಿತವಾಗಿ ಮಾಡಲು ಅನುಕೂಲ ಆಗುವಂತೆ ಈ ಆದೇಶ ನೀಡಲಾಗಿದೆ. ಹೊಸ ನಿಯಮವು ಜನವರಿ 1, 2022ರಿಂದ ಅನ್ವಯ ಆಗುತ್ತದೆ. ವಹಿವಾಟು ನಡೆಸುವುದಕ್ಕೆ ಎನ್ಕ್ರಿಪ್ಟೆಡ್ ಟೋಕನ್ಗಳನ್ನು ವ್ಯಾಪಾರಿಗಳು ಬಳಸಬೇಕಾಗುತ್ತದೆ. ಆರ್ಬಿಐ ಕಡ್ಡಾಯ ಮಾಡಿರುವ ಹೊಸ ಮಾರ್ಗದರ್ಶಿ ಬಗ್ಗೆ ಗ್ರಾಹಕರ ಗಮನಕ್ಕೆ ತರುವುದಕ್ಕೆ ಬ್ಯಾಂಕ್ಗಳು ಅಧಿಸೂಚನೆ ಹೊರಡಿಸುತ್ತಿವೆ. “ವಿಸ್ತೃತ ಕಾರ್ಡ್ ಭದ್ರತೆಗಾಗಿ ಆರ್ಬಿಐ ಕಡ್ಡಾಯಗೊಳಿಸಿದ ನಿಯಮದ ಪ್ರಕಾರ ಜನವರಿ 1, 2022ರಿಂದ ಅನ್ವಯ ಆಗುವಂತೆ ನಿಮ್ಮ ಎಚ್ಡಿಎಫ್ಸಿ ಕಾರ್ಡ್ ಮಾಹಿತಿ ಮರ್ಚೆಂಟ್ ವೆಬ್ಸೈಟ್/ಆ್ಯಪ್ನಲ್ಲಿ ವ್ಯಾಪಾರಿಗಳಿಂದ ಅಳಿಸಲಾಗುತ್ತದೆ. ಪ್ರತಿ ಸಲ ಪಾವತಿಸುವಾಗ ಕಾರ್ಡ್ನ ಪೂರ್ತಿ ಮಾಹಿತಿ ನಮೂದಿಸಬೇಕು ಅಥವಾ ಟೋಕನೈಸೇಷನ್ ಆಯ್ಕೆ ಮಾಡಿಕೊಳ್ಳಬೇಕು,” ಎಂದು ಎಚ್ಡಿಎಫ್ಸಿನಿಂದ ಕಳೆದ ವಾರ ಕಳಿಸಿದ ಎಸ್ಸೆಮ್ಮೆಸ್ನಲ್ಲಿ ತಿಳಿಸಲಾಗಿದೆ.
ಏನಿದು ಆರ್ಬಿಐ ನಿಯಮ? ಈ ವರ್ಷದ ಸೆಪ್ಟೆಂಬರ್ನಲ್ಲಿ ಹೊರಡಿಸಿದ ನೋಟಿಸ್ನಲ್ಲಿ ಆರ್ಬಿಐ ಹೇಳಿದಂತೆ, “ಜನವರಿ 1, 2022ರಿಂದ ಕಾರ್ಡ್ ವಹಿವಾಟುಗಳು/ಪಾವತಿ ಜಾಲ, ಕಾರ್ಡ್ ವಿತರಿಸುವರನ್ನು ಹೊರತುಪಡಿಸಿ ಮತ್ತು/ಅಥವಾ ಕಾರ್ಡ್ ನೆಟ್ವರ್ಕ್ಸ್ನ ಇತರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿತ್ತು. ಈ ಹಿಂದೆ ಸಂಗ್ರಹಿಸಿದ ಅಂಥ ಡೇಟಾಗಳನ್ನು ಶುದ್ಧೀಕರಿಸಬೇಕು.” “ವಹಿವಾಟುಗಳ ಟ್ರ್ಯಾಕಿಂಗ್ ಮತ್ತು/ಅಥವಾ ರಿಕನ್ಸಲಿಯೇಷನ್ ಉದ್ದೇಶಗಳಿಗೆ, ಸಂಸ್ಥೆಗಳು ಸೀಮಿತ ಡೇಟಾವನ್ನು ಸಂಗ್ರಹಿಸಬಹುದು- ಅದಕ್ಕಾಗಿ ಕಾರ್ಡ್ ಸಂಖ್ಯೆಯ ಕೊನೆ ನಾಲ್ಕು ಅಂಕಿ ಮತ್ತು ಕಾರ್ಡ್ ವಿತರಕರ ಹೆಸರು- ಅನ್ವಯ ಆಗುವ ನಿಯಮಾವಳಿಗಳಿಗೆ ತಕ್ಕಂತೆ ಇರಬೇಕು,” ಎಂದು ಸೇರಿಸಲಾಗಿದೆ.
ಏನಿದು ಟೋಕನೈಸೇಷನ್? ಟೋಕನೈಸೇಷನ್ ಅಂದರೆ ವಾಸ್ತವ ಕಾರ್ಡ್ ಮಾಹಿತಿಯನ್ನು ಪರ್ಯಾಯ ಕೋಡ್ ಎಂದು ಕರೆಸಿಕೊಳ್ಳುವ “ಟೋಕನ್” ಮೂಲಕ ಬದಲಿ ಮಾಡುತ್ತದೆ. ಕಾರ್ಡ್, ಟೋಕನ್ ರಿಕ್ವೆಸ್ಟರ್ (ಕಾರ್ಡ್ ಟೋಕನೈಸೇಷನ್ಗಾಗಿ ಗ್ರಾಹಕರಿಂದ ಮನವಿ ಸ್ವೀಕರಿಸುವ ಸಂಸ್ಥೆಗಳು ಅದನ್ನು ಟೋಕನ್ ವಿತರಿಸುವುದಕ್ಕೆ ಕಾರ್ಡ್ ನೆಟ್ವರ್ಕ್ಗೆ ದಾಟಿಸುತ್ತದೆ) ಮತ್ತು ಸಾಧನ (ಇಲ್ಲಿಂದ ಮುಂದೆ “ಗುರುತಿಸಲಾದ ಸಾಧನ” ಎಂದು ಉಲ್ಲೇಖಿಸಲಾಗುತ್ತದೆ) ವಿಶಿಷ್ಟವಾದ ಸಂಯೋಜನೆ ಆಗಿರುತ್ತದೆ.
ಟೋಕನ್ ವಿನಂತಿದಾರರು ಆ್ಯಪ್ ಮೂಲಕ ಆರಂಭಿಸಿದ ಮನವಿಗೆ ಕಾರ್ಡ್ದಾರರು ಟೋಕನೈಸ್ಡ್ ಪಡೆಯಬಹುದು. ಟೋಕನ್ ವಿನಂತಿದಾರರ ಮನವಿಯನ್ನು ಕಾರ್ಡ್ ನೆಟ್ವರ್ಕ್ಗೆ ದಾಟಿಸುತ್ತದೆ. ಕಾರ್ಡ್ ವಿತರಕರ ಒಪ್ಪಂದದ ಮೇಲೆ, ಕಾರ್ಡ್, ಟೋಕನ್ ವಿನಂತಿದಾರರು ಮತ್ತು ಸಾಧನದ ಸಂಯೋಜನೆಯಲ್ಲಿ ಟೋಕನ್ಗಾಗಿ ವಿತರಣೆ ಮಾಡಲಾಗುತ್ತದೆ.
ಜನವರಿ 1, 2022ರ ಏನು ಮಾಡಬೇಕು? ಒಂದು ಸಲ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಲು ಆರಂಭಿಸಿದ ಮೇಲೆ ವ್ಯಾಪಾರಿಗಳು ಟೋಕನೈಸೇಷನ್ ಆರಂಭಿಸುತ್ತಾರೆ. ಕಾರ್ಡ್ ಟೋಕನೈಸ್ ನಿಮ್ಮ ಸಮ್ಮತಿಗೆ ಕೇಳಲಾಗುತ್ತದೆ. ಒಂದು ಸಲ ಒಪ್ಪಿಗೆ ನೀಡಿದ ಮೇಲೆ ಕಾರ್ಡ್ ನೆಟ್ವರ್ಕ್ಗೆ ಟೋಕನೈಸೇಷನ್ ಮನವಿಯನ್ನು ವ್ಯಾಪಾರಿಗಳು ಕಳುಹಿಸುತ್ತಾರೆ. ಕಾರ್ಡ್ ನೆಟ್ವರ್ಕ್ ಆ ನಂತರ ಟೋಕನ್ ಸೃಷ್ಟಿಸುತ್ತದೆ. ಅದು ನಿಮ್ಮ 16- ಅಂಕಿಯ ಕಾರ್ಡ್ ಸಂಖ್ಯೆಯ ಪ್ರಾಕ್ಸಿಯಾಗಿ ಕೆಲಸ ಮಾಡುತ್ತದೆ. ಮತ್ತು ಅದನ್ನು ವಾಪಸ್ ವ್ಯಾಪಾರಿಗಳಿಗೆ ಕಳುಹಿಸಲಾಗುತ್ತದೆ. ಭವಿಷ್ಯದ ವಹಿವಾಟುಗಳಿಗೆ ಈ ಟೋಕನ್ ಸಂಗ್ರಹಿಸಲಾಗುತ್ತದೆ. ವಹಿವಾಟು ಮಂಜೂರು ಮಾಡುವುದಕ್ಕೆ ನಿಮ್ಮ ಸಿವಿವಿ ಮತ್ತು ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ನೀವು ಮತ್ತೊಂದು ಕಾರ್ಡ್ ಬಳಸಬೇಕಾದರೆ ಇದೇ ಪ್ರಕ್ರಿಯೆ ಮತ್ತೆ ಅನುಸರಿಸಬೇಕಾಗುತ್ತದೆ.
ಕಾರ್ಡ್ ಟೋಕನೈಸೇಷನ್ ಸುರಕ್ಷಿತವೇ? “ವಾಸ್ತವ ಕಾರ್ಡ್ ಡೇಟಾ, ಟೋಕನ್ ಮತ್ತು ಸಂಬಂಧಪಟ್ಟ ಮಾಹಿತಿಗಳನ್ನು ಅಧಿಕೃತ ಕಾರ್ಡ್ ನೆಟ್ವರ್ಕ್ಗಳು ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸುತ್ತದೆ. ಟೋಕನ್ ವಿನಂತಿದಾರರು ಪ್ರಾಥಮಿಕ ಖಾತೆ ಸಂಖ್ಯೆ (PAN), ಕಾರ್ಡ್ ಸಂಖ್ಯೆ, ಅಥವಾ ಇತರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಸಾಧ್ಯವಿಲ್ಲ. ಸುರಕ್ಷಿತ ಮತ್ತು ಸುಭದ್ರ ಅಂತರರಾಷ್ಟ್ರೀಯ ಪದ್ಧತಿಗಳು/ಜಾಗತಿಕವಾಗಿ ಒಪ್ಪಿತವಾದ ಗುಣಮಟ್ಟ ಅನುಸರಿಸುವಾಗ ಟೋಕನ್ ವಿನಂತಿದಾರರಿಗೆ ಕಾರ್ಡ್ ನೆಟ್ವರ್ಕ್ ಕಡ್ಡಾಯ ಮಾಡಿದೆ,” ಎಂದು ಆರ್ಬಿಐ ತನ್ನ ವೆಬ್ಸೈಟ್ನಲ್ಲಿ ಹೇಳಿದೆ.
ಇದನ್ನೂ ಓದಿ: Bank Holidays: ಡಿಸೆಂಬರ್ ಕೊನೆಯ 11 ದಿನದ ಪೈಕಿ 6 ದಿನ ಬ್ಯಾಂಕ್ ರಜಾ
Published On - 1:55 pm, Tue, 21 December 21