Bank Holidays: ಡಿಸೆಂಬರ್ ಕೊನೆಯ 11 ದಿನದ ಪೈಕಿ 6 ದಿನ ಬ್ಯಾಂಕ್ ರಜಾ
ಡಿಸೆಂಬರ್‌ನ ಕೊನೆಯ 11 ದಿನಗಳ ಪೈಕಿ 6 ದಿನ ಬ್ಯಾಂಕ್‌ಗಳಿಗೆ ರಜಾ ಇದೆ. ಯಾವ ಕಾರಣಕ್ಕೆ ಮತ್ತು ಯಾವ ದಿನ ಎಂಬ ಮಾಹಿತಿ ಇಲ್ಲಿದೆ.
ಡಿಸೆಂಬರ್‌ನ ಕೊನೆಯ ಹನ್ನೊಂದು ದಿನಗಳಲ್ಲಿ ಭಾರತದ ಬ್ಯಾಂಕ್‌ಗಳಿಗೆ ಒಟ್ಟು ಆರು ರಜೆಗಳಿವೆ. ಡಿಸೆಂಬರ್ 24ರಿಂದ ಸಾರ್ವಜನಿಕ, ಖಾಸಗಿ ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ತಿಂಗಳ ಉಳಿದ ಹನ್ನೊಂದು ದಿನಗಳಲ್ಲಿ 6 ದಿನಗಳವರೆಗೆ ಮುಚ್ಚಿರುತ್ತವೆ. ಈ ರಜಾದಿನಗಳಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಮುನ್ನಾದಿನದಂತಹವೂ ಸೇರಿವೆ ಮತ್ತು ಭಾನುವಾರಗಳು ಹಾಗೂ ನಾಲ್ಕನೇ ಶನಿವಾರವನ್ನು ಒಳಗೊಂಡಿರುತ್ತದೆ. ಇದರರ್ಥ, ಹೊಸ ವರ್ಷದ ಮುನ್ನಾದಿನವನ್ನು ಆಚರಿಸುವುದರ ಜೊತೆಗೆ ಬ್ಯಾಂಕಿಂಗ್ ಗ್ರಾಹಕರು ಮತ್ತು ಎಲ್ಲಾ ಬ್ಯಾಂಕ್ ಸಿಬ್ಬಂದಿ ತಿಂಗಳ ಕೊನೆಯ ವಾರದಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು 6 ದಿನ ರಜಾ ಇರುತ್ತದೆ.
ಡಿಸೆಂಬರ್‌ನ ಕೊನೆಯ 11 ದಿನಗಳಲ್ಲಿ ಬ್ಯಾಂಕ್ ರಜಾದಿನಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರಜಾ ಪಟ್ಟಿಯ ಪ್ರಕಾರ, ಡಿಸೆಂಬರ್ 24 ಮತ್ತು 25 ರಂದು ಐಜ್ವಾಲ್, ಶಿಲ್ಲಾಂಗ್, ಅಗರ್ತಲಾ, ಅಹಮದಾಬಾದ್, ಬೇಲಾಪುರ್, ಭೋಪಾಲ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹಟಿಯಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್, ರಾಂಚಿ, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಕ್ರಿಸ್‌ಮಸ್ ಹಬ್ಬ (ಕ್ರಿಸ್‌ಮಸ್ ಈವ್) ಮತ್ತು ಕ್ರಿಸ್‌ಮಸ್ ಕಾರಣ ರಜಾ ಇರುತ್ತದೆ.
ಕ್ರಿಸ್‌ಮಸ್ ಆಚರಣೆಯ ಕಾರಣ ಡಿಸೆಂಬರ್ 27ರಂದು ಐಜ್ವಾಲ್‌ನಲ್ಲಿರುವ ಬ್ಯಾಂಕ್‌ಗಳಿಗೆ ರಜಾ ಇರುತ್ತದೆ. ಮಿಜೋರಾಂನ ರಾಜಧಾನಿ ಐಜ್ವಾಲ್ನಲ್ಲಿ ಡಿಸೆಂಬರ್ 24, 25 ಮತ್ತು 27ರಂದು ಒಟ್ಟು ಮೂರು ಕ್ರಿಸ್ಮಸ್ ರಜಾದಿನಗಳನ್ನು ಹೊಂದಿರುವ ದೇಶದ ಏಕೈಕ ನಗರವಾಗಿದೆ. ಕಿಯಾಂಗ್ ನಂಗ್‌ಬಾ ಹಬ್ಬದ ಕಾರಣ ಶಿಲ್ಲಾಂಗ್‌ನಲ್ಲಿರುವ ಎಲ್ಲ ಬ್ಯಾಂಕ್‌ಗಳು ಡಿಸೆಂಬರ್ 30ರಂದು ಮುಚ್ಚಿರುತ್ತವೆ. 2021ರ ಹೊಸ ವರ್ಷದ ಮುನ್ನಾದಿನದಂದು ಐಜ್ವಾಲ್‌ನಲ್ಲಿರುವ ಬ್ಯಾಂಕ್‌ಗಳಿಗೆ ರಜಾ ಇರುತ್ತದೆ.
24ನೇ ಡಿಸೆಂಬರ್ 2021: ಕ್ರಿಸ್‌ಮಸ್ ಹಬ್ಬ (ಕ್ರಿಸ್‌ಮಸ್ ಈವ್) 25ನೇ ಡಿಸೆಂಬರ್ 2021: ಕ್ರಿಸ್ಮಸ್ ಮತ್ತು ನಾಲ್ಕನೇ ಶನಿವಾರ 27ನೇ ಡಿಸೆಂಬರ್ 2021: ಕ್ರಿಸ್ಮಸ್ ಆಚರಣೆ 30ನೇ ಡಿಸೆಂಬರ್ 2021: ಯು ಕಿಯಾಂಗ್ ನಂಗ್‌ಬಾಹ್ 31ನೇ ಡಿಸೆಂಬರ್ 2021: ಹೊಸ ವರ್ಷದ ಮುನ್ನಾದಿನ
– ಈ ಮೇಲ್ಕಂಡ ದಿನದಂದು ರಜಾ ಇರುತ್ತದೆ ಎಂಬುದು ಗ್ರಾಹಕರಿಗೆ ತಿಳಿದಿರಬೇಕು. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಆರ್ಬಿಐ ರಜಾ ದಿನಗಳನ್ನು ಹೊರತುಪಡಿಸಿ ಎಲ್ಲ ಬ್ಯಾಂಕ್‌ಗಳಿಗೆ ತಿಂಗಳ ಕೊನೆಯ ಭಾನುವಾರದ ಕಾರಣ ಡಿಸೆಂಬರ್ 26ರಂದು ರಜಾ ಇರುತ್ತದೆ. ಗ್ರಾಹಕರು ಯಾವುದೇ ತುರ್ತು ಬ್ಯಾಂಕಿಂಗ್ ಅಗತ್ಯಗಳಿಗಾಗಿ ತಮ್ಮ ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳಬಹುದು. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಮನೆಯಿಂದಲೇ ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC, ICICI ಬ್ಯಾಂಕ್ ಮತ್ತು Axis ಬ್ಯಾಂಕ್‌ನಂತಹ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತವೆ ಮತ್ತು ಫೋನ್ ಬ್ಯಾಂಕಿಂಗ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಕೂಡ ಈ ಸೇವೆಗಳ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ: Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಟಾಪ್ 10 ಬ್ಯಾಂಕ್ಗಳಿವು