ರೀಟೇಲ್ ಬೆಲೆ ಇಳಿಸಲು ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಶೇ 12.5ಕ್ಕೆ ಕಡಿತಗೊಳಿಸಿದ ಸರ್ಕಾರ

ಸಂಸ್ಕರಿತ ತಾಳೆ ಎಣ್ಣೆ ರೀಟೇಲ್​ ಬೆಲೆಯನ್ನು ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಆಮದು ಸುಂಕವನ್ನು ಶೇ 12.5ಕ್ಕೆ ಕಡಿತಗೊಳಿಸಿದೆ.

ರೀಟೇಲ್ ಬೆಲೆ ಇಳಿಸಲು ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಶೇ 12.5ಕ್ಕೆ ಕಡಿತಗೊಳಿಸಿದ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 21, 2021 | 7:16 PM

ಅಡುಗೆ ಎಣ್ಣೆಗಳ ಹೆಚ್ಚಿನ ಬೆಲೆಗಳ ಬಗ್ಗೆ ಕಳವಳದ ಹಿನ್ನೆಲೆಯಲ್ಲಿ ಸರ್ಕಾರವು ದೇಶೀಯ ಸರಬರಾಜುಗಳನ್ನು ಹೆಚ್ಚಿಸಲು ಮತ್ತು ದೇಶೀಯ ರೀಟೇಲ್ ಮಾರುಕಟ್ಟೆಗಳಲ್ಲಿ ದರಗಳನ್ನು ತಗ್ಗಿಸಲು ಮುಂದಿನ ವರ್ಷ ಮಾರ್ಚ್​ವರೆಗೆ ಸಂಸ್ಕರಿಸಿದ (ರೀಫೈನ್ಡ್) ತಾಳೆ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ 17.5ರಿಂದ ಶೇ 12.5​​ಕ್ಕೆ ಇಳಿಸಿದೆ. ಮೂಲ ಕಸ್ಟಮ್ ಸುಂಕವನ್ನು (BCD) ಕಡಿತ ಮಾಡುವುದರೊಂದಿಗೆ ಭಾರತೀಯ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​(SEA) ಪ್ರಕಾರ, ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಸಂಸ್ಕರಿಸಿದ ಪಾಮೊಲಿನ್ ಎರಡರ ಮೇಲಿನ ಪರಿಣಾಮಕಾರಿ ಲೆವಿ (ಸಾಮಾಜಿಕ ಕಲ್ಯಾಣ ಸೆಸ್ ಸೇರಿದಂತೆ) ಶೇ 19.25ರಿಂದ ಶೇ 13.75ಕ್ಕೆ ಇಳಿಯುತ್ತದೆ. ಪರೋಕ್ಷ ತೆರಿಗೆ ಕೇಂದ್ರೀಯ ಮಂಡಳಿ ಮತ್ತು ಕಸ್ಟಮ್ಸ್ (ಸಿಬಿಐಸಿ) ಸೋಮವಾರ ತಡರಾತ್ರಿ ಅಧಿಸೂಚನೆಯನ್ನು ಹೊರಡಿಸಿತು. ಇದು “ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಅದರ ಉಪ ಉತ್ಪನ್ನಗಳ ಮೇಲಿನ BCD ಅನ್ನು ಮಾರ್ಚ್ 31, 2022ರ ವರೆಗೆ ಶೇ 17.5ರಿಂದ ಶೇ 12.5ಕ್ಕೆ ಇಳಿಸಲು ಪ್ರಯತ್ನಿಸುತ್ತದೆ”. ಹೊಸ ದರವು ಮಂಗಳವಾರದಿಂದಲೇ ಜಾರಿಗೆ ಬಂದಿದೆ.

ಶೇಂಗಾ ಎಣ್ಣೆಯ ಸರಾಸರಿ ರೀಟೇಲ್ ಬೆಲೆ ಸೋಮವಾರ ಪ್ರತಿ ಕೇಜಿಗೆ 181.48 ರೂಪಾಯಿ, ಸಾಸಿವೆ ಎಣ್ಣೆ ಕೆಜಿಗೆ 187.43 ರೂಪಾಯಿ, ವನಸ್ಪತಿ ಕೇಜಿಗೆ 138.5 ರೂಪಾಯಿ, ಸೋಯಾಬೀನ್ ಎಣ್ಣೆ ಕೇಜಿಗೆ 150.78 ರೂಪಾಯಿ, ಸೂರ್ಯಕಾಂತಿ ಎಣ್ಣೆ ಕೇಜಿಗೆ 163.18 ರೂಪಾಯಿ ಮತ್ತು ತಾಳೆ ಎಣ್ಣೆಯ ಸರಾಸರಿ ಬೆಲೆಗಳು ಪ್ರತಿ ಕೆಜಿಗೆ 129.94 ರೂಪಾಯಿ ಇದೆ. ಇದು ಗ್ರಾಹಕ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯಿಂದ ತಿಳಿದುಬಂದಿದೆ. ಸುಂಕ ಕಡಿತದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಇಎ ಅಧ್ಯಕ್ಷ ಅತುಲ್ ಚತುರ್ವೇದಿ, “ಸಿಪಿಒ ಮೇಲಿನ ಆಮದು ಸುಂಕವನ್ನು ಏಕಕಾಲದಲ್ಲಿ ಕಡಿಮೆ ಮಾಡದೆ ಪಾಮೊಲಿನ್ (ಸಂಸ್ಕರಿಸಿದ ಪಾಮ್) ಮೇಲಿನ ಆಮದು ಸುಂಕವನ್ನು ಶೇ 19.25ರಿಂದ ಶೇ 13.75ಕ್ಕೆ ಇಳಿಸುವ ಘೋಷಣೆಯು ಸಂಸ್ಕರಿಸಿದ ಪಾಮೊಲಿನ್ ಆಮದುಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಸಂಸ್ಕರಣಾಗಾರಗಳಿಗೆ CPO ಕಚ್ಚಾ ವಸ್ತುವಾಗಿದೆ.”

ಆತ್ಮ ನಿರ್ಭರ್ ತತ್ವಕ್ಕೆ ವಿರುದ್ಧ “ಇದು ನಮ್ಮ ಆತ್ಮ ನಿರ್ಭರ್ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಭಾರತದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮೌಲ್ಯವರ್ಧನೆಗೆ ಹಾನಿಯಾಗಬಹುದು” ಎಂದು ಅವರು ಹೇಳಿದ್ದಾರೆ. ಚತುರ್ವೇದಿ ಅವರ ಪ್ರಕಾರ, ಈ ಕಡಿತಕ್ಕೆ ಮಾರ್ಚ್ 31ನೇ ತಾರೀಕು ಗಡುವಾಗಿದೆ ಎಂಬುದೇ ಬೆಳ್ಳಿ ಚುಕ್ಕೆಯಂತಿದೆ. SEA ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಅವರು ಮಾತನಾಡಿ, ಕಚ್ಚಾ ತಾಳೆ ಎಣ್ಣೆ (CPO)ಯೊಂದಿಗೆ ಸುಂಕದ ವ್ಯತ್ಯಾಸವು ಈಗ ಕೇವಲ ಶೇ 5.5ಕ್ಕೆ ಇಳಿದಿರುವುದರಿಂದ ಸಂಸ್ಕರಿಸಿದ ತಾಳೆ ಎಣ್ಣೆಯ ಆಮದು ಹೆಚ್ಚಾಗುತ್ತದೆ. CPO ಮೇಲಿನ ಪರಿಣಾಮಕಾರಿ ಸುಂಕವು ಪ್ರಸ್ತುತ ಶೇ 8.25 ಆಗಿದೆ.

ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಬಿಸಿಡಿಯನ್ನು ಕಡಿಮೆ ಮಾಡುವುದರ ಜೊತೆಗೆ, ಡಿಸೆಂಬರ್ 2022ರವರೆಗೆ ಇನ್ನೂ ಒಂದು ವರ್ಷದವರೆಗೆ ಪರವಾನಗಿ ಇಲ್ಲದೆ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ವ್ಯಾಪಾರಿಗಳಿಗೆ ಅವಕಾಶ ನೀಡಲು ಸರ್ಕಾರ ಸೋಮವಾರ ನಿರ್ಧರಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಕಚ್ಚಾ ತಾಳೆ ಎಣ್ಣೆ ಮತ್ತು ಇತರ ಕೆಲವು ಕೃಷಿ ಉತ್ಪನ್ನಗಳ ಹೊಸ ಉತ್ಪನ್ನ ಕಾಂಟ್ರ್ಯಾಕ್ಟ್ ಪ್ರಾರಂಭಿಸುವುದನ್ನು ನಿಷೇಧಿಸಿದೆ. ಸಗಟು ಹಣದುಬ್ಬರವು ಅಧಿಕವಾಗಿರುವ ಸಮಯದಲ್ಲಿ ಈ ಎಲ್ಲ ಕ್ರಮಗಳನ್ನು ಜಾರಿಗೆ ತರಲಾಗಿದೆ. ಖಾದ್ಯ ತೈಲದ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ, ಸರ್ಕಾರವು ಈ ವರ್ಷ ಹಲವಾರು ಬಾರಿ ಸಂಸ್ಕರಿಸಿದ ಮತ್ತು ಕಚ್ಚಾ ಖಾದ್ಯ ತೈಲಗಳ ಮೇಲೆ ಆಮದು ಸುಂಕವನ್ನು ಕಡಿತಗೊಳಿಸಿದೆ. ಆಮದು ಸುಂಕದ ಮೇಲಿನ ಕೊನೆಯ ಕಡಿತವನ್ನು ಸರ್ಕಾರವು ಅಕ್ಟೋಬರ್ 14ರಂದು ಮಾಡಿತು.

ಆಮದು ಮಾಡಿಕೊಳ್ಳಲು ಡಿಸೆಂಬರ್ 2022ರ ತನಕ ಅನುಮತಿ ವಾಣಿಜ್ಯ ಸಚಿವಾಲಯವು ತಿಳಿಸಿದಂತೆ, ವ್ಯಾಪಾರಿಗಳಿಗೆ ಪರವಾನಗಿ ಇಲ್ಲದೆಯೇ ‘ರಿಫೈನ್ಡ್ ಬ್ಲೀಚ್ಡ್ ಡಿಯೋಡರೈಸ್ಡ್ (ಆರ್‌ಬಿಡಿ) ಪಾಮ್ ಆಯಿಲ್’ ಮತ್ತು ‘ರಿಫೈನ್ಡ್ ಬ್ಲೀಚ್ಡ್ ಡಿಯೋಡರೈಸ್ಡ್ ಪಾಮೋಲಿನ್’ ಆಮದು ಮಾಡಿಕೊಳ್ಳಲು ಡಿಸೆಂಬರ್ 2022ರ ವರೆಗೆ ಅನುಮತಿ ನೀಡಿದೆ ಎಂದು ಹೇಳಿದ್ದಾರೆ. SEA ಪ್ರಕಾರ, ಖಾದ್ಯ ತೈಲಗಳ ಆಮದಿನ ಮೇಲೆ ಭಾರತದ ಅವಲಂಬನೆಯು ಸುಮಾರು 22-22.5 ಮಿಲಿಯನ್ ಟನ್‌ಗಳಾಗಿದ್ದು, ಒಟ್ಟು ಬಳಕೆಯಲ್ಲಿ ಸುಮಾರು ಶೇ 65 ಆಗಿದೆ. ಬೇಡಿಕೆ ಮತ್ತು ದೇಶೀಯ ಪೂರೈಕೆಯ ಮಧ್ಯದ ಅಂತರವನ್ನು ಕಡಿಮೆ ಮಾಡಲು ದೇಶವು 13-15 ಮಿಲಿಯನ್ ಟನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ.

ಕಳೆದ ಎರಡು ಮಾರುಕಟ್ಟೆ ವರ್ಷಗಳಲ್ಲಿ (ನವೆಂಬರ್‌ನಿಂದ ಅಕ್ಟೋಬರ್‌ವರೆಗೆ) ಕೊರೊನಾದಿಂದಾಗಿ ಆಮದು ಮಾಡಿಕೊಂಡ ಪ್ರಮಾಣವು ಸುಮಾರು 13 ಮಿಲಿಯನ್ ಟನ್‌ಗಳಿಗೆ ಕಡಿಮೆಯಾಗಿದೆ. 2019-20 ತೈಲ ಮಾರುಕಟ್ಟೆ ವರ್ಷದಲ್ಲಿ ಆಮದು ಸುಮಾರು 71,600 ಕೋಟಿ ಮೌಲ್ಯದ 13.2 ಮಿಲಿಯನ್ ಟನ್‌ಗೆ ಇಳಿದಿದೆ. 2020-21ರಲ್ಲಿ ಭಾರತವು ಇದೇ ಪ್ರಮಾಣವನ್ನು ಆಮದು ಮಾಡಿಕೊಂಡಿತು. ಆದರೆ ಆಮದು ಬಿಲ್ ಶೇ 63ರಷ್ಟು ಜಿಗಿದಿದೆ ಮತ್ತು ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳ ಹೆಚ್ಚಳದಿಂದಾಗಿ ರೂ. 1.17 ಲಕ್ಷ ಕೋಟಿಗಳ ಆತಂಕಕಾರಿ ಮಟ್ಟವನ್ನು ಮುಟ್ಟಿದೆ ಎಂದು ಎಸ್‌ಇಎ ಈ ಹಿಂದೆ ತಿಳಿಸಿತ್ತು.

ಇದನ್ನೂ ಓದಿ: Edible Oil: ಕಳೆದ 30 ದಿನದಲ್ಲಿ ಖಾದ್ಯ ತೈಲಗಳ ಬೆಲೆ 8ರಿಂದ 10 ರೂ. ಇಳಿಕೆ; ಮುಂದಿನ ತಿಂಗಳಲ್ಲಿ ಇನ್ನಷ್ಟು ಕಡಿಮೆ ನಿರೀಕ್ಷೆ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ