ಭಾರತದ ರಿಫೈನರ್ಗಳಿಂದ ನವೆಂಬರ್‌ನಲ್ಲಿ 21 ತಿಂಗಳಲ್ಲೇ ಗರಿಷ್ಠ ಮಟ್ಟದ ಕಚ್ಚಾ ತೈಲ ಪ್ರೊಸೆಸಿಂಗ್
2020ರ ಫೆಬ್ರವರಿಯ ನಂತರ ನವೆಂಬರ್‌ನಲ್ಲಿ ಭಾರತದ ರಿಫೈನರ್‌ಗಳ ಕಚ್ಚಾ ತೈಲ ಪ್ರೊಸೆಸಿಂಗ್ 21 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಆ ಬಗ್ಗೆ ವಿವರ ಇಲ್ಲಿದೆ.
ಭಾರತೀಯ ರಿಫೈನರ್‌ಗಳ ಕಚ್ಚಾ ತೈಲ ಪ್ರೊಸೆಸಿಂಗ್ 2020ರ ಫೆಬ್ರವರಿ ನಂತರದಲ್ಲಿ ಈ ನವೆಂಬರ್‌ನಲ್ಲಿ ಅತ್ಯಧಿಕವಾಗಿದೆ ಎಂದು ಸರ್ಕಾರಿ ಅಂಕಿ- ಅಂಶಗಳು ಮಂಗಳವಾರ ತೋರಿಸಿವೆ. ಏಕೆಂದರೆ ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕರ ಬೇಡಿಕೆಯಲ್ಲಿ ಸ್ಥಿರವಾದ ಏರಿಕೆ ಭರವಸೆಯು ರಿಫೈನರ್‌ಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ. ರಿಫೈನರ್‌ಗಳು ಕಳೆದ ತಿಂಗಳು ದಿನಕ್ಕೆ 5.25 ಮಿಲಿಯನ್ ಬ್ಯಾರೆಲ್‌ಗಳನ್ನು (21.48 ಮಿಲಿಯನ್ ಟನ್‌ಗಳು) ಸಂಸ್ಕರಿಸಿವೆ. ಅಕ್ಟೋಬರ್‌ನಲ್ಲಿ 4.96 ಮಿಲಿಯನ್ ಬಿಪಿಡಿಯಿಂದ ಶೇ 5.9ರಷ್ಟು ಹೆಚ್ಚಾಗಿದೆ ಎಂದು ದತ್ತಾಂಶಗಳು ತೋರಿಸಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಪ್ರೊಸೆಸಿಂಗ್ ಸುಮಾರು ಶೇ 3.4ರಷ್ಟು ಏರಿಕೆ ಕಂಡಿದೆ.
“ರಿಫೈನರ್‌ಗಳು ಸಾಮಾನ್ಯವಾಗಿ ಮುಂದಿನ ಕೆಲವು ತಿಂಗಳಲ್ಲಿ ಬೇಡಿಕೆಯ ಸಾಮರ್ಥ್ಯವನ್ನು ನೋಡುತ್ತವೆ. ಮತ್ತು ಇತ್ತೀಚಿನ ಕುಸಿತದ ಹೊರತಾಗಿಯೂ ಅವು ಇನ್ನೂ ಭಾರತದ ತೈಲ ಬೇಡಿಕೆಯ ಬಗ್ಗೆ ಆಶಾವಾದಿಗಳಾಗಿವೆ,” ಎಂದು ರಿಫಿನಿಟಿವ್ ವಿಶ್ಲೇಷಕ ಎಹ್ಸಾನ್ ಉಲ್ ಹಕ್ ಹೇಳಿದ್ದಾರೆ. ಅವು ನವೆಂಬರ್‌ನಲ್ಲಿ ಸರಾಸರಿ ಶೇ 104.61ರ ಸಾಮರ್ಥ್ಯದ ದರದಲ್ಲಿ ಕಾರ್ಯನಿರ್ವಹಿಸಿವೆ. ಅವು ಅಕ್ಟೋಬರ್‌ನಲ್ಲಿ ಇದ್ದ ಶೇ 98.76ರಿಂದ ಹೆಚ್ಚಾಗಿದೆ ಎಂದು ಡೇಟಾ ತೋರಿಸಿದೆ.
ಅಕ್ಟೋಬರ್‌ನಲ್ಲಿ ಏಳು ತಿಂಗಳ ಗರಿಷ್ಠ ಮಟ್ಟವನ್ನು ಕಂಡು, ಹಬ್ಬದ ಋತುವಿನ ನಂತರ ಬೇಡಿಕೆ ಕಡಿಮೆಯಾದ ಕಾರಣ ನಂತರದಲ್ಲಿ ಭಾರತದ ಇಂಧನ ಬಳಕೆ ನವೆಂಬರ್‌ನಲ್ಲಿ ಕುಸಿಯಿತು. ಒಮಿಕ್ರಾನ್ ಕೊರೊನಾ ವೇರಿಯಂಟ್ ನಿಧಾನಗತಿಯ ಆರ್ಥಿಕತೆಗೆ ಮತ್ತು ಹಲವಾರು ತಿಂಗಳ ಕಡಿಮೆ ಬೇಡಿಕೆಗೆ ಕಾರಣವಾದರೆ ಮಾತ್ರ ಕಡಿಮೆ ರೀಫೈನರ್ ಚಾಲನೆಗೆ ಕಾರಣ ಆಗಬಹುದು ಎಂದು ಉಲ್ ಹಕ್ ಹೇಳುತ್ತಾರೆ.
ಪ್ಯಾರಿಸ್ ಮೂಲದ ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಕಳೆದ ವಾರ ಹೊಸ ಕೊವಿಡ್ -19 ಪ್ರಕರಣಗಳ ಉಲ್ಬಣವು ತಾತ್ಕಾಲಿಕವಾಗಿ ನಿಧಾನವಾಗಬಹುದು. ಆದರೆ ಹೆಚ್ಚಾಗುವುದಿಲ್ಲ. ಜಾಗತಿಕ ತೈಲ ಬೇಡಿಕೆಯಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಿದೆ. ಆದರೂ ಭಾರತದ ನವೆಂಬರ್ ಕಚ್ಚಾ ಉತ್ಪಾದನೆಯು ಕಳೆದ ವರ್ಷ ಇದೇ ತಿಂಗಳಿನಿಂದ ದಿನಕ್ಕೆ ಸುಮಾರು 590,000 ಬ್ಯಾರೆಲ್‌ಗಳಿಗೆ (2.43 ಮಿಲಿಯನ್ ಟನ್‌ಗಳು) ಶೇ 2.4ರಷ್ಟು ಕುಸಿದಿದೆ. ಆದರೆ ಅಕ್ಟೋಬರ್‌ನಿಂದ ಸ್ವಲ್ಪ ಬದಲಾಗಿದೆ ಎಂದು ಡೇಟಾ ತೋರಿಸಿದೆ.
ತಾಂತ್ರಿಕ ಸಮಸ್ಯೆಗಳು ಮತ್ತು ರೀಫೈನರ್ಗಳು ಹಾಗೂ ತೈಲ ಕ್ಷೇತ್ರಗಳಲ್ಲಿನ ವಿಳಂಬ ಕುಸಿತಕ್ಕೆ ಕಾರಣ ಆಗಿರಬಹುದು. ಆದರೆ ಇಂಧನ ಕೊರತೆಯಿಂದಾಗಿ ಜಾಗತಿಕ ಅನಿಲ ಬೆಲೆಗಳಲ್ಲಿನ ಏರಿಕೆ ಮಧ್ಯೆ ಹೆಚ್ಚಿನ ನೈಸರ್ಗಿಕ ಅನಿಲ ಉತ್ಪಾದನೆಯು ಭಾರತದ ಹಣಕಾಸು ಸ್ಥಿತಿಗೆ ಉತ್ತಮವಾಗಿದೆ ಎಂದು ಉಲ್ ಹಕ್ ಸೇರಿಸಿದ್ದಾರೆ. 2020ರ ನವೆಂಬರ್ಗೆ ಹೋಲಿಸಿದರೆ ನೈಸರ್ಗಿಕ ಅನಿಲ ಉತ್ಪಾದನೆಯು ಶೇ 23.1ರಷ್ಟು 2.87 ಶತಕೋಟಿ ಘನ ಮೀಟರ್‌ಗಳಿಗೆ ಜಿಗಿದಿದೆ. ಆದರೆ ಇನ್ನೂ 3.29 ಶತಕೋಟಿ ಘನ ಮೀಟರ್‌ಗಳ ಉದ್ದೇಶಿತ ಉತ್ಪಾದನೆಗಿಂತ ಕಡಿಮೆಯಾಗಿದೆ ಎಂದು ಡೇಟಾ ತೋರಿಸಿದೆ.
ಇದನ್ನೂ ಓದಿ: ಅಮೆರಿಕದ ಒತ್ತಡಕ್ಕೆ ಮಣಿದು ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ಒಪೆಕ್ ರಾಷ್ಟ್ರಗಳ ಒಪ್ಪಿಗೆ