Indira canteen: ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್ ಬಂದ್!

Chamarajanagar: ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿರುವುದರಿಂದ ಸಾಕಷ್ಟು ಜನರಿಗೆ ತೊಂದರೆಯುಂಟಾಗಿದೆ. ಇದನ್ನೇ ನಂಬಿಕೊಂಡು ಬದುಕುತ್ತಿದ್ದ ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಜನರು ಇದೀಗ ಊಟಕ್ಕಾಗಿ ಪರದಾಡುವಂತಾಗಿದೆ. ಬೇರೆ ಹೋಟೆಲ್‌ನಲ್ಲಿ‌ ಊಟ ತಿಂಡಿ ಮಾಡಲು ದುಪ್ಪಟ್ಟು ಹಣ ನೀಡಬೇಕಾಗಿದೆ.

Indira canteen: ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್ ಬಂದ್!
ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್ ಬಂದ್!
TV9kannada Web Team

| Edited By: sadhu srinath

Nov 24, 2022 | 2:15 PM

ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡಬೇಕೆಂಬುದು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಕನಸಾಗಿತ್ತು. ಇದಕ್ಕಾಗಿ ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರ ಇಂದಿರಾ ಹೆಸರಲ್ಲಿ ಕ್ಯಾಂಟೀನ್ ತೆರೆದಿತ್ತು. ಆದ್ರೆ ಇದೀಗ ಗಡಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟಿನ್ (Indira canteen) ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡಿಲ್ಲ ಎಂದು ಕ್ಯಾಂಟೀನ್ ಮುಚ್ಚಿದೆ. ಇದ್ರಿಂದ ಬಡ ಜನರು ಊಟಕ್ಕೆ (Free Food) ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಹೌದು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿರುವ ಬಹುತೇಕ ಇಂದಿರಾ ಕ್ಯಾಂಟಿನ್ ಗಳು ಕಳೆದ 3-4 ದಿನಗಳಿಂದ ಮುಚ್ಚಿವೆ. ಇದರಿಂದ ಜನ ಸಾಮಾನ್ಯರು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ (Chamarajanagar) ಅಂದ್ರೆ ಹಿಂದುಳಿದ ಜಿಲ್ಲೆ. ಇಲ್ಲಿ ಬಹುತೇಕ ಜನರು ಬಡವರು, ಅವರು ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಬಂದ್ರೆ ಇಂದಿರಾ ಕ್ಯಾಂಟಿನ್ ಅವಲಂಬಿಸುತ್ತಿದ್ದರು.

ಆದ್ರೆ ಇದೀಗ ಕ್ಯಾಂಟಿನ್ ತೆರೆಯದೆ ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಜನರಿಗೆ ತೊಂದರೆಯಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗೆ ಏಜೆನ್ಸಿ ಸಂಬಳ ನೀಡದೇ ಇರುವುದರಿಂದ ಕ್ಯಾಂಟೀನ್ ಬಾಗಿಲು ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹನೂರು ಶಾಸಕ ನರೇಂದ್ರ ಅವರು ಇಂದಿರಾ ಕ್ಯಾಂಟೀನ್ ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ‌. ಇದನ್ನು ಹಾಲಿ ಬಿಜೆಪಿ ಸರ್ಕಾರ ಸರಿಯಾದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು. ಇಲ್ಲವಾದರೆ ಬಡವರ ಕಣ್ಣೀರಿನ ಶಾಪ ಸರ್ಕಾರಕ್ಕೆ ತಟ್ಟುತ್ತೆ ಅಂತಾರೆ ಶಾಸಕ ನರೇಂದ್ರ.

ಇನ್ನು ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿರುವುದರಿಂದ ಸಾಕಷ್ಟು ಜನರಿಗೆ ತೊಂದರೆಯುಂಟಾಗಿದೆ. ಇದನ್ನೇ ನಂಬಿಕೊಂಡು ಬದುಕುತ್ತಿದ್ದ ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಜನರು ಇದೀಗ ಊಟಕ್ಕಾಗಿ ಪರದಾಡುವಂತಾಗಿದೆ. ಬೇರೆ ಹೋಟೆಲ್‌ನಲ್ಲಿ‌ ಊಟ ತಿಂಡಿ ಮಾಡಲು ದುಪ್ಪಟ್ಟು ಹಣ ನೀಡಬೇಕು. ನಾವು ಮಾಡುವ ಕೂಲಿ ಕೆಲಸದಲ್ಲಿ ಅಷ್ಟೊಂದು ಹಣ ನೀಡಿ‌ ಹೋಟೆಲ್‌ಗಳಲ್ಲಿ ಊಟ ತಿಂಡಿ‌ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಬೇಗ ಇಂದಿರಾ ಕ್ಯಾಂಟೀನ್ ಪುನರ್ ಆರಂಭಿಸಲಿ ಎನ್ನುತ್ತಾರೆ ವಿದ್ಯಾರ್ಥಿ ಸಕ್ಲೈನ್.

ಒಟ್ಟಾರೆ ಕಾಂಗ್ರೆಸ್ ಸರ್ಕಾರ ಕೂಲಿ ಕಾರ್ಮಿಕರು ಆರ್ಥಿಕವಾಗಿ ಬಹಳ ಹಿಂದುಳಿದ ಜನರನ್ನು ಗಮನದಲ್ಲಿಟ್ಟುಕೊಂಡು ತೆರೆದಿದ್ದ ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿರುವುದರಿಂದ ಇವರೆಲ್ಲರಿಗೂ ಸಾಕಷ್ಟು ಸಮಸ್ಯೆಯುಂಟಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಕ್ಯಾಂಟಿನ್ ಬಾಗಿಲು ತೆರೆಯಲಿ ಅನ್ನೊದೆ ಜನರ ಆಶಯ. (ವರದಿ: ದಿಲೀಪ್ ಚೌಡಹಳ್ಳಿ, ಟಿ ವಿ9, ಚಾಮರಾಜನಗರ)

Also Read:

ಬಿಜಿಎಸ್ ಉತ್ಸತ 2022: ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಕಾಂಗ್ರೆಸ್ ನಾಯಕಿ ರಮ್ಯಾ

Also Read: ಪಂಚರತ್ನ ಯಾತ್ರೆ ಸಮಯದಲ್ಲಿ ಮಗುವೊಂದಕ್ಕೆ ನಾಮಕರಣ ಮಾಡಿ ಉಡುಗೊರೆ ರೂಪದಲ್ಲಿ ಹಣ ನೀಡಿದ ಎಚ್ ಡಿ ಕುಮಾರಸ್ವಾಮಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada