ಕೊಳ್ಳೆಗಾಲ: 10 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಬಿತ್ತು ಬ್ರೇಕ್, ಬಿಜೆಪಿ ಆಡಳಿತಾವಧಿಯ ಯೋಜನೆಗೆ ಸರ್ಕಾರ ಕತ್ತರಿ

10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕೆಲಸಕ್ಕೆ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ಕೆರೆ ಸುತ್ತ ಮುತ್ತ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್ ಸಹ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವೆಲ್ಲವುದಕ್ಕೂ ಬ್ರೇಕ್ ಬಿದ್ದಿದೆ.

ಕೊಳ್ಳೆಗಾಲ: 10 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಬಿತ್ತು ಬ್ರೇಕ್, ಬಿಜೆಪಿ ಆಡಳಿತಾವಧಿಯ ಯೋಜನೆಗೆ ಸರ್ಕಾರ ಕತ್ತರಿ
ಕೊಳ್ಳೆಗಾಲ ಕೆರೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: Ganapathi Sharma

Updated on: Oct 31, 2023 | 8:29 PM

ಚಾಮರಾಜನಗರ, ಅಕ್ಟೋಬರ್ 31: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಸರ್ಕಾರ ರಚಿಸಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಹಿಂದಿನ ಬಿಜೆಪಿ ಅವಧಿಯ ಯೋಜನೆಗಳಿಗೆ ಎಳ್ಳುನೀರು ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ, ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೆಗಾಲ (Kollegala) ತಾಲೂಕಿನಲ್ಲಿ ಕೆರೆ ಅಭಿವೃದ್ಧಿ ಯೋಜನೆಯೊಂದು (Lake Development Project) ಸ್ಥಗಿತಗೊಂಡಿದೆ. ಕೆರೆ ಹೂಳೆತ್ತುವ ಕೆಲಸಕ್ಕೆ ಹಿಂದಿನ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು.

ಪಾಳು ಬಿದ್ದಿರುವ ಕೆರೆ ಏರಿ, ಅಲ್ಲಲ್ಲಿ ಮುರಿದು ಬಿದ್ದಿರುವ ಬೇಲಿ ತಂತಿ, ಕೆರೆಯ ಮಧ್ಯೆ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡ ಘಂಟಿಗಳು, ಸರಿಯಾಗಿ ನಿರ್ಮಾಣವಾಗದ ಕೆರೆ ಏರಿ… ಇಂಥ ದೃಶ್ಯ ಕಾಣಿಸುವುದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ. ಹೌದು 10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕೆಲಸಕ್ಕೆ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ಕೆರೆ ಸುತ್ತ ಮುತ್ತ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್ ಸಹ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವೆಲ್ಲವುದಕ್ಕೂ ಬ್ರೇಕ್ ಬಿದ್ದಿದೆ.

ಇನ್ನು ಸ್ಥಳಿಯರು ಹೇಳುವ ಪ್ರಕಾರ 10 ಕೋಟಿ ರೂ ವೆಚ್ಚದ ಈಯೋಜನೆಯಲ್ಲಿ ಗುತ್ತಿಗೆದಾರ ಅವ್ಯವಹಾರ ನಡೆಸಿದ್ದಾನೆಂಬ ಆರೋಪ ಕೇಳಿ ಬಂದಿದೆ. ಅರ್ಧಂಬರ್ಧ ಹೂಳೆತ್ತಿ, ಚುನಾವಣೆ ಘೋಷಣೆಯಾದ ಬಳಿಕ ಗುತ್ತಿಗೆದಾರರು ಕೆಲಸ ನಿಲ್ಲಿಸಿ ಕಳ್ಳಾಟ ಆಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನ ಸ್ಥಳೀಯರು ಮಾಡುತ್ತಿದ್ದಾರೆ. ಇನ್ನು ಈ ಕೆರೆಗೆ ಮೋರಿ ನೀರು ಬಿಡಬಾರದು ಎಂದು ಎಷ್ಟೇ ಮನವಿ ಮಾಡಿಕೊಂಡ್ರು ನಗರಸಭೆಯ ನಿರ್ಲಕ್ಷ್ಯ ದಿಂದ ಕೆರೆಯನ್ನ ಹದಗೆಡಿಸಲಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಇದೇನು ಕೆರೆ ಅಂಗಳವೋ, ಕ್ರೀಡಾಂಗಣವೋ… ಚಾಮರಾಜನಗರ ಅಂಬೇಡ್ಕರ್ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ

ಒಟ್ಟಿನಲ್ಲಿ ರಾಜಕಾರಣಿಗಳ ಕ್ರೆಡಿಟ್ ವಾರ್​​ಗೆ ಹಾಗೂ ಗುತ್ತಿಗೆಗಾರರ ಕಳ್ಳಾಟಕ್ಕೆ ಸರ್ಕಾರದ ಹಣ ಪೋಲಾಗುತ್ತಿರುವುದು ನಿಜಕ್ಕು ದುರಂತವೇ ಸರಿ. ಜಿಲ್ಲಾಡಳಿತ ಈಗಲಾದ್ರು ಕೆರೆ ಅಭಿವೃದ್ಧಿ ಕುರಿತು ಸ್ವಲ್ಪ ಗಮನ ಹರಿಸಿದ್ರೆ ಸೂಕ್ತ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ