ಇದೇನು ಕೆರೆ ಅಂಗಳವೋ, ಕ್ರೀಡಾಂಗಣವೋ… ಚಾಮರಾಜನಗರ ಅಂಬೇಡ್ಕರ್ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ

Dr Br Ambedkar Stadium, Chamarajanagar: ಟ್ರ್ಯಾಕ್ ನಲ್ಲಿ ಬಿದ್ದಿರುವ ಕಲ್ಲು, ಪ್ಲಾಸ್ಟಿಕ್ ಬಾಟಲ್ ಗಳು. ಅಲ್ಲಲ್ಲಿ ಬಿದ್ದಿರುವ ಗುಂಡಿಗಳು. ಇದನ್ನ ಕೆರೆ ಅಂಗಳ ಅಂತ ಕರಿ ಬೇಕಾ ಇಲ್ಲಾ ಕ್ರೀಡಾಂಗಣ ಅಂತ ಹೇಳ್ಬೇಕ ಎಂದು ಪ್ರಶ್ನೆ ಮಾಡುತ್ತಿರುವ ಕ್ರೀಡಾಪಟುಗಳು. ಹೌದು ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಗಡಿನಾಡು ಚಾಮರಾಜನಗರದಲ್ಲಿ, ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಇದು.

ಇದೇನು ಕೆರೆ ಅಂಗಳವೋ, ಕ್ರೀಡಾಂಗಣವೋ... ಚಾಮರಾಜನಗರ ಅಂಬೇಡ್ಕರ್ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ
ಇದೇನು ಕೆರೆ ಅಂಗಳವೋ, ಕ್ರೀಡಾಂಗಣವೋ... ಚಾಮರಾಜನಗರ ಅಂಬೇಡ್ಕರ್ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​

Updated on: Oct 30, 2023 | 12:23 PM

22ಕೋಟಿ ವೆಚ್ಚದ ಜಿಲ್ಲಾ ಕ್ರೀಡಾಂಗಣ ಈಗ ಅವ್ಯವಸ್ಥೆಗಳ ಆಗರವಾಗಿದೆ. ದಿನ ನಿತ್ಯ ಕ್ರೀಡಾಪಟುಗಳು (Sports Persons) ಒಂದಲ್ಲಾ ಒಂದು ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಕ್ರೀಡಾಪಟುಗಳು ಹೇಳಿದ್ದಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ. ಟ್ರ್ಯಾಕ್ ನಲ್ಲಿ ಬಿದ್ದಿರುವ ಕಲ್ಲು, ಪ್ಲಾಸ್ಟಿಕ್ ಬಾಟಲ್ ಗಳು. ಅಲ್ಲಲ್ಲಿ ಬಿದ್ದಿರುವ ಗುಂಡಿಗಳು. ಇದನ್ನ ಕೆರೆ ಅಂಗಳ ಅಂತ ಕರಿ ಬೇಕಾ ಇಲ್ಲಾ ಕ್ರೀಡಾಂಗಣ ಅಂತ ಹೇಳ್ಬೇಕ ಎಂದು ಪ್ರಶ್ನೆ ಮಾಡುತ್ತಿರುವ ಕ್ರೀಡಾಪಟುಗಳು. ಹೌದು ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಗಡಿನಾಡು ಚಾಮರಾಜನಗರದಲ್ಲಿ, ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಇದು (Dr Br Ambedkar Stadium in Chamarajanagar).

22 ಕೋಟಿ ಬಡ್ಜೆಟ್ ಈ ಕ್ರೀಡಾಂಗಣದ್ದು. ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ರು ಸೂಕ್ತ ಕ್ರೀಡಾಂಗಣ ನಿರ್ಮಾಣ ಆಗಿಲ್ಲ. ಸಿಂಥಟಿಕ್ ಟ್ರ್ಯಾಕ್ ಇಲ್ಲದೆ ಸ್ವಿಮ್ಮಿಂಗ್ ಪೂಲ್ ಸರಿಯಾಗಿ ನಿರ್ಮಿಸದೆ, ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ಮಾಡಲಾಗಿದೆ. ಈ ಕುರಿತು ಕ್ರೀಡಾಪಟುಗಳು ಎಷ್ಟೇ ಕಂಪ್ಲೆಂಟ್ ಮಾಡಿದ್ರು ಜಿಲ್ಲಾಡಳಿತ ಕ್ಯಾರೆ ಅನ್ನದೆ ಇರುವುದು ನಿಜಕ್ಕೂ ದುರಂತ.

ವಿಚಿತ್ರ ಅಂದ್ರೆ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕ್ರೀಡೆಗಳು ನಡೆಯದೆ ಬರಿ ರಾಜಕೀಯ ಸಮಾವೇಶಗಳು, ಸರ್ಕಾರಿ ಕಾರ್ಯಕ್ರಮಗಳು, ಎಕ್ಸಿಬಿಷನ್ ಗಳು ನಡೆದಿದ್ದೆ ಹೆಚ್ಚು. ಜಿಲ್ಲಾಡಳಿತ ಇದನ್ನ ಕ್ರೀಡಾಂಗಣ ಎಂದು ಪರಿಗಣನೆಗೆ ತೆಗೆದು ಕೊಳ್ಳದೆ ಸಮಾವೇಶ ನಡೆಸೊ ಸಭಾಂಗಣದಂತೆ ಬಳಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. 2002 ರಲ್ಲಿ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭವಾಗಿ 2005ರಲ್ಲಿ ಪೂರ್ಣ ಗೊಳ್ಳಬೇಕಿತ್ತು. ಆದ್ರೆ ಇನ್ನೂ ಟ್ರ್ಯಾಕ್ ನಿರ್ಮಾಣ ಮಾಡದೆ ಇರುವುದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಒಟ್ಟಾರೆ ಕ್ರೀಡಾಪಟುಗಳು ಸರಿಯಾದ ಪ್ರಾಕ್ಟೀಸ್ ಮಾಡಲಾಗದೆ ಪರಿತಪ್ಪಿಸುತ್ತಿದ್ದು ಬೇರೆಡೆ ಹೋಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಆದಷ್ಟು ಬೇಗ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿ ಕೊಡಲೆಂಬುದು ಸ್ಥಳೀಯರ ಆಶಯ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್