ಗಡಿ ಜಿಲ್ಲೆಯಲ್ಲಿ ಕೇರಳ, ತಮಿಳುನಾಡಿನ ಲಾಟರಿ ದಂಧೆ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಎಗ್ಗಿಲ್ಲದೆ ನಡೀತಿದೆ. ಅದ್ರಲ್ಲೂ, ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರೋ ಲಾಟರಿಗಳನ್ನ ಗುಂಡ್ಲುಪೇಟೆಗೆ ತಂದು ಮಾರಾಟ ಮಾಡ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬರುತ್ತಿದ್ದಂತೇ ಲಾಟರಿ ಆಟ ಶುರುವಾಗುತ್ತೆ. ಪರಿಚಯಸ್ಥ ವ್ಯಕ್ತಿಗಳ ಮೂಲಕ ಲಾಟರಿಗಳನ್ನ ಕೊಟ್ಟು ಮಾರಾಟ ಮಾಡಿಸಲಾಗುತ್ತೆ. ಒಮ್ಮೆ ಲಾಟರಿ ಖರೀದಿ ಮಾಡಿದವರನ್ನೇ ಮತ್ತೆ ಮತ್ತೆ ಟಾರ್ಗೆಟ್ ಮಾಡುವುದು ದಂಧೆಕೋರರ ಮಾಸ್ಟರ್ ಪ್ಲಾನ್. ಹಳೆ ಗಿರಾಕಿಗಳಿಗೆ ಹೊಸ ಲಾಟರಿ ಟಿಕೆಟ್ ನೀಡಿದ್ರೆ, ಹೊಸ ಗಿರಾಕಿಗಳಿಗೆ […]
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಎಗ್ಗಿಲ್ಲದೆ ನಡೀತಿದೆ. ಅದ್ರಲ್ಲೂ, ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರೋ ಲಾಟರಿಗಳನ್ನ ಗುಂಡ್ಲುಪೇಟೆಗೆ ತಂದು ಮಾರಾಟ ಮಾಡ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬರುತ್ತಿದ್ದಂತೇ ಲಾಟರಿ ಆಟ ಶುರುವಾಗುತ್ತೆ. ಪರಿಚಯಸ್ಥ ವ್ಯಕ್ತಿಗಳ ಮೂಲಕ ಲಾಟರಿಗಳನ್ನ ಕೊಟ್ಟು ಮಾರಾಟ ಮಾಡಿಸಲಾಗುತ್ತೆ.
ಒಮ್ಮೆ ಲಾಟರಿ ಖರೀದಿ ಮಾಡಿದವರನ್ನೇ ಮತ್ತೆ ಮತ್ತೆ ಟಾರ್ಗೆಟ್ ಮಾಡುವುದು ದಂಧೆಕೋರರ ಮಾಸ್ಟರ್ ಪ್ಲಾನ್. ಹಳೆ ಗಿರಾಕಿಗಳಿಗೆ ಹೊಸ ಲಾಟರಿ ಟಿಕೆಟ್ ನೀಡಿದ್ರೆ, ಹೊಸ ಗಿರಾಕಿಗಳಿಗೆ ಅವಧಿ ಮೀರಿದ ಲಾಟರಿಗಳನ್ನ ಕಲರ್ ಜೆರಾಕ್ಸ್ ಮಾಡಿ ಮಾರಾಟ ಮಾಡಲಾಗ್ತಿದೆ. 10 ರಿಂದ 100 ರೂ ವರೆಗಿನ ಟಿಕೆಟ್ ಲಭ್ಯವಿದೆ. ಅಲ್ಲದೆ ತಿಂಗಳಲ್ಲಿ ಅತಿ ಹೆಚ್ಚು ಲಾಟರಿ ಟಿಕೆಟ್ ಮಾರಾಟ ಮಾಡುವವರಿಗೆ ಹೆಚ್ಚಿನ ಕಮೀಷನ್ ಸಿಗಲಿದೆ. ಹೀಗಾಗಿ, ಕೂಲಿ ಮಾಡಲು ಆಗದವರು ಲಾಟರಿ ಮಾರಾಟ ದಂಧೆಯಲ್ಲಿ ಆರಾಮಾಗಿ ತೊಡಗಿ ಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕೇರಳ, ತಮಿಳುನಾಡಿನ ‘ಲಾಟರಿ’ ದಂಧೆ: ಲಾಟರಿ ಮಾರಾಟ ದಂಧೆ ಕುರಿತು ಗೌಪ್ಯ ಕಾರ್ಯಾಚರಣೆ ವೇಳೆ ಕೆಲವರು ಸಿಕ್ಕಿ ಬಿದ್ದಿದ್ದಾರೆ. ಅವರನ್ನ ವಿಚಾರಣೆ ನಡೆಸಿದಾಗ ಕೇರಳ ಮತ್ತು ತಮಿಳುನಾಡಿನಿಂದ ಲಾಟರಿ ಟಿಕೆಟ್ಗಳನ್ನ ತಂದು ಮಾರಾಟ ಮಾಡಿರೋದಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಒಟ್ನಲ್ಲಿ, ರಾಜ್ಯದಲ್ಲಿ ಲಾಟರಿ ಬ್ಯಾನ್ ಮಾಡಿದ್ರೂ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಜೋರಾಗೇ ನಡೀತಿದೆ. ಅಮಾಯಕ ಕೂಲಿ ಕಾರ್ಮಿಕರನ್ನ ಟಾರ್ಗೆಟ್ ಮಾಡ್ತಿರೋ ದಂಧೆಕೋರರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
Published On - 8:08 am, Fri, 27 December 19