ಗಡಿ ಜಿಲ್ಲೆಯಲ್ಲಿ ಕೇರಳ, ತಮಿಳುನಾಡಿನ ಲಾಟರಿ ದಂಧೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಎಗ್ಗಿಲ್ಲದೆ ನಡೀತಿದೆ. ಅದ್ರಲ್ಲೂ, ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರೋ ಲಾಟರಿಗಳನ್ನ ಗುಂಡ್ಲುಪೇಟೆಗೆ ತಂದು ಮಾರಾಟ ಮಾಡ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬರುತ್ತಿದ್ದಂತೇ ಲಾಟರಿ ಆಟ ಶುರುವಾಗುತ್ತೆ. ಪರಿಚಯಸ್ಥ ವ್ಯಕ್ತಿಗಳ ಮೂಲಕ ಲಾಟರಿಗಳನ್ನ ಕೊಟ್ಟು ಮಾರಾಟ ಮಾಡಿಸಲಾಗುತ್ತೆ. ಒಮ್ಮೆ ಲಾಟರಿ ಖರೀದಿ ಮಾಡಿದವರನ್ನೇ ಮತ್ತೆ ಮತ್ತೆ ಟಾರ್ಗೆಟ್ ಮಾಡುವುದು ದಂಧೆಕೋರರ ಮಾಸ್ಟರ್ ಪ್ಲಾನ್. ಹಳೆ ಗಿರಾಕಿಗಳಿಗೆ ಹೊಸ ಲಾಟರಿ ಟಿಕೆಟ್ ನೀಡಿದ್ರೆ, ಹೊಸ ಗಿರಾಕಿಗಳಿಗೆ […]

ಗಡಿ ಜಿಲ್ಲೆಯಲ್ಲಿ ಕೇರಳ, ತಮಿಳುನಾಡಿನ ಲಾಟರಿ ದಂಧೆ
ಸಾಧು ಶ್ರೀನಾಥ್​

Updated on: Dec 27, 2019 | 5:20 PM

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಎಗ್ಗಿಲ್ಲದೆ ನಡೀತಿದೆ. ಅದ್ರಲ್ಲೂ, ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರೋ ಲಾಟರಿಗಳನ್ನ ಗುಂಡ್ಲುಪೇಟೆಗೆ ತಂದು ಮಾರಾಟ ಮಾಡ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬರುತ್ತಿದ್ದಂತೇ ಲಾಟರಿ ಆಟ ಶುರುವಾಗುತ್ತೆ. ಪರಿಚಯಸ್ಥ ವ್ಯಕ್ತಿಗಳ ಮೂಲಕ ಲಾಟರಿಗಳನ್ನ ಕೊಟ್ಟು ಮಾರಾಟ ಮಾಡಿಸಲಾಗುತ್ತೆ.

ಒಮ್ಮೆ ಲಾಟರಿ ಖರೀದಿ ಮಾಡಿದವರನ್ನೇ ಮತ್ತೆ ಮತ್ತೆ ಟಾರ್ಗೆಟ್ ಮಾಡುವುದು ದಂಧೆಕೋರರ ಮಾಸ್ಟರ್ ಪ್ಲಾನ್. ಹಳೆ ಗಿರಾಕಿಗಳಿಗೆ ಹೊಸ ಲಾಟರಿ ಟಿಕೆಟ್ ನೀಡಿದ್ರೆ, ಹೊಸ ಗಿರಾಕಿಗಳಿಗೆ ಅವಧಿ ಮೀರಿದ ಲಾಟರಿಗಳನ್ನ ಕಲರ್ ಜೆರಾಕ್ಸ್ ಮಾಡಿ ಮಾರಾಟ ಮಾಡಲಾಗ್ತಿದೆ. 10 ರಿಂದ 100 ರೂ ವರೆಗಿನ ಟಿಕೆಟ್ ಲಭ್ಯವಿದೆ. ಅಲ್ಲದೆ ತಿಂಗಳಲ್ಲಿ ಅತಿ ಹೆಚ್ಚು ಲಾಟರಿ ಟಿಕೆಟ್ ಮಾರಾಟ ಮಾಡುವವರಿಗೆ ಹೆಚ್ಚಿನ ಕಮೀಷನ್ ಸಿಗಲಿದೆ. ಹೀಗಾಗಿ, ಕೂಲಿ ಮಾಡಲು ಆಗದವರು ಲಾಟರಿ ಮಾರಾಟ ದಂಧೆಯಲ್ಲಿ ಆರಾಮಾಗಿ ತೊಡಗಿ ಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಕೇರಳ, ತಮಿಳುನಾಡಿನ ‘ಲಾಟರಿ’ ದಂಧೆ:
ಲಾಟರಿ ಮಾರಾಟ ದಂಧೆ ಕುರಿತು ಗೌಪ್ಯ ಕಾರ್ಯಾಚರಣೆ ವೇಳೆ ಕೆಲವರು ಸಿಕ್ಕಿ ಬಿದ್ದಿದ್ದಾರೆ. ಅವರನ್ನ ವಿಚಾರಣೆ ನಡೆಸಿದಾಗ ಕೇರಳ ಮತ್ತು ತಮಿಳುನಾಡಿನಿಂದ ಲಾಟರಿ ಟಿಕೆಟ್​ಗಳನ್ನ ತಂದು ಮಾರಾಟ ಮಾಡಿರೋದಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಒಟ್ನಲ್ಲಿ, ರಾಜ್ಯದಲ್ಲಿ ಲಾಟರಿ ಬ್ಯಾನ್ ಮಾಡಿದ್ರೂ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೊರ ರಾಜ್ಯದ ಲಾಟರಿ ದಂಧೆ ಜೋರಾಗೇ ನಡೀತಿದೆ. ಅಮಾಯಕ ಕೂಲಿ ಕಾರ್ಮಿಕರನ್ನ ಟಾರ್ಗೆಟ್​ ಮಾಡ್ತಿರೋ ದಂಧೆಕೋರರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

Published On - 8:08 am, Fri, 27 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us