ಚೀನಾದಲ್ಲಿ ನ್ಯುಮೋನಿಯಾ ವೈರಸ್ ರುದ್ರ ತಾಂಡವ; ಚಾಮರಾಜನಗರದಲ್ಲೂ ಹೈ ಅಲರ್ಟ್
ಚಾಮರಾಜನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಚಾಮರಾಜನಗರ (Chamrajanagar) ದ ಎರಡು ಚೆಕ್ಪೋಸ್ಟ್ಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಚಿಂತನೆ ನಡೆಸಿದೆ. ಇನ್ನು ಆರೋಗ್ಯ ಇಲಾಖೆ ಇಡೀ ರಾಜ್ಯದಲ್ಲಿ ಕ್ರಮ ವಹಿಸಿದ್ದು, ನ್ಯುಮೋನಿಯಾ ರೋಗದ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ಚಾಮರಾಜನಗರ, ನ.30: ಚೀನಾದಲ್ಲಿ ನ್ಯುಮೋನಿಯಾ ವೈರಸ್(pneumonia virus) ರುದ್ರ ತಾಂಡವವಾಡುತ್ತಿದೆ. ಈ ಹಿನ್ನಲೆ ಚಾಮರಾಜನಗರದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ‘ಚಾಮರಾಜನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಚಾಮರಾಜನಗರ (Chamrajanagar) ದ ಎರಡು ಚೆಕ್ಪೋಸ್ಟ್ಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಚಿಂತನೆ ನಡೆಸಿದೆ. ಇನ್ನು ಆರೋಗ್ಯ ಇಲಾಖೆ ಇಡೀ ರಾಜ್ಯದಲ್ಲಿ ಕ್ರಮ ವಹಿಸಿದೆ. ನ್ಯುಮೋನಿಯಾ ರೋಗದ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಜಿಲ್ಲಾಡಳಿತದಿಂದ ಈಗಾಗಲೇ ಎಚ್ಚರಿಕೆ ವಹಿಸಲಾಗಿದೆ. ಬೆಡ್ ಸಿದ್ದಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಗಡಿಯಲ್ಲೂ ಕೂಡ ರ್ಯಾಂಡಮ್ ಚೆಕ್ಅಫ್ ಮಾಡಲಾಗುತ್ತದೆ ಎಂದು ಹೇಳಿದರು.
ಇನ್ನು ಚೀನಾದಲ್ಲಿ ಹೊಸ ಮಾದರಿ ಸೋಂಕು ಪತ್ತೆಯಾದ ಕೂಡಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ ಮಾಡಿತ್ತು. ಈ ಸೋಂಕು ಕಡಿಮೆ ತೀವ್ರತೆ ಹೊಂದಿದ್ದು, 5 ರಿಂದ 7 ದಿನ ದೇಹದಲ್ಲಿರುತ್ತದೆ ಎಂದು ಹೇಳಿತ್ತು. ಜೊತೆಗೆ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ಹೊರಡಿಸಿದ್ದು, ಈ ಕೆಳಗಿನಂತಿದೆ.
ಇದನ್ನೂ ಓದಿ:China Virus: ನ್ಯುಮೋನಿಯಾ ಹೆಚ್ಚಳ, ಇದರ ಹಿಂದೆ ಯಾವುದೇ ವೈರಸ್ಗಳ ಪ್ರಭಾವವಿಲ್ಲ ಎಂದು ಚೀನಾ ಹೇಳಿದೆ: WHO
• ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು.
• ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು.
• ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು.
• ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಫೇಸ್ ಮಾಸ್ಕ್ ಬಳಸುವುದು.
• ಫ್ಲೂ ಪೀಡಿತ ವ್ಯಕ್ತಿಗಳಿಂದ ಮೂಲಭೂತ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು.
• ನಿದ್ರೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿಕೊಳ್ಳುವುದು.
• ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು.
• ಸಾರ್ವಜನಿಕವಾಗಿ ಉಗುಳುವುದನ್ನು ತಪ್ಪಿಸುವುದು.
• ಇನ್ಫ್ಲುಯೆನ್ಸ ಮತ್ತು ಇತರ ಉಸಿರಾಟದ ಕಾಯಿಲೆಗಳ ಹೆಚ್ಚಿನ ಸಂಭವವಿರುವ ಸ್ಥಳಗಳಿಗೆ ಪ್ರಯಾಣವನ್ನು ತಪ್ಪಿಸುವುದು.
• ರೋಗಲಕ್ಷಣಗಳು ಉಲ್ಬಣಗೊಂಡರೆ ಹತ್ತಿರದ ಸರ್ಕಾರಿ ಆರೋಗ್ಯ ಸೌಲಭ್ಯಕ್ಕೆ ವರದಿ ಮಾಡಿ.
• ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಸ್ವಯಂ-ಔಷಧಿಗಳನ್ನು ಮಾಡಬೇಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ