ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ಅ 7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಡಗೆರೆ ಬಳಿ ಮೂರು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ.
ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಕ್ಟೋಬರ್ 7ರಂದು ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಯಳಂದೂರು ತಾಲ್ಲೂಕಿನ ವಡಗೆರೆ ಬಳಿ ನಿರ್ಮಿಸಿರುವ ಹೆಲಿಪ್ಯಾಡ್ಗೆ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಡಗೆರೆ ಬಳಿ ಮೂರು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ.
ಅ.7ರಂದು ಬೆಳಿಗ್ಗೆ 8ಕ್ಕೆ ದೇವರ ದರ್ಶನ ಪಡೆಯುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಮಧ್ಯಾಹ್ನ 3 ಗಂಟೆಗೆ ಯಡಬೆಟ್ಟ ಬಳಿ ನಿರ್ಮಿಸಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿ ಅವರ ದೇಗುಲ ಭೇಟಿ ಮತ್ತು ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಪಾಲ್ಗೊಳ್ಳಲಿದ್ದಾರೆ.
ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ಕುಟುಂಬ ಕಂಡ ಪ್ರವಾಸಿಗರಿಗೆ ಖುಷಿ
ಚಾಮರಾಜನಗರ ಜಿಲ್ಲೆ ಬಿಳಿಗಿರಿ ರಂಗನಾಥ ಸ್ವಾಮಿ ಮೀಸಲು ಹುಲಿ ಸಂರಕ್ಷಿತಾರಣ್ಯದಲ್ಲಿ ಈಚೆಗೆ ಒಟ್ಟೊಟ್ಟಿಗೆ ಮೂರು ಹುಲಿಗಳು ಸಫಾರಿಗೆ ಬಂದವರ ಕಣ್ಣಿಗೆ ಬಿದ್ದಿವೆ. ತಾಯಿಯ ಜೊತೆಗೆ ಎರಡು ಮರಿಗಳನ್ನು ನೋಡಿ ಪ್ರವಾಸಿಗರು ಖುಷಿಪಟ್ಟರು. ಸಫಾರಿ ರಸ್ತೆಯಲ್ಲಿ ನಿಂತಿದ್ದ ಮಳೆಯ ನೀರನ್ನು ತಾಯಿ ಹುಲಿ ಕುಡಿದ ರೋಚಕ ದೃಶ್ಯವನ್ನು ಪ್ರವಾಸಿಕರು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆ ಹಿಡಿದಿದ್ದಾರೆ.
ಹುಲಿಗಳ ಚಲನ, ವಲನಗಳನ್ನು ಕಣ್ತುಂಬಿಸಿಕೊಳ್ಳುವ ಸದಾವಕಾಶ ಪ್ರವಾಸಿಗರಿಗೆ ಇಂದು ಸಿಕ್ಕಿದೆ. ಬಿಆರ್ಟಿ ವನ್ಯಧಾಮದಲ್ಲಿ 50 ಹೆಚ್ಚು ಹುಲಿಗಳಿವೆ ಎಂದು ಗಣತಿಯಿಂದ ತಿಳಿದಿದೆ. ಆದರೆ, ಸಫಾರಿಗೆ ಬಂದವರಿಗೆ ಆ ಹುಲಿಗಳ ದರ್ಶನ ಸಿಗುವುದು ತುಂಬಾ ವಿರಳ. ಸಿಕ್ಕರೂ ಒಂದು ಹುಲಿ ಮಾತ್ರ. ಪರಿಸ್ಥಿತಿ ಹೀಗಿದ್ದಾಗ ಇಂದು ಸಫಾರಿಗೆ ಹೋದವರಿಗೆ ಮೂರು ಹುಲಿಗಳ ದರ್ಶನ ಸಿಕ್ಕಿದೆ. ಅದರಲ್ಲೂ ಹುಲಿ ಮರಿಗಳನ್ನು ನೋಡಿ ಪ್ರವಾಸಿಗರು ಖುಷಿಪಟ್ಟಿದ್ದರು.
(President Ram Nath Kovind to Visit Biligiri Ranganatha Swamy Hill on October 7)