RSS ವಿರುದ್ದ ವಿವಾದಾತ್ಮಕ ಹೇಳಿಕೆ: ಗೂಳಿಹಟ್ಟಿ ಶೇಖರ್ ಹೇಳುತ್ತಿರುವುದು ಸುಳ್ಳು: ಮಾಜಿ ಸಚಿವ ಎನ್ ಮಹೇಶ್
ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಹೇಳಿಕೆಯಲ್ಲಿ ‘ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು' ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಚಾಮರಾಜನಗರದಲ್ಲಿ ಮಾತನಾಡಿರುವ ಮಾಜಿ ಸಚಿವ ಎನ್.ಮಹೇಶ್, ಗೂಳಿಹಟ್ಟಿ ಶೇಖರ್ ಆರೋಪ ತಳ್ಳಿಹಾಕಿದ್ದು, ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ಚಾಮರಾಜನಗರ, ಡಿಸೆಂಬರ್ 07: ನಾಗ್ಪರದ ಹೆಡಗೆವಾರ್ ಕಚೇರಿಗೆ ಪ್ರವೇಶ ನೀಡದ ಆರೋಪ ವಿಚಾರವಾಗಿ ಗೂಳಿಹಟ್ಟಿ ಶೇಖರ್ ಆರೋಪವನ್ನು ಮಾಜಿ ಸಚಿವ ಎನ್.ಮಹೇಶ್ ತಳ್ಳಿಹಾಕಿದ್ದಾರೆ. ಗೂಳಿಹಟ್ಟಿ ಶೇಖರ್ (Goolihatti Shekhar) ಹೇಳುತ್ತಿರುವುದು ಸುಳ್ಳು. 10 ತಿಂಗಳ ಹಿಂದೆ ನಡೆದ ಘಟನೆ ಈಗ್ಯಾಕೆ ಮಾತಾಡ್ತಾರೆ ಎಂದು ಹೇಳಿದ್ದಾರೆ. ನಗರದಲ್ಲಿ ಟವಿ9 ಜೊತೆ ಮಾತನಾಡಿದ ಅವರು. ಸಂತೋಷ್ ಜಿ ಕುರಿತು ಮಾತನಾಡುತ್ತಿದ್ದಾರೆ ಆದರೆ ಅವರಿಂದ ರಿಪ್ಲೆ ಇಲ್ಲ. ಶೇಖರ್ ಅವರಿಗೆ ಯಾವುದೋ ಮೋಟಿವ್ ಇದೆ ಅದಕ್ಕೆ ಮಾತಾಡ್ತಿದ್ದಾರೆ. ಇದೊಂತರ ಎಮೋಷನಲ್ ಬ್ಲಾಕ್ಮೇಲ್ ಇದ್ದಹಾಗೇ ಎಂದಿದ್ದಾರೆ.
3 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ಸಂಘ ಪರಿವಾರದ ಲಿಂಕ್ ಇದೆ. ಒಂದು ವೇಳೆ ಶೇಖರ್ ಹೇಳಿದ್ದು ನಿಜವಾದರೆ ಅದನ್ನ ಸಾಬೀತು ಪಡಿಸಲಿ. ಸಿಎಂ ಕೂಡ ಇದಕ್ಕೆ ರಿಯಾಕ್ಟ್ ಮಾಡುತ್ತಾರೆ, ಎಲ್ಲದರಲ್ಲೂ ರಾಜಕೀಯ ಸರಿಯಲ್ಲ. ಗೂಳಿಹಟ್ಟಿ ಶೇಖರ್ ಬಿಜೆಪಿ ತೊರೆದು ಬೇರೆ ಎಲ್ಲೋ ಹೋಗಲಿಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮಗೂ ಆ ಅನುಭವ ಆಗಿದೆ: ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ನೀಡಿದ್ದು, ಗೂಳಿಹಟ್ಟಿ ಶೇಖರ್ ಹೇಳಿದಂತೆ ನಮಗೂ ಆ ಅನುಭವ ಆಗಿದೆ. ನಾನೂ ಬಿಜೆಪಿಯಲ್ಲಿ ಇದ್ದು ಬಂದವನು. ಕೆಲ ವಿಷಯಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ, ಆಹ್ವಾನವೂ ಇರಲಿಲ್ಲ. ಶೇಖರ್ ಹೇಳಿಕೆ ನಂತರ ಮನವರಿಕೆ ಆಗುತ್ತಿದೆ ಎಂದರು.
ಇದನ್ನೂ ಓದಿ: RSS ವಸ್ತು ಸಂಗ್ರಹಾಲಯ ಪ್ರವೇಶಕ್ಕೆ ಗೂಳಿಹಟ್ಟಿ ಶೇಖರ್ಗೆ ನಿರಾಕರಣೆ: ಮೌನಕ್ಕೆ ಶರಣಾದ ಬಿಜೆಪಿ ನಾಯಕರು
ಕುಟುಂಬ ರಾಜಕಾರಣಕ್ಕೆ ನನ್ನ ಸಮ್ಮತಿ ಇಲ್ಲವೆಂದು ಪ್ರಧಾನಿ ಹೇಳುತ್ತಾರೆ. ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿದ್ದಾರೆ. ಬಿಎಸ್ ಯಡಿಯೂರಪ್ಪರವರ ಒಬ್ಬ ಮಗ ಸಂಸದ, ಮತ್ತೊಬ್ಬ ಮಗ ರಾಜ್ಯಾಧ್ಯಕ್ಷ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ನದು ಸಹ ಇದೇ ಪರಿಸ್ಥಿತಿ. ಹೆಚ್ಡಿ ದೇವೇಗೌಡ ಕುಟುಂಬ ನೋಡಿದರೆ ಅರ್ಥವಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಸರು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ನಾಗಪುರ ಕಚೇರಿಯಲ್ಲಿಲ್ಲ: ಗೂಳಿಹಟ್ಟಿ ಆರೋಪಕ್ಕೆ ಆರ್ಎಸ್ಎಸ್ ಸ್ಪಷ್ಟನೆ
ಬೈಕ್ ಸವಾರನ ಜೊತೆ ಭವಾನಿ ರೇವಣ್ಣ ವರ್ತನೆ ಸರಿ ಆದದ್ದು ಅಲ್ಲ. ದೇವೇಗೌಡರು ಇದನ್ನು ಖಂಡಿಸಬೇಕಿತ್ತು. ರೇವಣ್ಣ ಮತ್ತು ಅವರ ಪುತ್ರ ರಾಜೀನಾಮೆ ನೀಡಬೇಕಿತ್ತು. ಭವಾನಿ ರೇವಣ್ಣ ಯಾವುದೇ ಚುನಾವಣೆ ಸ್ಪರ್ಧೆ ಮಾಡದಂತೆ ನಿರ್ಣಯ ತೆಗೆದುಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ. ಈ ಮೂರು ಪಕ್ಷಗಳು ಜನರನ್ನ ಲೂಟಿ ಮಾಡಿವೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.