ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಾಥ ಬೆಟ್ಟದ ಕೆ.ಗುಡಿ. ಬಿಳಿಗಿರಿ ರಂಗನಾಥ ಬೆಟ್ಟ ಧಾರ್ಮಿಕ ಕೇಂದ್ರವಾದ್ರೆ, ಕೆ.ಗುಡಿ ನಿಸರ್ಗ ಪ್ರವಾಸಿ ತಾಣ. ನಿತ್ಯ ಹಾಗೂ ಅರೆ ನಿತ್ಯ ಹರಿದ್ವರ್ಣ ಸಸ್ಯ ಸಂಕುಲಗಳ ಆಗರ. ಹೀಗಾಗಿಯೇ ಇಲ್ಲಿಗೆ ಪ್ರವಾಸಿಗರು ಆಗಮಿಸಿ ಕಾಲ ಕಳೀತ್ತಿದ್ದಾರೆ. ಇಲ್ಲಿನ ಅರಣ್ಯ ಪ್ರದೇಶಕ್ಕೆ ಎಂಟ್ರಿ ಕೊಡ್ತಿದ್ದಂತೆ ಹಚ್ಚ ಹಸಿರಾದ ಕುರುಚಲು ಕಾಡುಗಳು ಕಾಮಾನಿನಂತೆ ಬಾಗಿ ಸ್ವಾಗತ ಕೋರುತ್ತವೆ. ಬಳಿಕ ಕೆ.ಗುಡಿ ಹತ್ತಿರವಾಗುತ್ತಿದ್ದಂತೆ ಬೆಟ್ಟಗಳು ಕಣ್ಮನ ಸೆಳೆಯುತ್ತವೆ. ಹೀಗೆ ಚಾಮರಾಜನಗರದಿಂದ 35 ಕಿಲೋಮೀಟರ್ ಹೋಗುತ್ತಿದ್ದಂತೆ ಸಿಗುವ ಕೆ.ಗುಡಿ ಮಕ್ಕಳ ಅಚ್ಚು ಮೆಚ್ಚಿನ ಹಾಟ್ ಸ್ಪಾಟ್. ಆನೆ ಶಿಬಿರವೂ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಇವುಗಳ ಮಧ್ಯೆ ಕೆ.ಗುಡಿಯಲ್ಲಿ ಅರಣ್ಯ ಇಲಾಖೆ ಸಫಾರಿ ವ್ಯವಸ್ಥೆ ಮಾಡಿದ್ದು, ವೀಕ್ಎಂಡ್ ವೇಳೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಅದು ಕೂಡ ವೀಕ್ಎಂಡ್ ತೆರವಾಗ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಡಬಲ್ ಆಗ್ತಿದೆ.
ಹಚ್ಚ ಹಸಿರಾದ ಅರಣ್ಯ ಪ್ರದೇಶದಲ್ಲಿ ಮುಂಜಾನೆ ವೇಳೆ ಸಫಾರಿ ಹೊರಟ್ರೆ ಮನಸ್ಸು ಮುದಗೊಳ್ಳುತ್ತೆ. 800 ಬಗೆಯ ಗಿಡಮರಗಳ ವೀಕ್ಷಣೆ, 27 ಬಗೆಯ ಸಸ್ತನಿಗಳು, 260ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು, 22 ಬಗೆಯ ಸರಿಸೃಪಗಳು ಪ್ರವಾಸಿಗರನ್ನ ಆಕರ್ಷಿಸುತ್ತಿವೆ. ಜೊತೆಗೆ ಸಫಾರಿ ಮತ್ತು ಪ್ರಯಾಣದ ವೇಳೆ ಆನೆ, ಹುಲಿ, ಕರಡಿ, ಜಿಂಕೆ, ಕಾಡೆಮ್ಮೆಗಳು ಕಾಣ ಸಿಗುತ್ತವೆ. ಇದೇ ಕಾರಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ.
ಒಟ್ನಲ್ಲಿ, ತಾಣಕ್ಕೆ ಕಾರಿನಲ್ಲಿ ಬರಲು ಅವಕಾಶ ಇದೆ. ಕಾರು ಇಲ್ಲದವರಿಗೆ ಸರ್ಕಾರಿ ಬಸ್ ವ್ಯವಸ್ಥೆ ಮಾಡ್ಲಾಗಿದೆ. ಹೀಗಾಗಿ ಪ್ರವಾಸಿಗರು ಕೆ.ಗುಡಿಗೆ ಆಗಮಿಸಿ ಖುಷಿಯಿಂದ ಕಾಲ ಕಳೀತಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್-ಇಂಡಿಯ ನಡುವಿನ ಕೊನೆ ಟೆಸ್ಟ್ ರದ್ದಾಗಿದ್ದು ಐಪಿಎಲ್ಗೋಸ್ಕರವೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ: ಮೈಕೆಲ್ ವಾನ್