ಚಂದ್ರಶೇಖರ್ ಗುರೂಜಿ ಹತ್ಯೆ: ಇತ್ತೀಚೆಗೆ ಉದ್ಯೋಗಿಯನ್ನು ಕೆಲಸದಿಂದ ತೆಗೆದಿದ್ದೇ ಹತ್ಯೆಗೆ ಕಾರಣ – ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
Chandrasheskhar Guruji - ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಚಂದ್ರಶೇಖರ್ ಗುರೂಜಿ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗೆ ಒಬ್ಬ ಉದ್ಯೋಗಿಯನ್ನ ತೆಗೆದಿದ್ದಕ್ಕೆ ಹತ್ಯೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಚಂದ್ರಶೇಖರ್ ಗುರೂಜಿ ಪ್ರಕರಣದ ಬಗ್ಗೆ ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗೆ ಒಬ್ಬ ಉದ್ಯೋಗಿಯನ್ನ ತೆಗೆದಿದ್ದಕ್ಕೆ ಹತ್ಯೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ತೇವೆ. ಕೆಲಸದಿಂದ ತೆಗೆದಿದ್ದಕ್ಕೆ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೊಲೀಸರು ಹಂತಕರನ್ನ ಪತ್ತೆ ಹಚ್ಚಲು ತಯಾರಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಹು-ಧಾ ಕಮಿಷನರ್ ಲಾಬೂರಾಮ್ಗೆ ಕರೆಮಾಡಿ ಗೃಹಸಚಿವ ಆರಗ ಜ್ಞಾನೇಂದ್ರ ಮಾಹಿತಿ ಪಡೆದಿದ್ದಾರೆ.
ಕೊಲೆ ಮಾಡಿರುವುದು ಆಸ್ತಿಗಾಗಿ ಎಂಬ ಶಂಕೆ? ಚಂದ್ರಶೇಖರ್ ಗುರೂಜಿ ಬಾಗಲಕೋಟೆಯಲ್ಲಿ ಆಸ್ತಿ ಹೊಂದಿದ್ದರು. ಹೀಗಾಗಿ ಕೊಲೆ ಮಾಡಿರುವುದು ಆಸ್ತಿಗಾಗಿ ಎಂಬ ಶಂಕೆ ವ್ಯಕ್ತವಾಗಿದೆ. ಜಾಗದ ಸಂಬಂಧ, ಹಣಕಾಸಿನ ಸಂಬಂಧ ಕೊಲೆ ನಡೆದಿರುವ ಅನುಮಾನ ಹೆಚ್ಚಾಗಿದೆ. ಅಲ್ಲದೆ ಹಣ ಪಡೆದು ವಂಚಿಸಿರುವ ಆರೋಪ ಸಹ ಕೇಳಿ ಬಂದಿತ್ತು. ಸದ್ಯ ಪೊಲೀಸ್ ಕಮಿಷನರ್ ಹಂತಕರನ್ನು ಹಿಡಿಯಲು 5 ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ. ಸರಳವಾಸ್ತುವಿನಿಂದ ನೊಂದಿರುವ ಕೆಲ ಗ್ರಾಹಕರು ಹಲವು ಭಾರಿ ಗುರೂಜಿಗೆ ಧಮ್ಕಿ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ರೀತಿಯಲ್ಲೂ ಪೊಲೀಸರು ವಿಚಾರಕ್ಕೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ್ ಗುರೂಜಿಯ ಕೊಲೆ ಪ್ರಕರಣ: ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿ ಬಂಧನ
ಇತ್ತೀಚೆಗೆ ಎರಡನೇ ಮದುವೆಯಾಗಿದ್ದ ಚಂದ್ರಶೇಖರ್ ಗುರೂಜಿ ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದ ಚಂದ್ರಶೇಖರ್ ಗುರೂಜಿ, ನಾಲ್ಕು ವರ್ಷ ಹಿಂದೆ ಗೋಕುಲ್ ಗೂರೂಜಿಯಿಂದ ಮನೆ ಖರೀದಿ ಮಾಡಿದ್ದರು. ಹುಬ್ಬಳ್ಳಿಯಲ್ಲಿ ವಿವಿಧ ಆಸ್ತಿಗಳನ್ನ ಮಾರಾಟ ಮಾಡಿದ್ದರು. ಹುಬ್ಬಳ್ಳಿಯ ಕಚೇರಿಯನ್ನ ಮುಚ್ಚಿದ್ದರು. ನೂರಾರು ಉದ್ಯೋಗಿಗಳಿಗೆ ಸಂಬಳ ನೀಡದೆ ಹೊರ ಹಾಕಿದ್ದರು ಎಂದು ತಿಳಿದು ಬಂದಿದೆ.
ಚಂದ್ರಶೇಖರ್ ಗುರೂಜಿಯ 2ನೇ ಪತ್ನಿ ಅಂಕಿತಾ ಶಿವಮೊಗ್ಗ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರೆ ಚಂದ್ರಶೇಖರ್ ಗುರೂಜಿ 2ನೇ ಪತ್ನಿ ಅಂಕಿತಾ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಬಳಿಯ ಹೆಮ್ಮಕ್ಕಿ ಗ್ರಾಮದ ಮೂಲದವರು. ಚಂದ್ರಶೇಖರ್ ಗುರೂಜಿ ತಮ್ಮ ಮೊದಲ ಪತ್ನಿ ಮರಣದ ನಂತರ ಅಂಕಿತಾರನ್ನು ಮದುವೆಯಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಅಂಕಿತಾ ನೆಲೆಸಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ಶಿವರಾಜ್ಕುಮಾರ್ಗೆ ಹೂಮಳೆ ಸ್ವಾಗತ
ಗುರೂಜಿಯನ್ನು ಕೊಂದವರು ಬಾಗಲಕೋಟೆ ಮೂಲದವರು ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದ ಆರೋಪಿಗಳು ಬಾಗಲಕೋಟೆ ಮೂಲದವರು ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಗುರೂಜಿ ಭಕ್ತರಾಗಿದ್ದ ಹಂತಕರು ಇಂದು ಮುಂಜಾನೆ ಗುರೂಜಿಗೆ ಕರೆ ಮಾಡಿ ಭೇಟಿ ಮಾಡುವುದಾಗಿ ಮನವಿ ಮಾಡಿಕೊಂಡಿದ್ದರು. ಸ್ವಾಮೀಜಿ ಹುಬ್ಬಳ್ಳಿಗೆ ಯಾವಾಗ ಬರುತ್ತಾರೆ ಎಂಬ ಮಾಹಿತಿ ಪಡೆದಿದ್ದರು. ಹಾಗೂ 2 ದಿನಗಳ ಹಿಂದೆಯೇ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಇರುವ ಗುರೂಜಿ ಕಚೇರಿಗೆ ಹೋಗಿ ಮಾಹಿತಿ ಪಡೆದಿದ್ದರು. ಇನ್ನು ಮತ್ತೊಂದು ಕಡೆ ಹೋಟೆಲ್ನಲ್ಲಿ ಅರ್ಧ ಗಂಟೆ ಗುರೂಜಿಗಾಗಿ ಕಾದು ಕುಳಿತಿದ್ದ ಹಂತಕರು ಚಂದ್ರಶೇಖರ್ ಗುರೂಜಿ ಬಳಿ ಈಗಾಗಲೇ ಸರಳ ವಾಸ್ತು ಮಾಡಿಸಿಕೊಂಡಿದ್ದರು. ಆರೋಪಿಗಳ ಬಲಿ ವ್ಯಾಪಾರ ವೃದ್ಧಿ ಹೆಸರಿನಲ್ಲಿ ಗುರೂಜಿ ಲಕ್ಷಾಂತರ ಹಣ ಪಡೆದಿದ್ದರು. ಆದ್ರೆ ಯಾವುದೇ ವ್ಯಾಪಾರ ವೃದ್ಧಿಯಾಗಿಲ್ಲ. ಈ ಹಿನ್ನಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಕಾದು ಕೂತಿದ್ದ ಹಂತಕರು ರಿಸಪ್ಷನ್ ಕರೆ ಮಾಡಿದ ಬಳಿಕ ಕೆಳಗೆ ಬಂದಿದ್ದ ಸ್ವಾಮೀಜಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಪೊಲೀಸರು ಸ್ವಾಮೀಜಿ ಕಚೇರಿ ಸಿಸಿಕ್ಯಾಮರಾ ಪರಿಶೀಲಿಸುತ್ತಿದ್ದಾರೆ.
Published On - 2:53 pm, Tue, 5 July 22