ಹಾವೇರಿಗೆ ಹೊಸ ಜೋಡೆತ್ತುಗಳ ಪರಿಚಯಿಸಿದ ಯಡಿಯೂರಪ್ಪ

ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್​ವುಡ್​ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.​ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ. ಜೋಡೆತ್ತು ರೀತಿ ಕೆಲಸ ಮಾಡ್ತಾರೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ […]

ಹಾವೇರಿಗೆ ಹೊಸ ಜೋಡೆತ್ತುಗಳ ಪರಿಚಯಿಸಿದ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Nov 07, 2019 | 6:12 PM

ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್​ವುಡ್​ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.​ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ.

ಜೋಡೆತ್ತು ರೀತಿ ಕೆಲಸ ಮಾಡ್ತಾರೆ:
ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ ನಾನು ಬರುವ ಅವಶ್ಯಕತೆ ಇಲ್ಲ. ಬಣಕಾರ ತಲೆ ತಗ್ಗಿಸೋ ಕೆಲಸ ಮಾಡಲು ಬಿಡೋದಿಲ್ಲ. ಈ ಇಬ್ಬರೂ ನನ್ನೆರಡು ಕಣ್ಣುಗಳು. ಜೋಡೆತ್ತು ರೀತಿಯಲ್ಲಿ ಇಬ್ಬರೂ ಕೆಲಸ ಮಾಡ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ :
ಹಿರೇಕೆರೂರಿನ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಸಿಎಂ ಯಡಿಯೂರಪ್ಪ, ಯಾವುದೇ ತಾಲೂಕಿಗೆ ಕೊಡದಷ್ಟು ಅನುದಾನವನ್ನು ಹಿರೇಕೆರೂರಿಗೆ ಕೊಟ್ಟಿದ್ದೇನೆ ಎಂದರು. U.B.ಬಣಕಾರ, ಬಿ.ಸಿ.ಪಾಟೀಲ್​ ಆಸೆಯಂತೆ ಹಿರೇಕೆರೂರು ಪಟ್ಟಣವನ್ನ ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ. ಮುಂದಿನ ಬಜೆಟ್​ನಲ್ಲಿ ತಾಲೂಕಿನ ಎಲ್ಲ ಬೇಡಿಕೆ ಈಡೇರಿಸುವೆ. ಕೇಂದ್ರ ಮತ್ತು ಎನ್​ಡಿಆರ್​ಎಫ್ ನಿಯಮ ಪಕ್ಕಕ್ಕಿಟ್ಟು ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡುತ್ತೇನೆ. ನನ್ನ ಜೊತೆ ನಮ್ಮ ಸಚಿವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ ಹಣ ಕೊಡುತ್ತೇನೆ ಎಂದು ಬಿಎಸ್​ವೈ ಭರವಸೆ ನೀಡಿದರು.

Published On - 6:00 pm, Thu, 7 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us