AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ʻಮಿಸ್ ಯು ಚಿನ್ನʼ ಅಂತ ಪೋಸ್ಟ್‌ ಮಾಡಿ ಯುವಕ ನೇಣಿಗೆ ಶರಣು: ಅನುಮಾನ ಹುಟ್ಟಿಸಿದ ಹುಡ್ಗಿ ದುಪ್ಟಟ್ಟ

ಆತನಿಗೆ ಇನ್ನೂ ಈಗತಾನೆ 18 ವರ್ಷ ವಯಸ್ಸು. ಆದ್ರೆ ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆಯ ಜೊತೆ ಪ್ರಣಯ ಬೆಳೆಸಿದ್ದನಂತೆ, ಆದ್ರೆ ಇಬ್ಬರ ಮದ್ಯೆ ಅದೇನು ಆಯ್ತೋ ಏನೋ ಕೊನೆಗೆ ಪ್ರೀಯತಮೆಯ ವೇಲ್ ನಿಂದಲೇ ದುರಂತ ಸಾವು ಕಂಡಿದ್ದಾನೆ. ಆದ್ರೆ ಪ್ರಾಣಕಳೆದುಕೊಳ್ಳುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ಮಿಸ್ ಯು ಚಿನ್ನಾ ಅಂತ ಹುಡುಗಿ ಜೊತೆಗಿರುವ ಪೋಟೋ ಸಮೇತ ಪೋಸ್ಟ್ ಹಾಕಿದ್ದಾನೆ. ಹೀಗಾಗಿ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿವೆ.

ʻಮಿಸ್ ಯು ಚಿನ್ನʼ ಅಂತ ಪೋಸ್ಟ್‌ ಮಾಡಿ ಯುವಕ ನೇಣಿಗೆ ಶರಣು: ಅನುಮಾನ ಹುಟ್ಟಿಸಿದ ಹುಡ್ಗಿ ದುಪ್ಟಟ್ಟ
Chiruth Kumar
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Oct 10, 2025 | 7:12 PM

Share

ಚಿಕ್ಕಬಳ್ಳಾಪುರ, (ಅಕ್ಟೋಬರ್ 10): ಯುವಕನೋರ್ವ ತನ್ನ ಅಪ್ರಾಪ್ತೆ ಪ್ರೇಯಸಿ ವೇಲ್​​ ನಿಂದಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಬಳಿ ನಡೆದಿದೆ. ಬಾಲಕುಂಟಹಳ್ಳಿಯ ನಿವಾಸಿ ಚಿರುತ್ ಕುಮಾರ್ ( 18) ಆತ್ಮಹತ್ಯೆಗೆ ಶರಣಾದ ಯುವಕ. ಆದ್ರೆ, ಸಾಯುವ ಮುನ್ನ ಮಿಸ್ ಯು ಚಿನ್ನ ಅಂತ ಹುಡುಗಿ ಜೊತೆಗಿನ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕೆಯ ವೇಲ್ ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರೇಮ ವೈಫಲ್ಯದಿಂದಲೇ ಚಿರುತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ,

ಚಿರುತ್ ಊರಲ್ಲೇ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಇರುವ ಜಮೀನು ಪಕ್ಕದಲ್ಲೇ ಇದ್ದ ಹೊಂಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಸಲಿಗೆ ಚಿರುತ್ ಕುಮಾರ್ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಏನಾಗಿತ್ತು ಎನ್ನುವುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಆತನ ಮೊಬೈಲ್ ಸ್ಟೇಟಸ್ ಹಾಗೂ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ತನ್ನ ಸಾವಿನ ಸುಳಿವು ನೀಡಿದ್ದಾನೆ. ಅಪ್ರಾಪ್ತೆಯ ಜೊತೆ ಇರೊ ಪ್ರೀತಿ-ಪ್ರೇಮದ ಪೋಟೊಗಳನ್ನು ಶೇರ್ ಮಾಡಿದ್ದು, ಮಿಸ್ ಯೂ ಚಿನ್ನಾ ಅಂತ ಬರೆದುಕೊಂಡಿದ್ದಾನೆ. ಹೀಗಾಗಿ ಪ್ರೇಮ ವೈಪಲ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: 3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಲಾಡ್ಜ್​​​ಗೆ ಬಂದು ಹೆಣವಾದಳು: ಬೆಂಕಿ ದುರಂತಕ್ಕೆ ಅಸಲಿ ಕಾರಣ ಬಯಲು

ಇನ್ನೂ ಈ ಹಿಂದೆಯೂ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್ ಮಾಡಿದ್ದನಂತೆ. ಆಗ ಸ್ನೇಹಿತರೇ ಹೋಗಿ ಅವನಿಗೆ ಬುದ್ದಿ ಮಾತು ಹೇಳಿ ಮನೆಗೆ ಕರೆದುಕೊಂಡು ಬಂದಿದ್ದರಂತೆ. ಆದ್ರೆ ಈಗ ಮೂರನೇ ಬಾರಿಗೆ ಚಿರುತ್ ಪ್ರಾಣ ಪಕ್ಷಿ ಹಾರಿಹೋಗಿದ್ದು, ಪೋಷಕರಿಗೆ ದಿಕ್ಕುತೊಚದಂತಾಗಿದೆ. ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ