AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ಭೀಮೇಶ್​​ ಪೂಜಾರ್
| Edited By: |

Updated on: Mar 27, 2026 | 8:49 AM

Share

ರಾಯಚೂರಿನ ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ದರ 5 ರೂ., ಡೀಸೆಲ್ ದರ 3 ರೂ. ಏರಿಕೆಯಾದ ನಂತರ ಗ್ರಾಹಕರು ಬಂಕ್‌ನತ್ತ ಸುಳಿಯುತ್ತಿಲ್ಲ. ದರ ಹೆಚ್ಚಳದಿಂದ ತೊಂದರೆಗೊಳಗಾದ ಬೈಕ್ ಸವಾರರು ನಗರದ ಇತರೆ ಬಂಕ್‌ಗಳತ್ತ ಮುಖ ಮಾಡಿದ್ದಾರೆ. ಕ್ಯಾನ್‌ಗಳಿಗೆ ಇಂಧನ ಮಾರಾಟ ಮಾಡದಂತೆ ಪೊಲೀಸರ ಸೂಚನೆ ನೀಡಿದ್ದಾರೆ.

ರಾಯಚೂರು, ಮಾರ್ಚ್ 27: ನಯಾರಾ ಕಂಪನಿಯ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಇದೀಗ ಆ ಕಂಪನಿ ಬಂಕ್​ಗಳತ್ತ ಗ್ರಾಹಕರೇ ಸುಳಿಯುತ್ತಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆಯಾಗಿದೆ. ಈ ಏಕಾಏಕಿ ದರ ಹೆಚ್ಚಳದಿಂದಾಗಿ ಬೈಕ್ ಸವಾರರು ನಯಾರಾ ಪೆಟ್ರೋಲ್ ಬಂಕ್‌ಗಳಿಂದ ದೂರ ಸರಿಯುತ್ತಿದ್ದಾರೆ. ಬಂಕ್‌ನತ್ತ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ನಯಾರಾ ಪೆಟ್ರೋಲ್ ಬಂಕ್‌ಗಳಿಗೆ ಹೆದ್ದಾರಿ ಮಾರ್ಗವಾಗಿ ಹೋಗುವವರು ಮಾತ್ರ ಭೇಟಿ ನೀಡುತ್ತಿದ್ದಾರೆ. ಉಳಿದ ಬೈಕ್ ಸವಾರರು ನಗರದೊಳಗಿನ ಇತರ ಪೆಟ್ರೋಲ್ ಬಂಕ್‌ಗಳ ಕಡೆಗೆ ಮುಖ ಮಾಡಿದ್ದು, ಅಲ್ಲಿ ಸಂದಣಿ ಹೆಚ್ಚಾಗಿದೆ. 300 ರೂಪಾಯಿಗೆ 3 ಲೀಟರ್ ಪೆಟ್ರೋಲ್ ಸಿಗುತ್ತಿದ್ದ ಜಾಗದಲ್ಲಿ, ಈಗ 315 ರೂಪಾಯಿಗೆ ಕೇವಲ 2.8 ಲೀಟರ್ ಸಿಗುತ್ತಿದೆ ಎಂದು ಬೈಕ್ ಸವಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us